ಧಾರವಾಡ: ಆ:30: ಸಾಹಿತಿಗಳ ತವರೂರಲ್ಲಿ ರಾಷ್ಟ್ರ ಮಟ್ಟದ ಚಳುವಳಿ…
ಕರ್ನಾಟಕ ಸರಕಾರಕ್ಕೆ 10 ದಿನಗಳ ಗಡವು: ವಿವಿಧ ಸಂಘಟನೆಗಳಿಂದ ಬೃಹತ್ ಚಳವಳಿ
ಘರ್ಜಿಸಿದ ವಿಚಾರವಾದಿಗಳ ಪ್ರತಿಧ್ವನಿ…..
ಕಲಬುರ್ಗಿ ಹಂತಕರ ಬಂಧನಕ್ಕೆ 30 ದಿನಗಳ ಗಡುವು….
ರಾಜ್ಯ ಸರಕಾರಕ್ಕೆ ಚಾಟಿ ಏಟು ಬೀಸಿದ ಚಿಂತಕರು…
ಇಂತಹದರ ಮಧ್ಯೆ ನಮ್ಮದೇನೋ ತಪ್ಪಿಲ್ಲಾ ಎಂದು ಪ್ರತಿಭಟನೆ ಕೈಗೊಂಡ ಸನಾತನ ಸಂಸ್ಥೆ.
ಹೌದು…ಹಿರಿಯ ಸಾಹಿತಿ, ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರನ್ನು ಹತ್ಯೆ ಮಾಡಿದ ಹಂತಕರನ್ನು ಬಂಧಿಸುವಂತೆ ಒತ್ತಾಯಿಸಿ, ಇಂದು ಧಾರವಾಡದಲ್ಲಿ ನಡೆದ ರಾಷ್ಟ್ರ ಮಟ್ಟದ ಚಳವಳಿ, ವಿಚಾರವಾದಿಗಳ ಅಂತರಂಗದ ಅಕ್ರೋಶಕ್ಕೆ ಮುನ್ನುಡಿ ಬರೆಯಿತು.
30 ದಿನದ ಒಳಗಾಗಿ ಕಲಬುರ್ಗಿ ಹಂತಕರನ್ನು ಬಂಧಿಸಿದೇ ಹೋದರೆ, ಹೋರಾಟವನ್ನು ನಿರಂತರವಾಗಿ ಮುಂದುವರೆಸಲಾಗುವುದು ಎಂದು ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಎಚ್ಚರಿಕೆಯ ಸಂದೇಶವನ್ನೂ ಕೂಡ ರವಾನೆ ಮಾಡಲಾಯಿತು.
ಇವೆಲ್ಲದರ ನಡುವೆ, ಕಲಬುರ್ಗಿ ಹತ್ಯೆ ವಿಚಾರದಲ್ಲಿ ವಿನಾಕಾರಣ ನಮ್ಮನ್ನು ಟಾಗರ್ೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿ, ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಸನಾತನ ಧರ್ಮ ಸಂಸ್ಥೆಯ ಕಾರ್ಯಕರ್ತರು ಕೂಡ ಪ್ರತಿಭಟನಾ ಮೆರವಣಿಗೆ ನಡೆಸಿ ವಿಚಾರವಾದಿಗಳಿಗೆ ಟಾಂಗ್ ನೀಡಿದರು.
ಸಾಹಿತಿ,ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರ ಹತ್ಯೆಯಾಗಿ ಇಂದು ಅಗಸ್ಟ್ 30ಕ್ಕೆ ಬರೋಬ್ಬರಿ ಒಂದು ವರ್ಷ ಗತಿಸಿದೆ.. ಹೀಗೆ ಒಂದು ವರ್ಷ ಕಳೆದರೂ ಹಂತಕರ ಸಣ್ಣ ಸುಳಿವು ಸಿಗದೇ ಇರುವುದು ಸಾಹಿತ್ಯ ಲೋಕದಲ್ಲಿ ತೀವ್ರ ಬೇಸರ ಮೂಡಿಸಿದೆ..ಈ ಹಿನ್ನಲೆಯಲ್ಲಿ ಇಂದು ವಿಚಾರವಾದಿಗಳು, ಧಾರವಾಡದಲ್ಲಿ ಬೃಹತ್ ಪ್ರಮಾಣದ ರಾಷ್ಟ್ರ ಮಟ್ಟದ ಚಳವಳಿ ನಡೆಸಿ ಕಲಬುರ್ಗಿ ಹಂತಕರನ್ನು ಬಂಧಿಸುವಂತೆ ಒತ್ತಾಯಿಸಿದರು.
ಡಾ. ಕಲಬುರ್ಗಿ, ಪಾನ್ಸರೆ, ದಾಭೋಲ್ಕರ್ ಹತ್ಯಾವಿರೋಧಿ ಹೋರಾಟ ಸಮಿತಿ ವತಿಯಿಂದ ಧಾರವಾಡದಲ್ಲಿ ಬೃಹತ್ ಪ್ರಮಾಣದ ರಾಷ್ಟ್ರಮಟ್ಟದ ಚಳುವಳಿಯನ್ನು ಆಯೋಜಿಸಲಾಗಿತ್ತು. ಈ ಚಳವಳಿ ಹಿನ್ನಲೆಯಲ್ಲಿ ಕಲ್ಯಾಣನಗರದ ಡಾ. ಎಂ. ಎಂ. ಕಲಬುರ್ಗಿ ಅವರ ಮನೆ ಸೌಜನ್ಯದ ಆವರಣದಿಂದ ಬಂದೂಕಿನೆದುರು ರಾಷ್ಟ್ರೀಯ ಜನದನಿ ಜಾಥಾ ನಡೆಸಲಾಯಿತು. ಈ ಜಾಥಾಗೆ ಕಲಬುರ್ಗಿ ಅವರ ಪತ್ನಿ ಚಾಲನೆ ನೀಡಿದರು.
ಹಣೆಗೆ ಕಪ್ಪುಪಟ್ಟಿ ಕಟ್ಟಿಕೊಂಡು ನಡೆದ ಈ ಮೌನ ಮೆರವಣಿಗೆಯಲ್ಲಿ ನರೇಂದ್ರ ಧಾಬೋಲ್ಕರ್ ಪತ್ನಿ ಶೈಲಾ ಧಾಬೋಲ್ಕರ್, ಗೋವಿಂದ ಪಾನ್ಸಾರೆ ಪತ್ನಿ ಉಮಾ, ಸೊಸೆ ಮೇಘಾ ಪಾನ್ಸಾರೆ ಭಾಗಿಯಾಗಿದ್ದರು. ಅಲ್ಲದೇ ನಾಡಿನ ಹಿರಿಯ ಸಾಹಿತಿಗಳಾದ ಚಂಪಾ, ಕುಂವೀ, ಚೆನ್ನವೀರ ಕಣವಿ, ಕೆ.ಎಸ್. ಭಗವಾನ್, ಭಾಷಾತಜ್ಞ ಗಣೇಶ ದೇವಿ ಸೇರಿದಂತೆ ಹಲವರು ಭಾಗಿಯಾಗಿದರು.
ಇನ್ನೂ ಧಾರವಾಡ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಈ ಪ್ರತಿಭಟನಾ ಮೌನ ಮೆರವಣಿಗೆ, ನಗರದ ಆರ್.ಎಲ್.ಎಸ್. ಕಾಲೇಜು ಮೈದಾನಕ್ಕೇ ತೆರಳಿ ರಾಷ್ಟ್ರ ಮಟ್ಟದ ಚಳುವಳಿಯ ಸಮಾವೇಶವಾಗಿ ಮಾರ್ಪಟ್ಟಿತು.
ಈ ಮಧ್ಯೆ ಸಮಾವೇಶ ಆರಂಭವಾಗುತ್ತಿದ್ದಂತೆಯೇ ಮಳೆಯ ಸಿಂಚಿನವಾಯಿತು. ಇದಕ್ಕೇ ತಲೆಕೆಡಿಸಿಕೊಳ್ಳದ ವಿಚಾರವಾದಿಗಳು ಮಳೆಯಲ್ಲಿಯೇ ನೆನೆಯುತ್ತಾ, ತಮ್ಮ ಆಕ್ರೋಶದ ನುಡಿಗಳನ್ನ ಹೊರಹಾಕಿದರು, ಇದೇ ವೇಳೆ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಸಾಹಿತಿ ಚಂಪಾ (ಚಂದ್ರಶೇಖರ್ ಪಾಟೀಲ್),ಇದು ನೋವಿನ, ಸಿಟ್ಟಿನ ಆಕ್ರೋಶದ ಸಮಾರಂಭ.ಇದು ಸಂಭ್ರಮದ ಸಮಾರಂಭವಲ್ಲವೆಂದು ಅಕ್ರೋಶವ್ಯಕ್ತಪಡಿಸಿದರು.
ರಾಜ್ಯ ಸರಕಾರಕ್ಕೆ ಮೂವತ್ತು ದಿನ ಡೆಡ್ ಲೈನ್ ನೀಡುತ್ತೇವೆ. ತನಿಖೆಯನ್ನು ತೀವ್ರಗೊಳಿಸಿ,ಹಂತಕರ ಯಾರು, ಹಂತಕರ ಹಿಂದಿನ ಮಹಾ ಹಂತಕ ಶಕ್ತಿಗಳು ಯಾವುದು ಎಂಬುದನ್ನು ಕಂಡು ಹಿಡಿಯಲೇಬೇಕು…ಇಲ್ಲದೇ ಹೋದಲ್ಲಿ ಮತ್ತೆ ಇದೇ ರೀತಿ ರಾಷ್ಟ್ರ ಮಟ್ಟದ ಚಳುವಳಿಯನ್ನು ಮುಂದುವರೆಸಬೇಕಾಗುತ್ತೇ ಎಂದು ಎಚ್ಚರಿಕೆ ನೀಡಿದರು.
ನರೇಂದ್ರ ದಾಭೋಲ್ಕರ್, ಪಾನ್ಸರೆ ಹಾಗೂ ಕಲಬುಗರ್ಿ ಅವರ ಪ್ರಕರಣಗಳ ಸಿಐಡಿ ತನಿಖೆ ಎಲ್ಲಿಗೆ ಬಂತೋ ಸಂಗಯ್ಯ ಅಂದ್ರೆ ಅಲ್ಲಿಗೆ ಬಂತೋ ಅನ್ನೋ ಹಾಗಿದೆ ಎಂದು ವ್ಯಂಗ್ಯವಾಡಿದ ಚಂಪಾ, ತನಿಖೆ ಅಂದಿನಿಂದ ಇಲ್ಲಿಯವರೆಗೂ ಹಾಗೆ ಇದೆ….ತನಿಖೆಗೆ ಮತೀಯ ಶಕ್ತಿಗಳು , ಆಳುವ , ವಿರೋಧ ಪಕ್ಷಗಳೆ ಅಡ್ಡಿಯಾಗಿಬಹುದು ಎಂಬ ಸಂಶಯ ಎದುರಾಗುತ್ತಿದೆ ಎಂದರು.
ಐದು ಸಾವಿರ ವರ್ಷಗಳಿಂದ ನಡೆದು ಬಂದಿರೋ ವೈದಿಕ ಬ್ರಾಹ್ಮಣ ಮೂಲಭೂತವಾದವೇ? ಅಥವಾ ಅದನ್ನು ಧಿಕ್ಕರಿಸಿ 12 ನೇ ಶತಮಾನದಲ್ಲಿ ಶರಣರು ಆರಂಭಿಸಿದ ಕ್ರಾಂತಿಯ ಹೆಸರಿನಲ್ಲಿ ಕೆಲ ವೀರಶೈವ, ಲಿಂಗಾಯತರು ನಡೆಸುತ್ತಿರೋ ಮೂಲಭೂತವಾದವೇ? ಎಂದು ಪ್ರಶ್ನಿಸಿದ ಅವರು, ದುದರ್ೈವದ ಸಂಗತಿಯೆಂದರೆ, ಕನರ್ಾಟಕಕ್ಕೆ ಕೋಮುವಾದ ತರಲು ವೀರಶೈವ, ಲಿಂಗಾಯತರು ಹೆಗಲುಗಳಾಗಿ ಪರಿಣಮಿಸಿದ್ದು ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರೊ. ಕೆ.ಎಸ್.ಭಗವಾನ್,ದಲಿತರ ಕೈಗೆ ಬಂದೂಕು ಕೊಡಿ ಸರಕಾರಗಳಿಂದ ದಲಿತರ ರಕ್ಷಣೆ ಸಾಧ್ಯವಿಲ್ಲ….ಅವರ ಕೈಗೆ ಬಂದೂಕು ನೀಡಿದರೆ ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು. ಎಲ್ಲರೂ ದಲಿತರ ಪರ ಅಂತಾ ಕಣ್ಣೀರು ಸುರಿಸುತ್ತಾರೆ. ಆದರೆ ದಲಿತರು ರಕ್ತ ಸುರಿಸೋದನ್ನ ಯಾರೂ ನಿಲ್ಲಿಸುತ್ತಿಲ್ಲ. ಪೊಲೀಸರಿಂದ, ಸೈನಿಕರಿಂದ
ದಲಿತರ ರಕ್ಷಣೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ದಲಿತರ ರಕ್ಷಣೆಗೆ ಬಂದೂಕು ಕೊಡಿ ಎಂದು ಹೇಳಿದರು.
ಇನ್ನೂ ಡಾ. ಎಂ ಎಂ ಕಲಬುರ್ಗಿ ಮಗ ಶ್ರೀ ವಿಜಯ ಮಾತನಾಡಿ, ಕಲ್ಬುಗರ್ಿ ಹಾಗೂ 2 ಸಾಹಿತಿಗಳ ಕೊಲೆ ಅಭಿವ್ಯಕ್ತಿ ಸ್ವಾತಂತ್ರ್ಯದ ಕೊಲೆ. ಕೊಲೆ ಮಾಡಿದವರು ದೇಶದ್ರೊಹಿಗಳು ಹಾಗೂ ಹೇಡಿಗಳು ಎಂದು ಆಕ್ರೋಶವ್ಯಕ್ತಪಡಿಸಿದರು.
70 ವರ್ಷದ ಹಣ್ಣು ಮುದುಕ ನಮ್ಮ ತಂದೆ ಆಗಿದ್ಥರು… ಸಂವಿಧಾನದ ಚೌಕಟ್ಟಿನಲ್ಲಿ 3 ಮಂದಿ ಪರಸ್ಪರ ಚಚರ್ೆಗೆ ಸಿದ್ದರಾಗಿದ್ದರು…. ಕೊಲೆ ಮಾಡಿದವರು ಮಾಡಿಸಿದವರು ಇದ್ದು ಸತ್ತಂತೆ…. ಇವತ್ತು ಕರಾಳ ದಿನಾಚರಣೆ ಆಚರಣೆ ಮಾಡಲಾಗಿದೆ..ಇದಕ್ಕಾದ್ರೂ ಸಂಬಂಧಪಟ್ಟವರು ಉತ್ತರ ನೀಡಲಿ ಎಂದರು.
ಇದಾದ ಬಳಿಕ ದಾಂಬೊಲ್ಕರ ಮಗಳು ಮಾತನಾಡಿ, 3 ಮಂದಿ ವಿಚಾರವಾದಿಗಳ ಹತ್ಯೆ ತನಿಖೆ ಸರಿಯಾಗಿ ನಡೆಯುತ್ತಿಲ್ಲ. ಮಹಾರಾಷ್ಟ್ರದಲ್ಲಿ ಬಂಧಿತ ಆರೋಪಿಗಳು ಹೇಡಿಗಳು. ದಾಂಬೊಲ್ಕರ ಕುಟುಂಬ ಹಾಗೂ ಪನ್ಸಾರೆ ಕುಟುಂಬ ಮಹಾರಾಷ್ಟ್ರ ಹೈಕೊರ್ಟ ಮೊರೆ ಹೋಗಿದ್ದಾರೆ…ಇಷ್ಟಾದ್ರೂ ನ್ಯಾಯ ಸಿಗ್ತಾ ಇಲ್ಲಾ.. ಎಂದು ಹೇಳಿದರು.
3ಮಂದಿ ಹಂತಕರನ್ನ ಕೆಂದ್ರ ಹಾಗೂ ರಾಜ್ಯ ಸಕರ್ಾರ ಬಂಧನ ಮಾಡಿಲ್ಲ…. ಇದಕ್ಕಾಗಿ 10 ದಿನಗಳ ಗಡುವು ಕೊಡುತ್ತೇವೆ…. ಇಲ್ಲದೆ ಹೊದ್ರೆ ರಾಜ್ಯ ಸಕರ್ಾರ ತನಿಖೆ ವಿಫಲವಾಗಿದೆ ಎಂದು ಒಪ್ಪಿಕೊಳ್ಳಬೆಕು… ಹಂತಕರು ಇಂತಹ ಗುಂಡಿನ ದಾಳಿಯನ್ನು ಮಾಡಿದ್ರು ನಾವು ಹೆದರೊಲ್ಲ ಎಂದು ಇದೇ ಸಂದರ್ಭದಲ್ಲಿ ಗೋವಿಂದ ಪನ್ಸಾರೆ ಸೊಸೆ ಮೆಗಾ ಪನ್ಸಾರೆ ಮಾತನಾಡಿ ಆಕ್ರೋಶ ಹೊರಹಾಕಿದರು.
ಇನ್ನೂ ಮಹಾರಾಷ್ಟ್ರ,ಗೋವಾ,ದೆಹಲಿ,ಗುಜರಾತ್ ಸೇರಿದಂತೆ ದೇಶದ ನಾನಾ ಮೂಲೆಯಿಂದ ಆಗಮಿಸಿದ್ದ ವಿಚಾರವಾದಿಗಳು, ತಮ್ಮ ಅಂತರಂಗದ ಅಕ್ರೋಶವನ್ನು ಹೊರಹಾಕಿದರು.
ಈ ಮಧ್ಯೆ ವಿಚಾರವಾದಿಗಳ ಜಾಥಾ ಸಂದರ್ಭದಲ್ಲಿ ನಗರದ ಜುಬಲಿ ವೃತ್ತದಲ್ಲಿ ಸನಾತನ ಧರ್ಮ ಸಂಸ್ಥೆಯ ಕಾರ್ಯಕರ್ತರು ಪ್ರತಿಭಟನಾ ಮರೆವಣಿಗೆ ನಡೆಸಿದರು. ನಗರದ ಜುಬಿಲಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಸನಾತನ ಧರ್ಮ ಸಂಸ್ಥೆಯ ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದಾದ ಬಳಿಕ ಜಿಲ್ಲಾಧಿಕಾರಿ ಕಚೇರಿ ಬಳಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇತೃ?ವದಲ್ಲಿ ಸನಾತನ ಧರ್ಮ ಸಂಸ್ಥೆಯ ಕಾರ್ಯಕರ್ತರು ಕೆಲಕಾಲ ಪ್ರತಿಭಟನೆ ನಡೆಸಿದರು.ಕಲಬುಗರ್ಿ ಹತ್ಯೆ ವಿಚಾರದಲ್ಲಿ ಹಿಂದೂ ಸಂಘಟನೆಗಳನ್ನು ವಿನಾಕಾರಣ ಟಾಗರ್ೆಟ್ ಮಾಡಲಾಗುತ್ತಿದೆ…ಹಂತಕರು ಯಾರು ಎಂಬುದನ್ನು ರಾಜ್ಯ ಸರಕಾರ ಬಹಿರಂಗಗೊಳಿಸಬೇಕು. ಇದನ್ನು ಬಿಟ್ಟು ಮುಗ್ಧ ಜನರನ್ನು ಬಂಧಿಸಬಾರದು ಎಂದು ಮುತಾಲಿಕ್ ಇದೇ ವೇಳೆ ಆಗ್ರಹಿಸಿದರು.
ಏನೇ ಆಗಲೀ ಧಾರವಾಡದಲ್ಲಿ ನಡೆದ ವಿಚಾರವಾದಿಗಳ ಈ ರಾಷ್ಟ್ರ ಮಟ್ಟದ ಚಳುವಳಿ, ಅಭಿವ್ಯಕ್ತ ಸ್ವಾತಂತ್ರ್ಯವನ್ನು ಹೊರಹಾಕುವುದರ ಜೊತೆಗೆ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಎಚ್ಚರಿಕೆಯ ಸಂದೇಶವನ್ನು ಕೂಡ ರವಾನಿಸಿದೆ.
ಸಾಹಿತಿ ಕಲಬುರಗಿ ಹತ್ಯೆಯ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಅದು ಪೂರ್ಣಗೊಳ್ಳಲು ಒಂದು ವರ್ಷವಾದರೂ ಆಗಬಹುದು, ಐದು ವರ್ಷವಾದರೂ ಆಗಬಹುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಹಿತಿ ಕಲಬುರಗಿ ಹತ್ಯೆಯಾಗಿ ಒಂದು ವರ್ಷ ಕಳೆದಿದೆ. ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಯುತ್ತಿದೆ. ಅದು ಪೂರ್ಣಗೊಳ್ಳಲು ಒಂದು ವರ್ಷವಾದರೂ ಆಗಬಹುದು, ಎಷ್ಟು ವರ್ಷವಾದರೂ ಆಗಬಹುದು, ತನಿಖೆ ನಿಧಾನಗತಿಯಲ್ಲಿ ನಡೆಯಲಿ ಬಿಡಿ ಎಂದು ಹೇಳಿದರು.
ಬೃಹತ್ ಪ್ರತಿಭಟನೆ:
ವಿಮರ್ಶಕ, ಖ್ಯಾತ ಸಾಹಿತಿ ಡಾ.ಎಂ.ಎಂ.ಕಲಬುರಗಿ ಹತ್ಯೆಯಾಗಿ ಇಂದಿಗೆ ಒಂದು ವರ್ಷವಾದರೂ ದುಷ್ಕಮರ್ಿಗಳ ಪತ್ತೆ ಮಾಡದ ಹಿನ್ನೆಲೆಯಲ್ಲಿ ದೇಶದ ಖ್ಯಾತ ಸಾಹಿತಿಗಳು, ವಿಚಾರವಾದಿಗಳು, ಪ್ರಗತಿಪರರು ಇಂದು ಧಾರವಾಡ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಎಂ.ಎಂ.ಕಲಬುರಗಿ ಅವರ ನಿವಾಸದಿಂದ ಆಟರ್್ ಗ್ಯಾಲರಿ ಮೈದಾನದವರೆಗೆ ಸುಮಾರು 60ಕ್ಕೂ ಹೆಚ್ಚು ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿ ದುಷ್ಕಮರ್ಿಗಳ ಬಂಧನಕ್ಕೆ ಆಗ್ರಹಿಸಿದವು.
ಡಾ.ಎಂ.ಎಂ.ಕಲಬುರಗಿಯವರ ಹತ್ಯೆಯಾಗಿ ಒಂದು ವರ್ಷ ಕಳೆಯಿತು. ಈವರೆಗೂ ಆರೋಪಿಗಳ ಸುಳಿವು ದೊರೆತಿಲ್ಲ. ತನಿಖೆಯನ್ನು ತೀವ್ರಗೊಳಿಸಿ ದುಷ್ಕಮರ್ಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಹುಬ್ಬಳ್ಳಿಯಲ್ಲಿ 100ಕ್ಕೂ ಹೆಚ್ಚು ಸಂಘಟನೆಗಳು ವಿಚಾರಿವಾದಿಗಳ ಹತ್ಯೆ ವಿರೋಧಿ ಹೋರಾಟ ವೇದಿಕೆಯಡಿಯಲ್ಲಿ ಬೃಹತ್ ಸಮಾವೇಶ ನಡೆಸಿ ದುಷ್ಕಮರ್ಿಗಳ ಬಂಧನಕ್ಕೆ ಒತ್ತಾಯಿಸಲಾಯಿತು. ಈ ಸಮಾವೇಶದಲ್ಲಿ ಅಂತಾರಾಷ್ಟ್ರೀಯ ಲೇಖಕರು, ಬರಹಗಾರರು, ಪ್ರಗತಿಪರರು, ವಿಚಾರವಾದಿಗಳು ಭಾಗವಹಿಸಿದ್ದರು.
ನಾಡೋಜ ಚನ್ನವೀರ ಕಣವಿ, ಸಾಹಿತಿ ಚಂಪಾ, ಭಾಷಾ ತಜ್ಞ ಗಣೇಶ್ ದೇವಿ ಸೇರಿದಂತೆ ಪ್ರಖ್ಯಾತ ಹಿರಿಯ ಸಾಹಿತಿಗಳು ಭಾಗವಹಿಸಿದ್ದರು. ಡಾ.ಎಂ.ಎಂ.ಕಲಬುರಗಿಯವರ ಅಪರ ಅನುಯಾಯಿಗಳು ಈ ಸಮಾವೇಶದಲ್ಲಿ ಪಾಲ್ಗೊಂಡು ಹತ್ಯೆ ತನಿಖೆ ವಿಳಂಬ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ಖಂಡಿಸಿದರು.
ಮಹಾರಾಷ್ಟ್ರ ರಾಜ್ಯದ ನರೇಂದ್ರ ದಾಬೋಲ್ಕರ್ ಹಾಗೂ ಗೋವಿಂದ ಪನ್ಸಾರೆ ಕುಟುಂಬವರ್ಗದವರು ಕೂಡ ಕಲಬುರಗಿಯವರ ನಿವಾಸಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಜಾನಪದ ಹಾಡು ಹಾಡುವ ಮೂಲಕ ಮೆರವಣಿಗೆಯಲ್ಲಿ ವಿಚಾರವಾದಿಗಳ ಹತ್ಯೆಯನ್ನು ಖಂಡಿಸಲಾಯಿತು.
Discussion about this post