ಚಿತ್ರದುರ್ಗ: ಸೆ:10: ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟನೆ ಕಾರ್ಯಕ್ರಮದಲ್ಲಿ ವಿದ್ಯಾಥರ್ಿಗಳು ನಾಡಗೀತೆಯನ್ನು ಅರ್ಧಕ್ಕೆ ನಿಲ್ಲಿಸಿ ಅಭಾಸವಾದ್ದರಿಂದ ಸಮಾಜ ಕಲ್ಯಾಣ ಖಾತೆ ಸಚಿವ ಹೆಚ್.ಆಂಜನೇಯ ಆಯೋಜಕರ ವಿರುದ್ಧ ಕೆಂಡಾಮಂಡಲರಾದ ಘಟನೆ ಇಂದು ಇಲ್ಲಿನ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ನಡೆಯಿತು.
ತಾಲ್ಲೂಕು ಮಟ್ಟದಲ್ಲಿ ಆಯ್ಕೆಯಾದ ವಿದ್ಯಾಥರ್ಿಗಳಿಗಾಗಿ ಆಯೋಜಿಸಿದ ಕ್ರೀಡಾಕೂಟದ ಉದ್ಘಾಟನೆಗೆ ಸಚಿವರನ್ನು ಆಹ್ವಾನಿಸಲಾಗಿತ್ತು. ಈ ವೇಳೆ ನಾಡಗೀತೆ ಹಾಡಿದ ವಿದ್ಯಾಥರ್ಿನಿಯರು, ಹೇಳಲು ಬಾರದೆ ತಡಬಡಾಯಿಸಿ ಅರ್ಧಕ್ಕೆ ನಿಲ್ಲಿಸಿದರು. ಇದರಿಂದ ಸಿಟ್ಟುಗೆದ್ದ ಸಚಿವರು ಪಕ್ಕದಲ್ಲಿದ್ದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಅಧಿಕಾರಿ ನಾಗರಾಜ್ ಅವರನ್ನು ತರಾಟೆಗೆ ತೆಗೆದುಕೊಂಡರು.
ವಿದ್ಯಾಥರ್ಿಗಳಿಗೆ ನಾಡಗೀತೆ ಹಾಡಲು ತರಬೇತಿ ನೀಡಿದ ಸಿಬ್ಬಂದಿಗೆ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.
ಯಾವ ಶಾಲೆಯಲ್ಲಿ , ಯಾವ ಶಿಕ್ಷಕರಿಗೆ ನಾಡಗೀತೆ ಬರುವುದಿಲ್ಲ ಎಂಬುದನ್ನು ಪರಿಶೀಲಿಸಿ ಎಂದೂ ಸೂಚಿಸಿದರು.
ನಾಡಗೀತೆ, ರಾಷ್ಟ್ರಗೀತೆಗಳಿಗಾಗಲಿ, ರಾಷ್ಟ್ರ ಧ್ವಜಕ್ಕಾಗಲಿ ಅವಮಾನ ಮಾಡುವುದು ಅಕ್ಷಮ್ಯ ಎಂದು ಸಚಿವರು ಎಚ್ಚರಿಸಿದರು.














