Read - < 1 minute
ನವದೆಹಲಿ, ಅ.18: ಪ್ರಧಾನಿ ನರೇಂದ್ರ ಮೋದಿ ಅವರು ಇದೇ ತಿಂಗಳ 25ರಂದು ದೆಹಲಿಯಲ್ಲಿ ದೇಶದ ಮೊಟ್ಟಮೊದಲ ರಾಷ್ಟ್ರೀಯ ಬುಡಕಟ್ಟು ಉತ್ಸವ ಉದ್ಘಾಟಿಸಲಿದ್ದಾರೆ.
ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಜ್ಯುಲ್ ಓರಾಂ ನವದೆಹಲಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ್ದಾರೆ.
ಬುಡಕಟ್ಟು ಸಮುದಾಯಗಳ ನಡುವೆ ಒಳಗೊಳ್ಳುವಿಕೆಯ ಭಾವನೆಯನ್ನು ಉತ್ತೇಜಿಸುವುದು ಉತ್ಸವದಪ್ರಮುಖ ಉದ್ದೇಶವಾಗಿದೆ; ಉತ್ಸವದಲ್ಲಿ ಬುಡಕಟ್ಟು ಸಂಸ್ಕೃತಿಯ ವಿವಿಧ ಆಯಾಮಗಳನ್ನು ಉತ್ತೇಜಿಸಿ, ಹೆಚ್ಚಿನ ಜನರನ್ನು ತಲುಪಲು ಅವುಗಳನ್ನು ಪ್ರದರ್ಶಿಸಲಾಗುವುದು ಎಂದು ವಿವರಿಸಿದರು. ಬುಡಕಟ್ಟು ಜನಾಂಗಗಳ ಜೀವನಕ್ಕೆ ಸಂಬಂಧಪಟ್ಟ ಸಂಸ್ಕೃತಿ, ಸಂಪ್ರದಾಯ ಆಚರಣೆ ಹಾಗೂ ಅವರ ಕೌಶಲ್ಯಗಳ ವಿವಿಧ ಆಯಾಮಗಳನ್ನು ಉತ್ತೇಜಿಸಿ, ಸಂರಕ್ಷಿಸಲು ಉತ್ಸವ ಆಯೋಜಿಸಲಾಗಿದೆ ಎಂದು ಸಚಿವರು
ಹೇಳಿದರು.
ಉತ್ಸವದಲ್ಲಿ ದೇಶದ ವಿವಿಧ ಕಡೆಗಳಿಂದ 15 ಸಾವಿರ ಬುಡಕಟ್ಟು ಜನಾಂಗಗಳ ನಿಯೋಗಗಳು ಹಾಗೂ 1 600 ಬುಡಕಟ್ಟು ಕಲಾವಿದರು ಪಾಲ್ಗೊಳ್ಳಲಿದ್ದಾರೆ.
Discussion about this post