No Result
View All Result
Henkel appoints Pradhyumna Ingle as Country President for India
English Articles

Henkel appoints Pradhyumna Ingle as Country President for India

by ಕಲ್ಪ ನ್ಯೂಸ್
June 26, 2026
0

Kalpa Media House  |  Bengaluru  | Henkel has appointed Pradhyumna Ingle as Country President for India, reinforcing the company's commitment...

Read moreDetails
66% of Indians Face Health & Wellness Scams: McAfee Report Raises Alarm

66% of Indians Face Health & Wellness Scams: McAfee Report Raises Alarm

June 25, 2026
Indian Railway Fine Hike

Jan Vishwas Act 2026: Revised Railway Penalty Rules Likely from July 1

June 23, 2026
International Yoga Day in SWR Bengaluru

SWR | Celebrates International Yoga Day with Enthusiastic Participation

June 23, 2026
MODEL DEMOCRACY AT KRCS

Model Democracy At KRCS | Student Council Election Concluded Successfully

June 22, 2026
  • Advertise With Us
  • Grievances
  • About Us
  • Contact Us
Friday, June 26, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಖ್ಯಾತ ಮನೋವೈದ್ಯ ಡಾ. ಅಶೋಕ್ ಪೈ ಇನ್ನಿಲ್ಲ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 30, 2016
in Army
0
Share on FacebookShare on TwitterShare on WhatsApp
ಶಿವಮೊಗ್ಗ, ಸೆ.30:  ನಗರದ ಖ್ಯಾತ ಮನೋವೈದ್ಯ ಡಾ. ಅಶೋಕ್ ಪೈ ಇಂದು ಮುಂಜಾನೆ ಸ್ಕಾಟ್ಲೆಂಡ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 68 ವರ್ಷವಾಗಿತ್ತು.
ವೈದ್ಯಕೀಯ ಸಮಾವೇಶದ ನಿಮಿತ್ತ ಸ್ಕಾಟ್ಲೆಂಡ್‌ಗೆ ಅವರು 5 ದಿನಗಳ ಹಿಂದೆಯೇ ಪತ್ನಿ ಡಾ. ರಜನಿ ಪೈ ಜೊತೆ ತೆರಳಿದ್ದರು. ನಿನ್ನೆ ಸಮಾವೇಶ ಮುಗಿಸಿ ವಸತಿ ಹೂಡಿದ್ದ ಕೊಠಡಿಗೆ  ಬಂದ ನಂತರ ಹೃದಯಾಘಾತ ಸಂಭವಿಸಿತ್ತು. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರೊಳಗಾಗಿಯೇ ಅವರು ಸಾವನ್ನಪ್ಪಿದ್ದರು.
ಇಂದು ಮಧ್ಯಾಹ್ನ ಶವದ ಮರಣೋತ್ತರ ಪರೀಕ್ಷೆ ನಡೆದಿದ್ದು, ನಂತರ ಶವವನ್ನು ಭಾರತಕ್ಕೆ ತರಲು ಎಲ್ಲ ಸಿದ್ಧತೆ ನಡೆದಿದೆ. ನಾಳೆ ಸಂಜೆ ಅಥವಾ ನಾಡಿದ್ದು ಶಿವಮೊಗ್ಗಕ್ಕೆ ಮೃತದೇಹ ಬರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಡಾ ಅಶೋಕ್ ಪೈ ಅವರು ನಗರದ ಖ್ಯಾತ ವಕೀಲರಾಗಿದ್ದ  ಕಟೀಲು ಅಪ್ಪುರಾವ್ ಪೈ ಅವರ ಪುತ್ರರ‌್ರಾಗಿದ್ದಾರೆ. ತಾಯಿ ವಿನೋದಿನಿ ಪೈ. ೧೯೪೬ರ ಡಿಸೆಂಬರ್ ೩೦ರಂದು ಅಶೋಕ್ ಪೈ ಜನನ. ಆನಂತರ ಮೇರಿ ಇಮ್ಯಾಕ್ಯುಲೇಟ್ ವಿದ್ಯಾಸಂಸ್ಥೆಯಲ್ಲಿ ಪ್ರ್ರಾಥಮಿಕ ಶಿಕ್ಷಣ ಪಡೆದರು. ಡಿವಿಎಸ್ ಮತ್ತು ಸಹ್ಯಾದ್ರಿ ಕಾಲೇಜಿನಲ್ಲಿ ಓದು ಮುಂದುವರೆಸಿ ಪದವಿ ಪಡೆದರು. ಬೆಳಗಾವಿಯ ಜವಾಹರಲಾಲ್ ನೆಹರೂ ಮೆಡಿಕಲ್ ಕಾಲೇಜಿನಿಂದ ವೈದ್ಯಕೀಯ ಪದವಿ, ನಿಮ್ಹಾನ್ಸ್‌ನಲ್ಲಿ  ಮಾನಸಿಕ ಆರೋಗ್ಯದ ಬಗ್ಗೆ ಸ್ನಾತಕೋತ್ತರ ಅಧ್ಯಯನ ಮಾಡಿದ್ದರು. ಬಿಹೇವಿಯರಲ್ ಮೆಡಿಸಿನ್, ಕೌನ್ಸೆಲಿಂಗ್, ಫಿಸಿಯೋಥೆರಪಿ ಬಗ್ಗೆ ಅಮೆರಿಕದ ಡಲ್ಲಾಸ್‌ನಲ್ಲಿ ಅಧ್ಯಯನ ಮಾಡಿದ್ದಾರೆ.
ಇವರ ಪತ್ನಿ ಡಾ. ರಜಿನಿ ಪೈ ಸಹ ಮಾನಸಾ ಆಸ್ಪತ್ರೆಯಲ್ಲಿ ವೈದ್ಯೆ. ಏಕೈಕ ಮಗಳು ಡಾ. ಪ್ರೀತಿ ಪೈ ಇದೇ ಆಸ್ಪತ್ರೆಯಲ್ಲಿ ಫಿಸಿಯಾಸಿಸ್ಟ್ ಆಗಿದ್ದಾರೆ.ಸಹೋದರ ಮುಕುಂದ್ ಪೈ, ಮೊಮ್ಮಕ್ಕಳು ಮತ್ತು ಅಪಾರ ಬಂಧುವರ್ಗ, ಮಿತ್ರರನ್ನು ಅಶೋಕ್ ಪೈ ಅಗಲಿದ್ದಾರೆ.
ಮನೋವೈದ್ಯ ಅಶೋಕ್ ಪೈ ಅವರ ನಿಧನ ಇಡೀ ದೇಶಕ್ಕಾದ ನಷ್ಟ ಎಂದು ಚಿತ್ರನಟ ರಮೇಶ್ ಭಟ್ ಅಭಿಪ್ರಾಯಪಟ್ಟರು.
ಪೈ ಅವರ ನಿಧನದ ಹಿನ್ನೆಲೆಯಲ್ಲಿ ಟೈಮ್ಸ್ ಕನ್ನಡದೊಂದಿಗೆ ಮಾತನಾಡಿದ ಅವರು,  ಬೆಳ್ಳಂಬೆಳಗ್ಗೆ ಸುದ್ಧಿ ತಿಳಿದು ಆಘಾತವಾಯಿತು. ಅಶೋಕ್ ಪೈ ಓರ್ವ ಉತ್ಸಾಹಿ ವ್ಯಕ್ತಿತ್ವದವರು. ಎಂತಹ ಜಡ ವ್ಯಕ್ತಿತ್ವದಲ್ಲೂ ಚೈತನ್ಯ ಮೂಡಿಸುವ ವ್ಯಕ್ತಿಯಾಗಿದ್ದರು. ವೃತ್ತಿಯಲ್ಲಿ ಮನೋವೈದ್ಯರಾಗಿದ್ದರೂ ತಮ್ಮ ವೃತ್ತಿಯ ಹೊರತಾಗಿ ಸಾಮಾಜಿಕ, ಸಾಂಸ್ಕೃತಿಕ, ಸಿನಿಮಾ, ಕಲೆ, ಸಾಹಿತ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಇವರ ಸಾಧನೆ ಇಡೀ ರಾಜ್ಯಕ್ಕೇ ಸ್ಪೂರ್ತಿದಾಯಕವಾದುದು ಎಂದರು. ತಮ್ಮಲ್ಲಿ ಬರುವ ಮಾನಸಿಕ ಅಸ್ವಸ್ಥರನ್ನು ಗುಣಪಡಿಸಿ, ಆನಂತರ ಅವರಿಗೊಂದು ಬದುಕು ಕಟ್ಟಿಕೊಡುತ್ತಿದ್ದ ಪೈ ಅವರ ಸೇವೆಗೆ ಸರಿಸಾಟಿಯಲ್ಲ ಎಂದರೆ ಅತಿಶಯೋಕ್ತಿಯಲ್ಲ ಎಂದರು.
ಒಮ್ಮೆ ಅವರ ಜೊತೆ ಮಾತನಾಡಿದರೆ ಸಾಕು, ಜೀವನದ ಕೊನೆಯವರೆಗೂ ಎಂತಹವರಲ್ಲೂ ಆತ್ಮವಿಶ್ವಾಸ, ಭರವಸೆ ಮಾಡಿಸುವ ವ್ಯಕ್ತಿತ್ವವನ್ನು ಹೊಂದಿದ್ದ ಪೈ ಅವರ ನಿಧನ ನಿಧನ ರಾಜ್ಯಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ತುಂಬಲಾರದ ನಷ್ಟ ಎಂದು ತೀವ್ರ ದುಃಖ ವ್ಯಕ್ತಪಡಿಸಿದರು.
ಅಶೋಕ್ ಪೈ ಅವರೊಂದಿಗೆ ಮೊನ್ನೆ ಮಾತನಾಡಿದ್ದೆ. ಮನಮಂಥನ ಚಿತ್ರ ಬಿಡುಗಡೆ ಕುರಿತು ಬಹಳ ಸಮಯ ಚರ್ಚೆ ನಡೆಸಿದ್ದೆ. ಆದರೆ, ಇಂದು ಅವರಿಲ್ಲ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಚಿತ್ರ ನಟ ಹಾಗೂ ನಿರ್ದೇಶಕ ಸುರೇಶ್ ಹೆಬ್ಳಿಕರ್ ಅಶೋಕ್ ಪೈ ಅವರನ್ನು ನೆನದರು.
ಟೈಮ್ಸ್ ಕನ್ನಡದೊಂದಿಗೆ ಮಾತನಾಡಿದ ಅವರು, ಪೈ ಅತ್ಯಂತ ಸ್ನೇಹ ಜೀವಿಯಾಗಿದ್ದರು. ವೈದ್ಯರಾಗಿ ಅವರ ಸಾಮಾಜಿಕ ಕಳಕಳಿ ಇಡೀ ದೇಶಕ್ಕೇ ಮಾದರಿಯಾದುದು. ಇಂತಹ ವ್ಯಕ್ತಿಗಳು ಸಮಾಜದಲ್ಲಿ ತೀರಾ ವಿರಳ. ಮಾನಸ ಆಸ್ಪತ್ರೆಯಲ್ಲಿ ಪ್ರತಿದಿನ ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡುವ ಜೊತೆಯಲ್ಲಿ, ಗುಣಮುಖರಾದ ನಂತರ ಅವರಿಗೊಂದು ಬದುಕು ಕಟ್ಟಿಕೊಡುವ ಕಾರ್ಯ ಮಾಡುತ್ತಿದ್ದ ಪೈ, ಆಶಾ ಕಿರಣದ ಮೂಲಕವೂ ತಮ್ಮ ಸಮಾಜ ಸೇವೆ ಮಾಡುತ್ತಿದ್ದುದು ಮಾದರಿಯಾಗಿದೆ ಎಂದರು.
ಕಾವೇರಿ ವಿಚಾರ ಸರಿಯಾದ ನಂತರ ಅಕ್ಟೋಬರ್ ವೇಳೆಗೆ ಚಿತ್ರ ಬಿಡುಗಡೆ ಮಾಡಬೇಕು ಎಂಬ ಉದ್ದೇಶವನ್ನು ಹೊಂದಿದ್ದೆವು. ಆದರೆ, ಈಗ ಅವರ ಅಗಲಿಕೆ ನಮ್ಮನ್ನು ದುಃಖ ಕಡಲಿನಲ್ಲಿ ತಳ್ಳಿದೆ ಎಂದು ದುಃಖಿಸಿದರು.
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಪದ್ಮಾವತಿಯ ಸ್ವರ್ಗಕ್ಕೆ ನರಕದರ್ಶನ ಮಾಡಿಸಿದ ಭಾರತೀಯ ಸೇನೆ!

Next Post

ಅ.4ರೊಳಗೆ ನಿರ್ವಹಣಾ ಮಂಡಳಿ ರಚಿಸಿ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಆದೇಶ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಅ.4ರೊಳಗೆ ನಿರ್ವಹಣಾ ಮಂಡಳಿ ರಚಿಸಿ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಆದೇಶ

Leave a Reply Cancel reply

Your email address will not be published. Required fields are marked *

No Result
View All Result
Henkel appoints Pradhyumna Ingle as Country President for India
English Articles

Henkel appoints Pradhyumna Ingle as Country President for India

by ಕಲ್ಪ ನ್ಯೂಸ್
June 26, 2026
0

Kalpa Media House  |  Bengaluru  | Henkel has appointed Pradhyumna Ingle as Country President for India, reinforcing the company's commitment...

Read moreDetails
66% of Indians Face Health & Wellness Scams: McAfee Report Raises Alarm

66% of Indians Face Health & Wellness Scams: McAfee Report Raises Alarm

June 25, 2026
Indian Railway Fine Hike

Jan Vishwas Act 2026: Revised Railway Penalty Rules Likely from July 1

June 23, 2026
International Yoga Day in SWR Bengaluru

SWR | Celebrates International Yoga Day with Enthusiastic Participation

June 23, 2026
MODEL DEMOCRACY AT KRCS

Model Democracy At KRCS | Student Council Election Concluded Successfully

June 22, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL