ಬೆಂಗಳೂರು: ಸೆ:17; ರಾಜ್ಯ ಸರ್ಕಾರ ಶನಿವಾರ ಇಬ್ಬರು ಐಎಎಸ್ ಹಾಗೂ ಓರ್ವ ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
ಎಂಎಸ್ಐಎಲ್ ವ್ಯವಸ್ಥಾಪಕ ನಿದೇರ್ಶಕರಾಗಿದ್ದ ಜಿ.ಸಿ ಪ್ರಕಾಶ್ ಅವರನ್ನು ಕಬ್ಬು ಮತ್ತು ಸಕ್ಕರೆ ಅಭಿವೃದ್ದಿ ಆಯುಕ್ತರನ್ನಾಗಿ ನೇಮಿಸಲಾಗಿದೆ.
ಧಾರವಾಡ ವಿಭಾಗದ ಉಪ ವಿಭಾಗಧಿಕಾರಿಯಾಗಿದ್ದ ಎಲ್ ಚಂದ್ರಶೇಖರ್ ನಾಯ್ಕ್ ಅವರನ್ನು ಉತ್ತರ ಕನ್ನಡ ಜಿಲ್ಲಾ ಪಂಚಾಯ್ತೀಯ ಉಪಕಾರ್ಯದರ್ಶಿಯ ಜೊತೆಗೆ ಪ್ರಭಾರ ಸಿಇಒ ಆಗಿಯೂ ವರ್ಗಾವಣೆ ಮಾಡಲಾಗಿದೆ.
ಇನ್ನು ಹಿರಿಯ ಕೆಎಎಸ್ ಅಧಿಕಾರಿ ಮಹೇಶ್ ಖರ್ಜಿಗೆ ಅವರನ್ನು ಧಾರವಾಡ ಉಪವಿಭಾಧಿಕಾರಿಯನ್ನಾಗಿ ನೇಮಿಸಲಾಗಿದೆ.
ವರಂಗಲ್-ತೆಲಂಗಾಣದ ವರಂಗಲ್ ಜಿಲ್ಲೆಯಲ್ಲಿ ಧರ್ಮ ಸಾಗರ್ ಜಲಾಶಯ ವೀಕ್ಷಣೆಗೆ ತೆರಳಿದ್ದ ಐವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.
ಅವಘಡದಲ್ಲಿ ಪ್ರಾಣಾಪಾಯದಿಂದ ಪಾರಾದ ವಿದ್ಯಾರ್ಥಿನಿ ರಮ್ಯ ಪ್ರತ್ಯೂಷ ಮತ್ತಿತರ ಸ್ಥಳೀಯರ ಪ್ರಕಾರ…ವರಂಗಲ್ನ ವಾಗ್ದೇವಿ ಎಂಜನಿಯರಿಂಗ್ ಕಾಲೇಜಿನ ಕೆಲ ವಿದ್ಯಾರ್ಥಿಗಳು ಶನಿವಾರ ವರಂಗಲ್ನಿಂದ ಧರ್ಮ ಸಾಗರ್ಗೆ ಹೋಗಿದ್ದರು. ಇವರಲ್ಲಿ ಶ್ರಾವ್ಯಾರೆಡ್ಡಿ, ಶಿವಸಾಯಿ, ಶಿವ ಸಾಯಿಕೃಷ್ಣ, ವಿನೂತ್ನ, ಸಾಗರ್, ರಮ್ಯ ಪ್ರತ್ಯೂಷ ಎನ್ನುವವರು ಜಲಾಶಯ ವೀಕ್ಷಿಸುತ್ತಿರುವಾಗ ಓರ್ವ ವಿದ್ಯಾರ್ಥಿ ಜಾರಿ ಬಿದ್ದಿದ್ದಾರೆ. ಆತನನ್ನು ಕಾಪಾಡಲು ಹೋಗಿ ಕೆಲವರು ಜಾರಿ ಬಿದ್ದಿದ್ದಾರೆ. ಇವರಲ್ಲಿ ಕೆಲವರು ರಮ್ಯ ಪ್ರತ್ಯೂಷ ಎಂಬುವರನ್ನು ಕಾಪಾಡಿದ್ದಾರೆ.
ಘಟನೆ ಸಂಭವಿಸುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಈಜುಗಾರರನ್ನು ಜಲಾಶಯಕ್ಕಿಳಿಸಿ ನಾಪತ್ತೆಯಾದವರಿಗಾಗಿ ಹುಡಕಾಟ ನಡೆಸಿದ್ದಾರೆ. ಈವರೆಗೆ ಶ್ರ್ಯಾವ್ಯರೆಡ್ಡಿ ಎನ್ನುವವರ ಮೃತದೇಹವನ್ನು ಹೊರಗೆ ತೆಗೆಯಲಾಗಿದೆ. ಉಳಿದವರಿಗಾಗಿ ಶೋಧ ನಡೆದಿದೆ.
Discussion about this post