ಬಾಗಲಕೋಟೆ: ಆ;30: ಮಾಜಿ ಡಿಸಿಎಂ ಈಶ್ವರಪ್ಪ ಹೇಳಿಕೆ.ಸಂಗೊಳ್ಳಿರಾಯಣ್ಣ ರಾಯಣ್ಣ ಬ್ರಿಗೇಡ ಶುರುವಾದಾಗಿನಿಂದ ಸಿಎಂ ಸಿದ್ಧರಾಮಯ್ಯನವರಿಗೆ ನಡುಕ ಶುರುವಾಗಿದೆ.ಹಿಂದುಳಿದವರು,ರೈತರು,ದಲಿರು ರಾಯಣ್ಣ ಬ್ರಿಗೇಡ್ ನಿಂದ ನಡುಕ ಶುರುವಾಗಿದೆ.ಅದಕ್ಕಾಗಿ ಈ ರೀತಿ ಮಾತಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೆಎಸ್ ಈಶ್ವರಪ್ಪ ಟಾಂಗ್ ನೀಡಿದರು.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಮಂಡಲ ಆಯೋಗದ ಹೆಸರಲ್ಲಿ ಬಂಡಲ್ ಬಿಡಬೇಡಿ.ಮಠ ಮಂದಿರಗಳಿಗೆ ನೀವೆಷ್ಟು ಹಣ ಕೊಟ್ಟಿದ್ದೀರಿ ಹೇಳಿ. ಹಿಂದುಳಿದ ದಲಿತರ ಮಠಗಳು ಸ್ವಾಮಿಗಳು ಈ ವರೆಗೂ ನೀವು ಯಾವುದೇ ರೀತಿಯ ಬೆಂಬಲ ಕೊಟ್ಟಿಲ್ಲ ಅಂತಿದ್ದಾರೆ.ನಿಮಗೆ ಇನ್ನೂ ಎರಡು ವರ್ಷ ಅಧಿಕಾರ ಇದೆ.ಅವರಿಗೆ ಅನುಕೂಲವಾಗುವಂತ ಹೆಚ್ಚಿನ ಹಣ ನೀಡಿ ಎಂದು ಒತ್ತಾಯಿಸಿದರು.
ನಿಮಗೆ ಶಕ್ತಿ ಇದ್ದಷ್ಟು ಮೊದಲು ರೈತರ ಸಾಲ ಮನ್ನಾ ಮಾಡಿ ನಂತರ ಕೇಂದ್ರದ ಕಡೆ ಮುಖಮಾಡಿ.ಅದನ್ನ ಬಿಟ್ಟು ಸಿಎಂ ಮೊದಲು ಕೇಂದ್ರ ಇಷ್ಟು 29ಸಾವಿರ ಕೋಟಿಯಲ್ಲಿ ಅರ್ಧ ಮನ್ನಾ ಮಾಡಿದರೆ, ನಾವು ಮಾಡ್ತೇವೆ ಅಂತ ಹೇಳೋದು ರೈತರಿಗೆ ರಾಜ್ಯದ ಜನರಿಗೆ ಮಾಡುತ್ತಿರುವ ವಂಚನೆ ಎಂದು ಸಿಎಂ ವಿರುದ್ಧ ಹರಿಹಾಯ್ದರು.















