No Result
View All Result
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp
English Articles

Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

by ಕಲ್ಪ ನ್ಯೂಸ್
March 18, 2026
0

Kalpa Media House  |  Manipal | Manipal Institute of Technology (MIT), Manipal, a constituent unit of Manipal Academy of Higher...

Read moreDetails
Bengaluru Gets a World-Class Electronics Co-Innovation Hub as Henkel Launches Advanced Application Center

Bengaluru Gets a World-Class Electronics Co-Innovation Hub as Henkel Launches Advanced Application Center

March 17, 2026
Malnad is a Cultural ‘Gharana’ of Great Minds: Dr. Jayamala at Sahyadri Utsava

Malnad is a Cultural ‘Gharana’ of Great Minds: Dr. Jayamala at Sahyadri Utsava

March 13, 2026
ABB deepens Karnataka footprint with new investments to serve high growth emerging sectors

ABB deepens Karnataka footprint with new investments to serve high growth emerging sectors

March 12, 2026
“Rasamum Rasayanamum- Artistry meets Chemistry”

“Rasamum Rasayanamum- Artistry meets Chemistry”

March 11, 2026
  • Advertise With Us
  • Grievances
  • About Us
  • Contact Us
Thursday, March 19, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಕೆಪಿಎಸ್‌ಸಿಗೆ ಜಾತಿ ಪೆಡಂಭೂತ ಬಿಟ್ಟ ಕಾಂಗ್ರೆಸ್  

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
August 31, 2016
in Army
0
Share on FacebookShare on TwitterShare on WhatsApp
ಸಾಂವಿಧಾನಿಕ ಸಂಸ್ಥೆಯಾಗಿದ್ದರೂ ಲಂಚ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಸೇರಿದಂತೆ ಸ್ವಾರ್ಥ ರಾಜಕಾರಣದ ಪರಾಕಾಷ್ಟೆಯಲ್ಲಿ ಮುಳುಗೇಳುತ್ತಿರುವ ಕರ್ನಾಟಕ ಲೋಕಸೇವಾ ಆಯೋಗಕ್ಕೆ, ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾತಿ ಆಧಾರಿತ ತಜ್ಞರು ಎಂಬ ಪೆಡಂಭೂತವನ್ನು ಬಿಡಲು ಸಿದ್ಧವಾಗಿದೆ.
ಈ ಕುರಿತಂತೆ ವರದಿ ಪ್ರಕಟವಾಗಿದ್ದು, ರಾಜ್ಯ ಸರ್ಕಾರದ ಸ್ವಾರ್ಥ ರಾಜಕಾರಣಕ್ಕೆ ಕನ್ನಡಿ ಹಿಡಿದಂತಾಗಿದೆ. ಗೆಜೆಟೆಡ್ ಪ್ರೊಬೆಷನರ್ಸ್‌ ನೇಮಕಾತಿಯಲ್ಲಿ ಅವ್ಯವಹಾರ ನಡೆದು, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ ನಂತರವೂ ಕೆಪಿಎಸ್‌ಸಿ ಗೆ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿ ವೇಳೆ ವಿವಾದ ಸೃಷ್ಠಿಯಾಗಿತ್ತು.
ಲೋಕಾಯುಕ್ತದಲ್ಲಿ ಪ್ರಕರಣ ಹೊಂದಿರುವ ವ್ಯಕ್ತಿಗಳನ್ನು ಆಯೋಗಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಅಲ್ಲದೇ, ರಾಜಕೀಯ ಹಿನ್ನೆಲೆ ಹೊಂದಿರುವ ವ್ಯಕ್ತಿಯನ್ನು ಆಯೋಗಕ್ಕೆ ನೇಮಕ ಮಾಡಬಾರದು ಎಂಬ ನಿಯಮವಿದ್ದರೂ, ಕಡೆಗಳಿಗೆಯಲ್ಲಿ ಬುದ್ಧಿವಂತಿಕೆ ಪ್ರದರ್ಶಿಸಿದ ಸಿದ್ಧರಾಮಯ್ಯ ವಿ.ಆರ್. ಸುದರ್ಶನ್ ಅವರ ಹೆಸರು ಶಿಫಾರಸ್ಸು ಮಾಡಿದ್ದರು. ಆ ವೇಳೆ ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಹಾಗೂ ಕೆಪಿಎಸ್‌ಸಿ ವಿರುದ್ಧ ಆರೋಪಗಳು ಹೆಚ್ಚಾದ ಹಿನ್ನೆಲೆಯಲ್ಲಿ ಹೇಳಿಕೆ ನೀಡಿದ್ದ ಸಿದ್ದರಾಮಯ್ಯ ಇನ್ನು ಮುಂದೆ ಕೆಪಿಎಸ್‌ಸಿಯನ್ನು ಲಂಚರಹಿತವಾಗಿ ಮಾಡುವುದು ಮಾತ್ರವಲ್ಲದೇ, ಸ್ವಚ್ಛಗೊಳಿಸುತ್ತೇನೆ ಎಂದು ವೀರಾವೇಶದಿಂದ ಹೇಳಿದ್ದರು.
ಆದರೆ ಈಗ, ಸಾಮಾಜಿಕ ನ್ಯಾಯ ಎಂಬ ಮುಖವಾಡವನ್ನು ಕೆಪಿಎಸ್‌ಸಿಗೆ ಹೊದ್ದಿಸಲು ಯತ್ನಿಸಿ, ಅದರ ಹಿಂದೆ ಭ್ರಷ್ಟಾಚಾರ ಹಾಗೂ ಸ್ವಜನಪಕ್ಷಪಾತದ ಕರಾಳಮುಖವನ್ನು ರೂಪಿಸಹೊರಟಿರುವುದು ನಿಜಕ್ಕೂ ದುರಾದೃಷ್ಠದ ಸಂಗತಿ.
ಕೆಪಿಎಸ್‌ಸಿಯಲ್ಲಿನ ನೇಮಕಾತಿಯಲ್ಲಿ ಸಂದರ್ಶನದ ವಿಚಾರದಲ್ಲೇ ಭ್ರಷ್ಟಾಚಾರ ಆರೋಪ ಎಂದಿಗೂ ಕೇಳಿಬರುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲಿ ಸಂದರ್ಶನದ ಗತಿಯನ್ನೇ ಬದಲಿಸುವಂತಹ ನಿರ್ಧಾರ ಕೈಗೊಳ್ಳುವುದು ನೇಮಕಾತಿಯ ವಿಶ್ವಾಸಾರ್ಹತೆ ಪ್ರಶ್ನಿಸುವುದಿರಲಿ, ಇದರ ನೈತಿಕತೆಯೇ ಪ್ರಶ್ನಾರ್ಹವಾಗುತ್ತದೆ.
ಪ್ರಮುಖವಾಗಿ ಹೋಟಾ ಸಮಿತಿಯ ಶಿಫಾರಸ್ಸಿನಂತೆ ಸಂದರ್ಶನದ ಸಮಯದಲ್ಲಿ ತಜ್ಞರ ಸಮಿತಿಯನ್ನು ನೇಮಕ ಮಾಡಬೇಕು, ಸಂದರ್ಶನ ಸಮಿತಿಯಲ್ಲಿರುವವರು ಶೈಕ್ಷಣಿಕ ಹಿನ್ನೆಲೆಯಲ್ಲಿರಬೇಕು. ಈ ಹಿನ್ನೆಲೆಯಲ್ಲಿ ಕೆಪಿಎಸ್‌ಸಿಗೆ ರಾಜಕೀಯ ಪ್ರೇರಿತವಾಗಿ ನೇಮಕವಾದ ಸದಸ್ಯರಿಗೆ ಸಂದರ್ಶನದಲ್ಲಿ ಯಾವುದೇ ರೀತಿಯ ಪ್ರಾಧಾನ್ಯತೆ ದೊರೆಯುವುದಿಲ್ಲ. ಹೀಗಾಗಿ, ಹಿಂಭಾಗಿಲಿನಿಂದ ದುಡ್ಡು ಮಾಡುವ ದಂಧೆಯನ್ನಾಗಿ ಈ ಸಂದರ್ಶನವನ್ನು ಮುಂದುವರೆಸಲು ರಾಜ್ಯ ಸರ್ಕಾರ ಈ ರೀತಿಯ ನಿರ್ಧಾರಕ್ಕೆ ಬಂದಿದೆ ಎನ್ನುವುದು ಸ್ಪಷ್ಟ.
ಹೋಟಾ ಸಮಿತಿಯ ಶಿಫಾರಸ್ಸಿನಂತೆ ಹಾಲಿ ಅಧ್ಯಕ್ಷರು ಹಾಗೂ ಸದಸ್ಯರು ಸಂದರ್ಶನ ನಡೆಸುವಂತಿಲ್ಲ. ಈಗಾಗಲೇ ಕೇಂದ್ರ ಲೋಕಸೇವಾ ಆಯೋಗದಲ್ಲಿರುವಂತೆ ಹಿರಿಯ ಸದಸ್ಯ ಸೇರಿದಂತೆ ನಾಲ್ವರು ತಜ್ಞರು ಸಮಿತಿಯಲ್ಲಿರುತ್ತಾರೆ. ಯುಪಿಎಸ್‌ಸಿ ಮಟ್ಟಿಗೆ ನೋಡುವುದಾದರೆ, ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು, ಭ್ರಷ್ಟಾಚಾರ ರಹಿತವಾಗಿ  ನೇಮಕಾತಿ ಪ್ರಕ್ರಿಯೆಯನ್ನು ನಡೆಸುತ್ತಿರುವುದರ ಪರಿಣಾಮ, ದಕ್ಷ ಅಧಿಕಾರಿಗಳು ಅಧಿಕಾರಶಾಹಿಯಲ್ಲಿ ಸೇರ್ಪಡೆಗೊಳ್ಳುತ್ತಿದ್ದಾರೆ.
ಆದರೆ, ಈಗಾಗಲೇ ಲಂಚ ಹಾಗೂ ಸ್ವಜನಪಕ್ಷಪಾತದಲ್ಲಿ ಮಿಂದೇಳುತ್ತಿರುವ ಕೆಪಿಎಸ್‌ಸಿಯನ್ನು ಶುದ್ಧಿಕರಿಸುವುದು ಬಿಟ್ಟು, ಜಾತಿ ಆಧಾರಿತವಾಗಿ ತಜ್ಞರ ಸಮಿತಿಯನ್ನು ನೇಮಕ ಮಾಡಲು ಹೊರಟಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ವ್ಯವಸ್ಥೆಯನ್ನು ಏನು ಮಾಡಲು ಹೊರಟಿದೆ.
ರಾಜ್ಯ ಸರ್ಕಾರಿ ವ್ಯವಸ್ಥೆಯಲ್ಲಿ ಪ್ರಮುಖ ಭಾಗವಾಗಬಲ್ಲ ಗೆಜೆಟೆಡ್ ಪ್ರೊಬೇಷನರ್ಸ್‌ ಹುದ್ದೆಗಳ ನೇಮಕಾತಿ ಅತ್ಯಂತ ಪಾರದರ್ಶಕ ಹಾಗೂ ಸ್ವಜನ ಪಕ್ಷಪಾತದಿಂದ ಮುಕ್ತವಾಗಿದ್ದರೆ ಮಾತ್ರ ಉತ್ತಮ ವ್ಯಕ್ತಿಗಳು ಅಧಿಕಾರಿಗಳಾಗಿ ಹೊರಬರಲು ಸಾಧ್ಯ.
ಆದರೆ, ಇದರಲ್ಲೂ ಜಾತಿ ಆಧಾರಿತವಾಗಿ ತಜ್ಞರ ನೇಮಕಾತಿಯನ್ನು ಸರ್ಕಾರ ಮಾಡಹೊರಟಿದೆ ಎಂದರೆ, ಇದೇನು ಎಸ್‌ಡಿಎಂಸಿ ಕಮಿಟಿಯೇ ಅಥವಾ ಸಾರ್ವಜನಿಕ ಜಾತ್ರಾ ಸಮಿತಿಯೇ ಸಾಮಾಜಿಕ ನ್ಯಾಯ ಎನ್ನಲು.
ಹಳ್ಳಹಿಡಿದು ಹೋಗಿರುವ ವ್ಯವಸ್ಥೆಯನ್ನು ಸರಿಪಡಿಸಲು ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳ ಅಗತ್ಯವಿದೆಯೇ ಹೊರತು ಜಾತಿ ಆಧಾರಿತ ವ್ಯಕ್ತಿಗಳಲ್ಲ. ಯಾವುದೇ ವರ್ಗಕ್ಕೆ ಸೇರಿದ ವ್ಯಕ್ತಿಯಾಗಿದ್ದರೂ ಇಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕತೆಯೇ ಮುಖ್ಯವಾಗುತ್ತದೆ. ಸರ್ಕಾರ ಚಿಂತನೆಯಂತೆ ಜಾತಿ ಆಧಾರಿತವಾಗಿ ತಜ್ಞರ ನೇಮಕಾತಿ ಆಗಿದ್ದೇ ಆದಲ್ಲಿ, ಇದರಲ್ಲಿ  ಸ್ವಜನ ಪಕ್ಷಪಾತ ನಡೆಯುವುದಿಲ್ಲ ಎಂಬ ಖಾತರಿಯೇನು?
ಸಂವಿಧಾನದ ಪೀಠಿಕೆಯಲ್ಲೇ ಭಾರತವನ್ನು ಜಾತ್ಯತೀತ ರಾಷ್ಟ್ರ ಎಂದು ಹೇಳಲಾಗಿದ್ದರೂ, ಪ್ರತಿಯೊಂದರಲ್ಲೂ ಜಾತಿ ಹಾಗೂ ಧರ್ಮವೇ ಇಂದು ಮುಖ್ಯವಾಗಿರುವುದಕ್ಕೆ ರಾಜಕಾರಣದಲ್ಲಿ ಜಾತಿ ಬೆರೆತಿರುವುದೇ ಕಾರಣ. ಆದರೆ, ರಾಜ್ಯ ಆಡಳಿತಶಾಹಿ ವ್ಯವಸ್ಥೆಯಲ್ಲಿ ಪ್ರಮುಖ ಭಾಗವಾಗುವ ಗೆಜೆಟೆಡ್ ಪ್ರೊಬೆಷನರ್ಸ್‌ ನೇಮಕಾತಿ ಸಮಿತಿಯ ತಜ್ಞರ ಸಮಿತಿ ನೇಮಕಾತಿಯಲ್ಲೇ ಈ ರೀತಿ ಜಾತಿ ಎಂಬ ಪೆಡಂಭೂತವನ್ನು ಬಿಟ್ಟಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಇನ್ನಾವ ರೀತಿಯ ಸಾಮಾಜಿಕ ನ್ಯಾಯ ಒದಗಿಸುತ್ತದೆ? ಇಂತಹ ಗುರುತರ ಹಾಗೂ ಸೂಕ್ಷ್ಮ ನೇಮಕಾತಿಯಲ್ಲೂ ಜಾತಿ ಎನ್ನುವ ಕಾಂಗ್ರೆಸ್, ಗಡಿಯಲ್ಲಿ ಶತ್ರುಗಳ ವಿರುದ್ಧ ಮುನ್ನುಗ್ಗಿ ಹೋರಾಡಲು ಜಾತಿ ಆಧಾರಿತ ಮೀಸಲಾತಿ ನೀಡಿ ಎಂದು ಪ್ರಯತ್ನಪಡುವುದಿಲ್ಲವೇಕೆ?
ಒಟ್ಟಿನಲ್ಲಿ ಈಗಾಗಲೇ ಕುಲಗೆಟ್ಟು ಹೋಗಿ, ಭ್ರಷ್ಟಾಚಾರದ ಕೂಪವಾಗಿರುವ ಕೆಪಿಎಸ್‌ಸಿಯನ್ನು ಮತ್ತಷ್ಟು ಪಾತಾಳಕ್ಕೆ ತಳ್ಳಿ, ವೋಟ್‌ಬ್ಯಾಂಕ್‌ನ್ನು ಗಟ್ಟಿ ಮಾಡಿಕೊಳ್ಳಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎನ್ನುವುದು ಸ್ಪಷ್ಟ.
Share196Tweet123Send
Previous Post

ಟಾಟಾ ಗೋಲ್ಡ್‌ಪ್ಲಸ್: ಡೈಮಂಡ್ ಆಭರಣಗಳ ಮೇಲೆ ಕೊಡುಗೆ

Next Post

ಟಾಟಾ ಸಿಂಗೂರು ಡೀಲ್ ರದ್ದು: ಎಡಪಕ್ಷಗಳಿಗೆ ಸುಪ್ರೀಂನಿಂದ ಮುಖಭಂಗ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಟಾಟಾ ಸಿಂಗೂರು ಡೀಲ್ ರದ್ದು: ಎಡಪಕ್ಷಗಳಿಗೆ ಸುಪ್ರೀಂನಿಂದ ಮುಖಭಂಗ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಛಾಯಾಗ್ರಹಣ ಕ್ಷೇತ್ರದ ವಿಶ್ವಾಸಾರ್ಹ ಹೆಸರು ಕರಾವಳಿಯ ಉದಯ್‌ ಶಂಕರ್ ಪಡಿಯಾರ್

ಛಾಯಾಗ್ರಹಣ ಕ್ಷೇತ್ರದ ವಿಶ್ವಾಸಾರ್ಹ ಹೆಸರು ಕರಾವಳಿಯ ಉದಯ್‌ ಶಂಕರ್ ಪಡಿಯಾರ್

March 19, 2026
National Safety Week 2026 Observed at Carriage Repair Workshop, Hubballi

National Safety Week 2026 Observed at Carriage Repair Workshop, Hubballi

March 18, 2026
7 ತಿಂಗಳಲ್ಲಿ 355 ವಿಶೇಷ ರೈಲುಗಳ ಸಂಚಾರದಿಂದ ನೈಋತ್ಯ ರೈಲ್ವೆ ಗಳಿಸಿದ್ದು ಎಷ್ಟು ಕೋಟಿ ಆದಾಯ?

ಹುಬ್ಬಳ್ಳಿ | ರೈಲ್ವೆ ಇಲಾಖೆ ಪರೀಕ್ಷೆ ಮುಂದೂಡಿಕೆ

March 18, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

ಯುಗಾದಿ ಹಬ್ಬ ಹಿನ್ನೆಲೆ: ಯಶವಂತಪುರ ಮತ್ತು ಹೊಸಪೇಟೆ ನಡುವೆ ವಿಶೇಷ ರೈಲು ಸೇವೆ

March 18, 2026
ನವೋದಯ ಪ್ರವೇಶ ಪರೀಕ್ಷೆ | ಅಪೂರ್ವಗೆ ಉತ್ತಮ ಅಂಕ

ನವೋದಯ ಪ್ರವೇಶ ಪರೀಕ್ಷೆ | ಅಪೂರ್ವಗೆ ಉತ್ತಮ ಅಂಕ

March 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL