Read - < 1 minute
ಬೈರುತ್, ಆ.31: ವಿಶ್ವಕ್ಕೆ ಮಾರಕವಾಗಿ ಕಾಡುತ್ತಿರುವ ಐಎಸ್ಐಎಸ್ ಉಗ್ರ ಸಂಘಟನೆಯ ವಕ್ತಾರ ಉಗ್ರ ಅಬು ಮೊಹಮದ್ ಅಲ್ ಅದ್ನಾನಿಯನ್ನು ಅಮೆರಿಕಾ ಸೇನಾಪಡೆಗಳು ಬೇಟೆಯಾಡಿವೆ ಎಂದು ವರದಿಯಾಗಿದೆ.
ಈ ಕುರಿತಂತೆ ಅಂತರ್ರಾಷ್ಟ್ರೀಯ ಮಾಧ್ಯಮವೊಂದು ವರದಿ ಪ್ರಕಟಿಸಿದ್ದು, ಈ ವಿಚಾರದಲ್ಲಿ ಐಎಸ್ಐಎಸ್ ಸಂಘಟನೆಯೇ ಅಬು ಸಾವಿನ ಸುದ್ಧಿಯನ್ನು ದೃಢೀಕರಿಸಿದೆ ಎಂದು ವರದಿಯಾಗಿದೆ.
ಗಲಭೆ ಪೀಡಿತ ಸಿರಿಯಾದಲ್ಲಿ ಐಎಸ್ಐಎಸ್ ಉಗ್ರರ ಆಟಾಟೋಪ ಮುಂದುವರೆದಿರುವಂತೆಯೇ ಅಲ್ ಅರಬ್ ಪ್ರಾಂತ್ಯದಲ್ಲಿ ತನ್ನ ದಾಳಿಯನ್ನು ಮುಂದುವರೆಸಿರುವ ಅಮೆರಿಕ ನೇತೃತ್ವ ಮೈತ್ರಿ ಪಡೆಗಳು ವಾಯುದಾಳಿ ನಡೆಸಿದ್ದು, ಈ ವೇಳೆ ಉಗ್ರ ಸಂಘಟನೆಯ ವಕ್ತಾರ ಎಂದು ಹೇಳಲಾಗುತ್ತಿದ್ದ ಅಬು ಮೊಹಮದ್ ಅಲ್ ಅದ್ನಾನಿ ಸಾವನ್ನಪ್ಪಿದ್ದಾನೆ ಎಂದು ಭದ್ರತಾ ಪಡೆಗಳು ತಿಳಿಸಿವೆ.
೨೦೧೪ರ ಜೂನ್ ತಿಂಗಳಿನಿಂದ ಐಎಸ್ಐಎಸ್ ಉಗ್ರಗಾಮಿ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಅದ್ನಾನಿ, ಉಗ್ರ ಸಂಘಟನೆಯ ಪ್ರಮುಖ ನಾಯನಾಗಿದ್ದ. ಮೂಲತಃ ಸಿರಿಯಾದ ಇದ್ಲಿಬ್ ಪ್ರಾಂತ್ಯದವನಾಗಿದ್ದ ಅದ್ನಾನಿ, ಈ ಹಿಂದೆ ಅಲ್ ಖೈದಾ ಉಗ್ರ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ.
Discussion about this post