ಅತ್ಯಂತ ನವಿರಾದ ಹಾಸ್ಯದ ಮೂಲಕ ಈ ಪಜೀತಿಗಳನ್ನು ತೋರಿಸುವ ಈ ಸಿನೆಮಾ ಸಂಪೂರ್ಣ ಮನೆಮಂದಿ ಎಲ್ಲರೂ ಒಟ್ಟಿಗೆ ಕುಳಿತು ನೋಡಬೇಕಾದ ಸಿನೆಮಾ ಎನ್ನುತ್ತಾರವರು.
ಸೋಮವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಸಿನೆಮಾದ ಹೀರೋ, ಹೀರೊಯಿನ್ ಗಳ ಜೊತೆಯಲ್ಲಿ ಸಿನೆಮಾದ ಮಾಹಿತಿ ನೀಡಿದರು.
ಒಟ್ಟು 2 ಗಂಟೆಯ ಈ ಸಿನೆಮಾ ತುಳು 100 ಥಿಯೇಟರ್ ಗಳಲ್ಲಿ ಒಂದೇ ದಿನ ಬಿಡುಗಡೆಯಾಗಲಿದೆ, ಇದು ತುಳು ಸಿನೆಮಾರಂಗದ ಇತಿಹಾಸದಲ್ಲಿಯೇ ಒಂದು ದಾಖಲೆಯಾಗಲಿದೆ ಎಂದವರು ಹೇಳಿದರು.
ಮಂಗಳೂರು ಮತ್ತು ಉಡುಪಿ ಸುತ್ತಮುತ್ತ ಚಿತ್ರೀಕರಿಸಲಾಗಿರುವ ಈ ಸಿನೆಮಾದಲ್ಲಿ ಒಂದು ಹಾಡಿನ ಚಿತ್ರೀಕರಣದಲ್ಲಿ 1000 ಮಂದಿ ಕಲಾವಿದರು ನೃತ್ಯ ಮಾಡಿರುವುದು ಕೂಡ ಒಂದು ದಾಖಲೆಯಾಗಿದೆ ಎಂದವರು ಹೇಳಿದರು.
ಸಿನೆಮಾ ನೃತ್ಯ ಕಲಾವಿದರ ಸಂಘದ ರಾಜ್ಯಾದ್ಯಕ್ಷರಾಗಿರುವ ರಾಜೇಶ್ ಬ್ರಹ್ಮಾವರ್ ಅವರು ನಿರ್ಮಿಸಿರುವ ಈ ಸಿನೆಮಾದಲ್ಲಿ ಕನ್ನಡ ಖ್ಯಾತ ನಾಯಕ ನಟರಾದ ಉಪೇಂದ್ರ ಮತ್ತು ಶ್ರೀಮುರಳಿ ಅವರು ಪ್ರಪ್ರಥಮ ಬಾರಿಗೆ ತುಳು ಹಾಡುಗಳನ್ನು ಹಾಡಿದ್ದಾರೆ.
ಕಿರುತೆರೆಯ ಧಾರಾವಹಿ ಅಗ್ನಿಸಾಕ್ಷಿಯ ವಿಲನ್ ಕಿಶೋರ್ ಮಂಗಳೂರು ಈ ಸಿನೆಮಾದ ನಾಯಕ ನಟನಾಗಿದ್ದು, ನಾಯಕಿಯರಾಗಿ ಸ್ಟೂಡೆಂಟ್ಸ್ ಚಿತ್ರದಲ್ಲಿ ನಟಿಸಿರುವ ಭವ್ಯ ಮತ್ತು ಪೇಟೆಹುಡ್ಗಿಯರ ಹಳ್ಳಿಲೈಫು ರಿಯಾಲಿಟಿ ಶೋನ ಪೂಜಾ ಶೆಟ್ಟಿ ನಟಿಸಿದ್ದಾರೆ. ಸಿನೆಮಾದಲ್ಲಿ ನಾಯಕ ಮತ್ತು ನಾಯಕಿಯರೇ ಕಾಮಿಡಿ ಮಾಡುವುದು ಚಿತ್ರದ ಹೈಲೈಟ್ ಆಗುತ್ತದೆ ಎಂದು ನಿರ್ದೇಶಕ ರಂಜೀತ್ ಹೇಳಿದರು.
ರಂಜೀತ್ ಅವರು ಕಳೆದ 9 ವರ್ಷಗಳಿಂದ ಸಿನೆಮಾ ರಂಗದಲ್ಲಿದ್ದು, 14 ಸಿನೆಮಾಗಳಿಗೆ ಸಹನಿರ್ದೇಶಕರಾಗಿ ಅನುಭವ ಹೊಂದಿದ್ದಾರೆ. ನೂರುದಿನ ಓಡಿರುವ ಪವಿತ್ರ ಎಂಬ ತುಳು ಸಿನೆಮಾದ ಸಾಹಿತ್ಯ, ಸಂಭಾಷಣೆಯನ್ನು ಬರೆದಿರುವ ರಂಜೀತ್ ಅವರೇ ದೊಂಬರಾಟ ಸಿನೆಮಾದ ಕತೆ, ಚಿತ್ರ, ಸಂಭಾಷಣೆಗಳನ್ನು ಬರೆದಿದ್ದಾರೆ.
ಉಳಿದಂತೆ ಅರವಿಂದ ಬೋಳಾರ್, ಉಮೇಶ್ ಮಿಜಾರ್, ರಘು ಪಾಂಡೇಶ್ವರ್, ಶರತ್ ಕದ್ರಿ, ರಂಜನ್ ಬೋಳಾರ್, ಪ್ರತಿಮಾ ನಾಯಕ್, ರಂಜೀತಾ ಶೇಟ್ ಮುಂತಾದವರು ನಟಿಸಿದ್ದಾರೆ. ಕುಡ್ಲ ಸಾಯಿಕೃಷ್ಣ ಮತ್ತು ಕೀರ್ತನ್ ಭಂಡಾರಿ ಅವರ ಸಾಹಿತ್ಯವಿದೆ.
Discussion about this post