ಪಣಜಿ, ಸೆ.17: ನಾನೊಬ್ಬ ಆರ್‌ಎಸ್‌ಎಸ್‌ನ ಶಿಸ್ತಿನ ಸ್ವಯಂ ಸೇವಕ. ಎಂದಿಗೂ ಸಂಘದ ನಿಯಮಗಳನ್ನು ಪಾಲಿಸುತ್ತೇನೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ಈ ಕುರಿತಂತೆ ಇಂದು ಮಾತನಾಡಿರುವ ಅವರು, ನಮ್ಮದು ಪ್ರಜಾಪ್ರಭುತ್ವ, ಇಲ್ಲಿ ಯಾರೂ ಬೇಕಾದರೂ ಯಾವ ಪಕ್ಷವನ್ನಾದರೂ ಸ್ಥಾಪಿಸಲು ಅವಕಾಶವಿದೆ ಎಂದು ಹೇಳಿದ್ದಾರೆ. ನನಗೆ ಶಿಸ್ತು ಎಂಬುದು ಬಹಳ ಮುಖ್ಯ, ನಾನು ಶಿಸ್ತನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿದ್ದೇನೆ, ಮುಂದೆಯೂ ಪಾಲಿಸುತ್ತೇನೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಅಂಗವಾಗಿ ಗೋವಾದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸುಭಾಷ್ ವೆಲ್ಲಿಂಗ್ಕರ್ ಆರ್‌ಎಸ್‌ಎಸ್‌ಗೆ ಪರ್ಯಾಯವಾಗಿ ಮತ್ತೊಂದು ಪಕ್ಷ ಕಟ್ಟುತ್ತಾರೆಂಬ ವರದಿಗೆ ಪ್ರತಿಕ್ರಿಯಿಸಿದರು.
ಗೋವಾದ ಬಿಜೆಪಿ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದ ಸುಭಾಷ್ ವೆಲ್ಲಿಂಗ್ಕರ್ ನಡೆಯಿಂದ ಅಸಮಾಧಾನಗೊಂಡಿದ್ದ ಆರ್‌ಎಸ್‌ಎಸ್, ಸಂಘಟನೆಯ ಗೋವಾ ಅಧ್ಯಕ್ಷ ಅವರನ್ನು ವಜಾಗೊಳಿಸಿತ್ತು.
Critical Condition Turned Around with Timely Medical Intervention
Kalpa Media House | Bengaluru(WhiteFiled) | A 26-year-old man from West Bengal, who had been suffering from a serious condition...
Read moreDetails














