ನವದೆಹಲಿ, ಅ.13: ಹಲವು ವಿವಾದಗಳಿಂದಲೇ ಹಾಗೂ ದೇಶದ್ರೋಹ ಕಾರ್ಯಗಳಿಂದಲೇ ಖ್ಯಾತವಾಗಿರುವ ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಮತ್ತೊಂದು ವಿವಾದಾತ್ಮಕ ಘಟನೆ ನಡೆದಿದೆ.
ದೇಶದಾದ್ಯಂತ ನವರಾತ್ರಿ ಹಬ್ಬದ ಅಂಗವಾಗಿ ರಾವಣನ ಪ್ರತಿಕೃತಿಯನ್ನು ಸಂಹಾರ ಮಾಡಿದರೆ, ಜೆಎನ್‌ಯುನಲ್ಲಿ ರಾವಣನ ಬದಲಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿ ದಹನ ಮಾಡುವ ಮೂಲಕ ಹೊಸ ವಿವಾದವನ್ನು ಸೃಷ್ಠಿಸಿದ್ದಾರೆ.
ಕಾಂಗ್ರೆಸ್ ಕೃಪಾಪೋಷಿತ ಎನ್‌ಎಸ್‌ಯುಐ ಸಂಘಟನೆಗೆ ಸೇರಿದ ವಿದ್ಯಾರ್ಥಿಗಳು ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿದಂತೆ ಬಿಜೆಪಿಯ ಹಲವು ಮುಖಂಡರ ಪ್ರತಿಕೃತಿಯನ್ನು ದಹಿಸಿದ್ದಾರೆ.
ಕೇಂದ್ರ ಸರ್ಕಾರ ಪೊಳ್ಳು ಘೋಷಣೆಗಳು, ಜನವಿರೋಧಿ ನೀತಿ, ದಬ್ಟಾಳಿಕೆ ಮತ್ತು ದಲಿತ, ಅಲ್ಪಸಂಖ್ಯಾತರ ವಿರೋಧಿ ಧೋರಣೆಗಳನ್ನು ಖಂಡಿಸಿ ಈ ಪ್ರತಿಕೃತಿಯನ್ನು ದಹಿಸಲಾಗಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಯೋಗ ಗುರು ರಾಮ್‌ದೇವ್, ಸಾಧ್ವಿ ಪ್ರಜ್ಞಾ, ನಾಥೂರಾಮ್ ಗೋಡ್ಸೆ, ಅಸಾರಾಮ್ ಬಾಪು ಮತ್ತು ಜೆಎನ್‌ಯು ಉಪಕುಲಪತಿ ಜಗದೀಶ್ ಕುಮಾರ್ ಅವರ ಭಾವಚಿತ್ರಗಳನ್ನು ರಾವಣನ ಹತ್ತು ತಲೆಗಳಂತೆ ಬಿಂಬಿಸಿ ಘೋಷಣೆಗಳನ್ನು ಕೂಗಿ ಪ್ರತಿಕೃತಿಯನ್ನು ದಹಿಸಲಾಗಿದೆ.
ಆದರೆ, ವಿದ್ಯಾರ್ಥಿಗಳು ನಡೆಸಿದ ಈ ಕಾರ್ಯಕ್ರಮಕ್ಕೆ ವಿಶ್ವ ವಿದ್ಯಾಲಯದಿಂದ ಯಾವುದೇ ರೀತಿಯ ಅನುಮತಿಯನ್ನು ಪಡೆದಿರಲಿಲ್ಲ ಎಂದು ಹೇಳಲಾಗಿದೆ.
Discussion about this post