ನವದೆಹಲಿ,ಅ.6 ಸದಾ ಸುದ್ದಿಯಲ್ಲಿರುವ ಕೇಜ್ರಿವಾಲ್ ದೇಶಘಾತಕ ಚಿಂತನೆ ಹೊಂದಿರುವ ವ್ಯಕ್ತಿ ಎಂಬ ಆರೋಪಗಳಿಗೆ ಪುಷ್ಟಿ ನೀಡುವಂತೆ , ಇದೀಗ ಅವರು ನಮ್ಮ ಯೋಧರು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ನಿರ್ದಿಷ್ಟ ಗುರಿ ದಾಳಿ ನಡೆಸಿರುವುದಕ್ಕೆ ಪುರಾವೆಗಳನ್ನು ಕೇಳಿರುವುದು ಅವರನ್ನು ಪಾಕಿಸ್ಥಾನದಲ್ಲಿ ಭಾರೀ ಜನಪ್ರಿಯರನ್ನಾಗಿಸಿದೆಯಂತೆ !
ಪ್ರಧಾನಿ ಮೋದಿಯವರನ್ನು ದ್ವೇಷಿಸುವ ಹೀನರಾಜಕೀಯಕ್ಕಾಗಿ ,ಕಾಂಗ್ರೆಸ್ ಮತ್ತು ಕೇಜ್ರಿವಾಲ್ ಅವರು ನಮ್ಮ ಯೋಧರ ಸಾಹಸವನ್ನು ಅವಮಾನಿಸುವ ಹೀನ ರಾಜಕೀಯಕ್ಕಿಳಿದಿರುವುದು ದೇಶದಲ್ಲೀಗ ಭಾರೀ ಜನಾಕ್ರೋಶಕ್ಕೆ ಕಾರಣವಾಗಿರುವಂತೆಯೇ, ಪಾಕ್ನಲ್ಲಿ ಈ ಆಪ್ ಮತ್ತು ಕಾಂಗ್ರೆಸ್ ಜನಪ್ರಿಯವಾಗಿವೆ ಎಂಬ ವರದಿಗಳು ಬಂದಿವೆ.
ಕೇಜ್ರಿವಾಲ್ರ ಹುಂಬ ಹೇಳಿಕೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಒಬ್ಬರು ಕೇಜ್ರಿವಾಲ್ ಅವರಿಗೆ ಟಾಂಗ್ ನೀಡಿ, ಈಗ ಪಾಕಿಸ್ಥಾನದಲ್ಲಿ ಸಾರ್ವತ್ರಿಕ ಚುನಾವಣೆಯೇನಾದರೂ ನಡೆದರೆ, ಅದರಲ್ಲಿ ಕೇಜ್ರಿವಾಲ್ಗೆ 142ಸ್ಥಾನಗಳು ಲಭಿಸಲಿವೆ.ಪಾಕ್ ಪ್ರಧಾನಿ ನವಾಜ್ ಶರೀಫ್ರ ಆಳುವ ಪಾಕ್ ಮುಸ್ಲಿಂಲೀಗ್(ಎನ್)ಗೆ ಕೇವಲ 64ಸ್ಥಾನಗಳಷ್ಟೇ ದಕ್ಕಲಿವೆ. ಪಾಕಿಸ್ಥಾನ್ ಪೀಪಲ್ಸ್ ಪಾರ್ಟಿ(ಪಿಪಿಪಿ)ಗೆ 42ಸ್ಥಾನ, ಭಾರತ ವಿರೋ ಮತೀಯ ತೀವ್ರವಾದಿಗಳ ಬೆಂಬಲ ಪಡೆದ ಇಮ್ರಾನ್ಖಾನ್ನ ಪಾಟರ್ಿಗೆ ಕೇವಲ 15ಸ್ಥಾನಗಳಷ್ಟೇ ಸಿಗಲಿವೆ ಎಂದು ವ್ಯಂಗ್ಯವಾಡಲಾಗಿದೆ.
ಆದರೆ ಪಾಕ್ನಲ್ಲಿ ಅನೇಕ ಭಾರತ ವಿರೋಗಳು ಮಾತ್ರ, ಭಾರತದಲ್ಲಿ ಕೇಜ್ರಿವಾಲ್ ಒಬ್ಬರೇ ಸತ್ಯ ನುಡಿಯುವವರು ಎಂದು ಹೊಗಳಿದ್ದಾರೆ. ಒಬ್ಬ ಪಾಕಿಯಂತೂ ಕೇಜ್ರಿವಾಲ್ ಒಬ್ಬನೇ ಪ್ರಧಾನಿ ಮೋದಿಯವರನ್ನು ಸರ್ಜಿಕಲ್ ದಾಳಿಗಾಗಿ ಪ್ರಶ್ನಿಸುವ ಗಟ್ಸ್ ಹೊಂದಿರುವುದು. ಅವರ ಜೀವ ಈಗ ಅಪಾಯದಲ್ಲಿದೆ ಎಂದೆಲ್ಲ ಟ್ವೀಟ್ ಮಾಡಿದ್ದಾನೆ.ಇನ್ನೊಬ್ಬ ಪಾಕಿ ಕೇಜ್ರಿವಾಲ್ ಭಾರತದ ಏಕೈಕ ಪ್ರಾಮಾಣಿಕ ನಾಯಕ ಎಂದು ಬಣ್ಣಿಸಿದ್ದಾನೆ.ಕಾಶ್ಮೀರದಲ್ಲಿ ಜನಾಭಿಪ್ರಾಯ ಕೋರಬೇಕೆಂದು ಕೇಳುವ ಏಕೈಕ ಭಾರತೀಯ ನಾಯಕ ಕೇಜ್ರಿವಾಲ್ಗೆ ನನ್ನ ಸೆಲ್ಯೂಟ್ ಎಂದಿದ್ದಾನೆ ಮತ್ತೊಬ್ಬ ಪಾಕಿ.
ಭಾರತೀಯ ನಾಗರಿಕರೊಬ್ಬರು ಟ್ವೀಟ್ ಮಾಡಿ , ಇದೇ ರೀತಿ ಕೇಜ್ರಿವಾಲ್ ಮುಂದುವರಿದರೆ , ಆತ ಶೀಘ್ರವೇ `ನಿಶಾನ್ ಇ ಪಾಕಿಸ್ಥಾನ್'(ಪಾಕಿಸ್ಥಾನದ ಸರ್ವೋಚ್ಚ ಪುರಸ್ಕಾರ)ಗೆ ಪಾತ್ರವಾಗುವುದು ಖಂಡಿತ ಎಂದು ಕುಟುಕಿದ್ದಾರೆ.
Discussion about this post