Read - < 1 minute
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಮೇಲಿಂದ ಮೇಲೆ ಅನ್ಯಾಯವಾಗುತ್ತಲೇ ಇರುವಂತೆ, ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯಲ್ಲೂ ರಾಜ್ಯಕ್ಕೆ ಅನ್ಯಾಯವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಮ್ಮ ನೆರವಿಗೆ ಧಾವಿಸಿರುವುದು ಸ್ವಾಗತಾರ್ಹ ಸಂಗತಿ.
ನಿನ್ನೆಯವರೆಗೂ ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ವಾಗುತ್ತಿದೆ, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಸಹಕಾರಕ್ಕೆ ಕೇಂದ್ರ ಧಾವಿಸುತ್ತಿಲ್ಲ ಎಂದು ತಮ್ಮ ಹುಳುಕನ್ನು ಕೇಂದ್ರದ ಮೇಲೆ ಹೊರಿಸಲು ಯತ್ನಿಸುತ್ತಿದ್ದ ರಾಜ್ಯ ಸರ್ಕಾರ ಈಗ ತಾನೇ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆಯೇ ಎಂಬ ಅನು ಮಾನವನ್ನು ಹುಟ್ಟು ಹಾಕುತ್ತಿದೆ.
ಕಾವೇರಿ ವಿಚಾರದಲ್ಲಿ ಇಂದು ಕರೆದಿದ್ದ ವಿಧಾನ ಮಂಡಲ ಎರಡನೆಯ ವಿಶೇಷ ಅಧಿವೇಶನದಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ, ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸುವ ಅನಿವಾರ್ಯತೆಯಿದೆ ಎಂದು ಹೇಳುವ ಮೂಲಕ ನಾವು ನೀರು ಬಿಡಲು ಸಿದ್ಧರಾಗಿದ್ದೇವೆ ಎಂಬ ಮುನ್ಸೂಚನೆಯನ್ನು ನೀಡಿ, ನಾವು ಇದಕ್ಕೆ ಮಾನಸಿಕ ವಾಗಿ ಸಿದ್ಧರಾಗಿದ್ದೇವೆ ಎಂಬುದನ್ನು ಸಾಕ್ಷೀಕರಿಸಿದ್ದಾರೆ.
ಇದರೊಂದಿಗೆ, ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ವಾಗಲು ಮೂಲ ಕಾರಣಕರ್ತರಾದ ಫಾಲಿ ಎಸ್ ನಾರಿಮನ್ ಹೇಳಿಕೆ ನೀಡಿದ್ದು, ತಮಿಳುನಾಡಿಗೆ ನೀರು ಬಿಟ್ಟರೆ ನಂತರ ಮಾತ್ರ ನಾನು ಕರ್ನಾಟಕದ ಪರ ವಾದ ಮಾಡುತ್ತೇನೆ ಎಂದಿ ದ್ದಾರೆ. ಈ ಮೂಲಕ ತಾವು ಕರ್ನಾಟಕದ ವಿರೋಧವಿದ್ದು, ರಾಜ್ಯದ ಜನರ ತೆರಿಗೆ ಹಣದಿಂದ ಕೋಟಿಗಟ್ಟಲೆ ಸಂಭಾವನೆ ಬಾಚಿಕೊಂಡು, ತಮಿಳುನಾಡು ಪರ ವಾದ ತೆರೆಮರೆಯ ವಾದ ಮಾಡಿಸುತ್ತಿದ್ದೇನೆ ಎಂಬುದನ್ನು ಒಪ್ಪಿಕೊಂಡಂತೆ ಕಾಣುತ್ತಿದೆ.
ನಾರಿಮನ್ ಕಳೆದ ೨೦ ವರ್ಷಗಳಿಂದ ಕಾವೇರಿ ವಿಚಾರದಲ್ಲಿ ರಾಜ್ಯದ ಪರ ವಾದ ಮಾಡುತ್ತಿದ್ದಾರೆ. ಈ ವಿವಾದದ ಇಂಚಿಂಚು ಮಾಹಿತಿಯೂ ಗೊತ್ತಿರುವ ಈ ವ್ಯಕ್ತಿಗೆ ಈ ಬಾರಿ ರಾಜ್ಯದಲ್ಲಿರುವ ಕಾವೇರಿ ಕೊಳ್ಳದಲ್ಲಿ ಮಳೆಯಾಗದೇ, ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಇದೆ ಎಂಬುದು ತಿಳದಿಲ್ಲವೇ? ತಿಳಿದಿಲ್ಲ ಎಂಬುದನ್ನು ನಂಬಲು ಸಾಧ್ಯವಿಲ್ಲ.
ವಾಸ್ತವ ವಿಚಾರಗಳನ್ನು ಸಾಕ್ಷಿ ಸಮೇತ ಸುಪ್ರೀಂಗೆ ಮನವರಿಕೆ ಮಾಡಿಕೊಡಬೇಕಾದ ಈ ಮನುಷ್ಯ, ತಮಿಳು ನಾಡಿಗೆ ನೀರು ಬಿಟ್ಟ ನಂತರವಷ್ಟೇ ನಾನು ಕರ್ನಾಟಕದ ಪರ ವಾದ ಮಾಡುತ್ತೇನೆ ಎಂಬ ದಾಷಟ್ಯೆ ತೋರುತ್ತಾರೆ ಎಂದರೆ, ಇವರ ನಿಜವಾದ ಮುಖವಾಡ ಈಗ ಕಳಚುತ್ತಿದೆ. ೨೦ ವರ್ಷಗಳಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿರುವ ಪ್ರಕರಣದಲ್ಲಿ ವಕೀಲರಾಗಿರುವ ಈ ಅಜ್ಜನನ್ನು ಹೊರ ಹಾಕುವ ಬದಲಾಗಿ, ಸ್ವಂತ ಆಸ್ತಿಯಂತೆ ಪೋಷಿಸುತ್ತಿರುವ ರಾಜ್ಯ ಸರ್ಕಾರ ರಾಜ್ಯವನ್ನೇ ಅಡವಿಡಲು ಹೊರಟಿದೆಯೇ?
ಇದಕ್ಕೆ ಪೂರಕವಾಗಿ, ನೀರು ಬಿಡಲು ಮಾನಸಿಕವಾಗಿ ಸಿದ್ಧರಾಗಿದ್ದೇವೆ ಎಂಬಂತೆ ಹೇಳಿಕೆ ನೀಡಿರುವ ಸಿದ್ಧ ರಾಮಯ್ಯ ಹಾಗೂ ಈ ಮೇಲೆ ಹೇಳೀರುವಂತೆ ನಾರಿಮನ್ ನಿಲುವು ನೋಡಿದರೆ, ಇವರಿಬ್ಬರೂ ಸೇರಿ ಕಾವೇರಿ ಕೊಳ್ಳದ ರೈತರಿಗೆ ಮರಣಶಾಸನ ಬರೆಯುವುದು ನಿಶ್ಚಿತ. ಇಂತಹ ಅನಾಹುತ ಸಂಭವಿಸುವ ಮೊದಲು ನಾರಿಮನ್‌ರನ್ನು ರಾಜ್ಯದಿಂದ ಹೊರದಬ್ಬುವುದು ಲೇಸು.
Discussion about this post