Read - < 1 minute
ತುಮಕೂರು: ಸೆ:20: ತುಮಕೂರಿನ ಕರಿಬಸವೇಶ್ವರ ಸ್ವಾಮೀ ಮಠಕ್ಕೆ ಮಾಜಿ ಸಚಿವ ಜನಾರ್ದನರೆಡ್ಡಿ ಭೇಟಿ ನೀಡಿ ಕರಿಬಸವೇಶ್ವರ ಶ್ರೀಗಳ ಆರ್ಶಿವಾದ ಪಡೆದರು.
ಶ್ರೀ ಕರಿಬಸವೇಶ್ವರರ 84 ನೇ ಹುಟ್ಟುಹಬ್ಬ ಹಿನ್ನಲೆಯಲ್ಲಿ ಶುಭಾಷಯ ಕೋರಲು ಮಠಕ್ಕೆ ಆಗಮಿಸಿದ್ದರು. ಈ ವೇಳೆ ಜನಾರ್ಧನ ರೆಡ್ಡಿ ಜೈಲಿಗೆ ಹೋಗಿದ್ದ ದಿನಗಳನ್ನು ನೆನಪಿಸಿಕೊಂಡರು/ ಮತ್ತೆ ಬಳ್ಳಾರಿಗೆ ಹೋಗಿ ಜನರ ಸೇವೆ ಮಾಡುವ ಅವಕಾಶವನ್ನು ದೇವರ ನೀಡಲಿ ಎಂದು ಪ್ರಾರ್ಥನೆ ಮಾಡಿದ್ದೇನೆ ಎಂದು ಹೇಳಿದರು.
5 ವರ್ಷದ ನಂತರ ಶ್ರೀಗಳ ಜೊತೆ ಮಾತನಾಡುತ್ತಿದ್ದೇನೆ ಹಾಗಾಗಿ ಹೆಚ್ಚು ಮಾತನಾಡಲು ಆಗುತ್ತಿಲ್ಲ, ತಮ್ಮ ಆಡಳಿತಾವಧಿಯಲ್ಲಿ ಮಠಾಧೀಶರ ಹಾಗೂ ವರಮಹಾಲಕ್ಷ್ಮೀ ಹಬ್ಬ ಆಚರಣೆಗಳನ್ನು ಅದ್ಧೂರಿಯಾಗಿ ಮಾಡುತ್ತಿದ್ದೆವು ಎಂದು ನೆನಪಿಸಿಕೊಂಡರು.
ವರಮಹಾಲಕ್ಷ್ಮೀ ಹಬ್ಬ ಆಚರಣೆ ಮತ್ತು ಸುಷ್ಮಾಸ್ವರಾಜ್ ಅವರನ್ನು ಕರೆಸಲು ಪ್ರೇರಣೆ ಕೊಟ್ಟಿದ್ದು, ಇದೇ ಶ್ರೀಗಳು ಎಂದು ತಿಳಿಸಿದರು.
Discussion about this post