ಕಾನ್ಪುರ: ಆ;29: ಈಜಿನಲ್ಲಿ ಮೀನುಮರಿ ಎಂದೇ ಹೆಸರಾಗಿರುವ 11 ವರ್ಷದ ಶ್ರದ್ಧಾ ಶುಕ್ಲ ಗಂಗಾನದಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾನ್ಪುರದಿಂದ ವಾರಣಾಸಿವರೆಗಿನ 550 ಕಿ.ಮೀ ದೂರವನ್ನು 70 ಗಂಟೆಗಳಲ್ಲಿ ಈಜಿ ದಾಖಲೆ ಮಾಡಲು ಹೊರಟಿದ್ದಾಳೆ.
ರಾಷ್ಟ್ರೀಯ ಕ್ರೀಡಾ ದಿನ(ಆ.29)ವಾದ ಇಂದು ಇಲ್ಲಿನ ಮಸಾಕರ್ ಘಾಟ್ನಿಂದ ಗಂಗೆಗೆ ಇಳಿದಿದ್ದು , 10 ದಿನಗಳಲ್ಲಿ ವಾರಣಾಸಿ ತಲುಪಿದ್ದಾಳೆ. ಅಂದರೆ ದಿನಕ್ಕೆ ಸರಾಸರಿ 7 ತಾಸುಗಳು ನದಿಯಲ್ಲಿ ಈಜಲಿದ್ದಾಳೆ.
ಇಂದು ಬೆಳಗ್ಗೆ ನದಿ ದಂಡೆಯಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನು ನಡೆಸಿದ ನಂತರ ವೇದಘೋಷಗಳ ನಡುವೆ “ಗಂಗಾ ನದಿಯನ್ನು ಸ್ವಚ್ಛಗೊಳಿಸಿ’ ಎಂಬ ಘೋಷವಾಕ್ಯದೊಂದಿಗೆ ಮಳೆಯಿಂದ ತುಂಬಿ ಹರಿಯುತ್ತಿರುವ ಗಂಗೆಯಲ್ಲಿ ಇಳಿದು ಈಜಲಾರಂಭಿಸಿದಳು.
ಕಾನ್ಪುರದ ಮೆಸಾಕರ್ ಘಾಟ್ನಿಂದ ಮೊದಲ ದಿನವಾದ ಇಂದು ಸುಮಾರು 100 ಕಿ.ಮೀ ದಾರಿಯನ್ನು ಈ 11ರ ಪೋರಿ ಕ್ರಮಿಸಲಿದ್ದಾಳೆ. ಶ್ರದ್ದಾ ಶುಕ್ಲ 2014ರಲ್ಲೇ ಕಾನ್ಪುರದಿಂದ ಅಲಹಾಬಾದ್ವರೆಗಿನ 282 ಕಿ.ಮೀ ದೂರ ಈಜಿದ್ದಳು.
Discussion about this post