Read - < 1 minute
ನವದೆಹಲಿ: ಸೆ:1: ರಾಸಲೀಲೆ ಪ್ರಕರಣದಲ್ಲಿ ಸಚಿವಸ್ಥಾನದಿಂದ ವಜಾಗೊಂಡು ದೇಶಾದ್ಯಂತ ಸುದ್ದಿಯಾಗಿರುವ ಆಮ್ ಆದ್ಮಿ ಪಕ್ಷದ ಸಂದೀಪ್ಕುಮಾರ್ ತಾವು ದಲಿತನೆಂಬ ಕಾರಣಕ್ಕಾಗಿ ಪಿತೂರಿಗೆ ಬಲಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ.
ಸಚಿವರು ನಡೆಸಿದರೆನ್ನಲಾದ ರಾಸಲೀಲೆ ಪ್ರಕರಣದ ಆಕ್ಷೇಪಾರ್ಹ ಸಿಡಿ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಎಎಪಿ ಮಂತ್ರಿ ಸ್ಥಾನದಿಂದ ಸಂದೀಪ್ಕುಮಾರ್ ಅವರನ್ನು ಪದಚ್ಯುತಗೊಳಿಸಲಾಗಿತ್ತು.
ಈ ಕುರಿತು ದೆಹಲಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ದಲಿತ ಎಂಬ ಕಾರಣಕ್ಕಾಗಿ ನನ್ನ ವಿರುದ್ಧ ಒಳಸಂಚು ನಡೆದಿದೆ. ಈ ಬಗ್ಗೆ ತನಿಖೆಯೊಂದು ನಡೆಯಬೇಕು ಎಂದು ಆಗ್ರಹಿಸಿದರು.
ನಾನು ವಾಲ್ಮೀಕಿ ಸಮಾಜಕ್ಕೆ ಸೇರಿದವನು ಎಂಬ ಕಾರಣದಿಂದ ಪಿತೂರಿ ನಡೆಸಲಾಗಿದೆ. ಟೆಲಿವಿಷನ್ನಲ್ಲಿ ವಿಡಿಯೋ ನೋಡಿ ನನಗೆ ತುಂಬ ಘಾಸಿಯಾಗಿದೆ. ಈ ಸಿಡಿ ನಕಲಿ ಬಗ್ಗೆ ತನಿಖೆ ನಡೆಯಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.
Discussion about this post