Read - < 1 minute
ನವದೆಹಲಿ, ಆ.31: ಬಲೂಚಿಸ್ತಾನ ಹೋರಾಟ ಕುರಿತಂತೆ ಹೋರಾಟಗಾರರ ಬೆಂಬಲಕ್ಕೆ ಪ್ರಧಾನಿ ನರೇಂದ್ರ ಮೋದಿ ನಿಂತ ನಂತರ ಬಲೂಚಿಸ್ತಾನದಲ್ಲಿ ಪಾಕ್ ಸೈನಿಕರ ಅಮಾನುಶ ಕೃತ್ಯಗಳು ಅತಿರೇಕಕ್ಕೆ ಹೋಗುತ್ತಿವೆ.
ಬಲೂಚಿಸ್ತಾನದಲ್ಲಿ ಪಾಕ್ ಸೇನೆ ದಮನಕಾರಿ ನೀತಿಯನ್ನು ಅನುಸರಿಸುತ್ತಿದ್ದು, ಇಲ್ಲಿನ ಜನರ ಮೇಲೆ ಮಾರಕವಾದ ರಾಸಾಯನಿಕ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದು, ಇಲ್ಲಿನ ಜನರು ಅಕ್ಷರಶಃ ನರಕವನ್ನು ಅನುಭವಿಸುತ್ತಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಇಲ್ಲಿನ ಮಾನವ ಹಕ್ಕು ಹೋರಾಟಗಾರರು, ಬಲೂಚಿಗಳ ಮಾನವ ಹಕ್ಕನ್ನು ಪಾಕ್ ಸೇನೆ ನಿರ್ದಯವಾಗಿ ಹತ್ತಿಕ್ಕುತ್ತಿದೆ. ಇದು ಅಕ್ಷಮ್ಯ ಎಂದು ಖಂಡಿಸಿದೆ.
ಆಗಸ್ಟ್ 15ರಂದು ನರೇಂದ್ರ ಮೋದಿ ದೆಹಲಿಯ ಕೆಂಪು ಕೋಟೆಯ ಮೇಲಿಂದ ಮಾಡಿದ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಬಲೂಚಿಸ್ಥಾನದ ಮಾನವ ಹಕ್ಕುಗಳನ್ನು ಪ್ರಸ್ತಾವಿಸಿದ ಬಳಿಕ ಪಾಕ್ ಸೇನೆ ಈ ತನಕ ಕನಿಷ್ಠ ನೂರು ಬಲೂಚಿಗಳನ್ನು ಹತ್ಯೆಗೈದಿದೆ ಮತ್ತು ೧೫೦ಕ್ಕೂ ಹೆಚ್ಚು ಜನರನ್ನು ಅಪಹರಿಸಿದೆ.
Discussion about this post