ನವದೆಹಲಿ, ಅ.15: ಜಾಗತಿಕ ಸಮಸ್ಯೆಗಳನ್ನು ಬೇಧಿಸುವ ನಿಟ್ಟಿನಲ್ಲಿ ಸಾಮಾನ್ಯ ಪರಿಹಾರ ಕಂಡುಕೊಳ್ಳಲು ಬ್ರಿಕ್ಸ್ ಶೃಂಗಸಭೆ ಮೂಲಕ ವಿಶ್ವ ಸಮುದಾಯದ ಪ್ರಮುಖ ರಾಷ್ಟ್ರಗಳ ನಾಯಕರ ಭೇಟಿ ಸಹಕಾರಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಗೋವಾ ರಾಜಧಾನಿ ಪಣಜಿಯಲ್ಲಿ ಇಂದಿನಿದಯಿಂದ ಆರಂಭವಾಗಲಿರುವ ಎರಡು ದಿನಗಳ ಬ್ರಿಕ್ಸ್ ಸಮಾವೇಶದ ಕುರಿತು ಫೇಸ್ ಬುಕ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, ವಿಶ್ವವನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಪರಿಹಾರೋಪಾಯ ಹಾಗೂ ಹೊಸ ಸಹಭಾಗಿತ್ವ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಬ್ರಿಕ್ಸ್ ಮತ್ತು ಬಿಮ್ಸ್ಟೆಕ್ ಶೃಂಗಸಭೆಗಳು ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬ್ರಿಕ್ಸ್ ಸಮಾವೇಶವು ಅಭಿವೃದ್ದಿ, ಶಾಂತಿ, ಸ್ಥಿರತೆ ಮತ್ತು ಸುಧಾರಣೆಗಾಗಿ ಮುಂದುವರಿದ ಕಾರ್ಯಸೂಚಿಯಾಗಲಿದೆ ಎಂದು ಪ್ರಧಾನಿ ಬಣ್ಣಿಸಿದ್ದಾರೆ. ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ ಮತ್ತು ಸೌತ್ ಆಫ್ರಿಕಾ) ದೇಶಗಳ ಸಮಾವೇಶದಲ್ಲಿ ನಮ್ಮ ಗುರಿಗಳ ಮಾರ್ಗಕ್ಕೆ ಅಡ್ಡ ನಿಂತಿರುವ ಅಂತರ್ರಾಷ್ಟ್ರೀಯ ಮತ್ತು ಪ್ರಾದೇಶಿಕ ಸವಾಲುಗಳನ್ನು ಎದುರಿಸಲು ಮಹತ್ವದ ಚರ್ಚೆ ನಡೆಸಲಿದ್ದೇವೆ ಎಂದು ಹೇಳಿದ್ದಾರೆ.
Discussion about this post