No Result
View All Result
KRCS Shikaripura Achieves 100% Result in CBSE Class X Board Exams
English Articles

KRCS Shikaripura Achieves 100% Result in CBSE Class X Board Exams

by ಕಲ್ಪ ನ್ಯೂಸ್
April 16, 2026
0

Kalpa Media House  |  Shikaripura | Kumadvathi Residential Central School (KRCS), Shikaripura, has achieved a 100% pass result in the...

Read moreDetails
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

April 13, 2026
Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

April 13, 2026
  • Advertise With Us
  • Grievances
  • About Us
  • Contact Us
Saturday, April 25, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ನೆಲ, ಜಲಕ್ಕಿಂತ ರಾಜಕೀಯವೇ ಮುಖ್ಯ ಇದು ಕರ್ನಾಟಕದ ಹಣೆಬರಹ!

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 10, 2016
in Army
0
Share on FacebookShare on TwitterShare on WhatsApp
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕಾಗಿ ಇರುವ  ನ್ಯಾಯಾಧಿಕರಣದಿಂದ ಕರ್ನಾಟಕಕ್ಕೆ ನ್ಯಾಯ ಸಿಕ್ಕಿಲ್ಲ. ಇದರಿಂದ ಮತ್ತೆ ಕರ್ನಾಟಕ ಪ್ರತಿನಿತ್ಯ ೧೫ ಸಾವಿರ ಕ್ಯೂಸೆಕ್ಸ್ ನೀರನ್ನು ೧೦ ದಿನಗಳ ಕಾಲ ಹರಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿರುವುದರಿಂದ ಕರ್ನಾಟಕದಲ್ಲಿ ಆತಂಕ, ತಲ್ಲಣ ಎದುರಾಗಿ  ಹೋರಾಟ, ಬಂದ್ ನಡೆದಿದೆ. ಈ ಹಿನ್ನೆಲೆಯಲ್ಲಿ ವಿವಾದದ ಇತ್ಯರ್ಥಕ್ಕೆ ಪ್ರಧಾನಿ ಮಧ್ಯಪ್ರವೇಶ ಮಾಡಬೇಕಾದ ಅನಿವಾರ್ಯತೆ ಮತ್ತೆ ಎದುರಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಈ ಬಗ್ಗೆ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಕರ್ನಾಟಕದಲ್ಲಿನ ಮಳೆಯ ಅಭಾವ, ಜಲಾಶಯದ ಸ್ಥಿತಿಗತಿ, ಇಲ್ಲಿನ ಬೆಳೆ ಮತ್ತು ರೈತರಿಗೆ ಅವಶ್ಯವಿರುವ ನೀರಿನ ಪ್ರಮಾಣ ಇವೆಲ್ಲವನ್ನೂ ಪತ್ರದಲ್ಲಿ ವಿವರಿಸಿದ್ದಾರೆ. ನೀರು ಬಿಡಬೇಕೆಂಬ ಆದೇಶ ಬಂದು ನೀರು ಬಿಟ್ಟ ನಂತರ ಈ ಪತ್ರ ಬರೆಯುವ ಅವಶ್ಯಕತೆ ಇತ್ತೇ ಎನ್ನುವ ಪ್ರಶ್ನೆ ಒಂದೆಡೆಯಾದರೆ, ಇನ್ನೊಂದೆಡೆ, ಇದೇ ಕೆಲಸವನ್ನು ಎರಡು ದಿನಗಳ ಹಿಂದೆಯೇ ರಾಜ್ಯದಲ್ಲಿರುವ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸಾಂಸದರನ್ನು ಸೇರಿಸಿಕೊಂಡು ಮಾಡಬಹುದಿತ್ತಲ್ಲ ಎನ್ನುವ ವಿಚಾರವೂ ನಮ್ಮೆದುರು ಇದೆ.
ಕಾವೇರಿ ನೀರು ಬಿಡುವ ವಿಚಾರ ಬಂದಾಗಲೆಲ್ಲ ಆವೇಶಭರಿತರಾಗಿ ಮಾತನಾಡುವ ನಮ್ಮ ಜನಪ್ರತಿನಿಧಿಗಳು ಹೋರಾಟಕ್ಕೆ ಮಾತ್ರ ಕಣಕ್ಕಿಳಿಯುವುದಿಲ್ಲ. ವೀರಾವೇಶದ ಹೇಳಿಕೆ ನೀಡಿ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಾರೆ. ಆದರೆ ಈ ವಿವಾದ ಸದಾ ಮುಂದುವರೆಯಬಾರದು ಎನ್ನುವುದಾದರೆ ಏನು ಮಾಡಬೇಕೆನ್ನುವ ಬಗ್ಗೆ ಸ್ಪಷ್ಟ ಕಲ್ಪನೆಗಳೇ ಅವರಲ್ಲಿಲ್ಲ. ಕಾಂಗ್ರೆಸ್, ಬಿಜೆಪಿ  ಮತ್ತು  ಜೆಡಿಎಸ್ ಕೇವಲ ತಮ್ಮ ಮತಬ್ಯಾಂಕ್ ರಕ್ಷಣೆಯ ರಾಜಕಾರಣದಲ್ಲೇ ಕಾಲಕಳೆಯುತ್ತಿರುವುದರಿಂದ ಈ ವಿವಾದ ಎದುರಾದಾಗ ಒಬ್ಬರನ್ನೊಬ್ಬರು ಟೀಕಿಸುತ್ತಲೇ ಕಾಲಕಳೆಯುತ್ತಾರೆ.
ಆದರೆ ಈ ಸಮಸ್ಯೆ ರಾಜಕೀಯಾತ್ಮಕವಾದುದಲ್ಲ. ರಾಜ್ಯದ ಹಿತೃದಷ್ಟಿಯಿಂದ ಮಾಡಬೇಕಾದ ಕೆಲಸ ಎನ್ನುವುದು ಅವರ ಗಮನದಲ್ಲಿಲ್ಲ. ಮಾಜಿ ಮುಖ್ಯಮಂತ್ರಿ ದೇವೇಗೌಡರು ಮಾತ್ರ  ಕಾವೇರಿ ವಿಚಾರದಲ್ಲಿ ಸದಾ ಹೋರಾಟಕ್ಕೆ ಮುಂದಾದವರು. ಯಾರು ಏನೇ ಟೀಕಿಸಲಿ, ಈ ಸಂಬಂಧ ಅವರು ಮಣ್ಣಿನ ಮಗ ಹೌದು ಎನ್ನುವುದಕ್ಕೆ ತಾನು ಸಿಎಂ ಆದಾಗ ಮಾಡಿದ ತಂತ್ರಗಳನ್ನೇ ನಾವು ಗಮನಿಸಬಹುದು.
೧೯೯೫-೯೬ರ ಸಾಲಿನಲ್ಲಿ ಇಂತಹುದೇ ಸಮಸ್ಯೆ ಎದುರಾದಾಗ ದೇವೇಗೌಡರು ನೀರು ಬಿಡಲು ಸಿದ್ದರಾಗಿರಲಿಲ್ಲ. ಅಂದಿನ ಪ್ರಧಾನಿ ದಿ. ಪಿ.ವಿ. ನರಸಿಂಹರಾವ್ ಕರ್ನಾಟಕ ಸರ್ಕಾರದ ಕೋರಿಕೆಯ ಮೇರೆಗೆ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ವಿವಾದ ತಣ್ಣಗಾಗಿರಿಸಿದ್ದರು. ನಂತರ ಯಾರೂ ಈ ಕೆಲಸಕ್ಕೆ ಮುಂದಾಗದೆ ಸುಪ್ರೀಂ ಆದೇಶದಂತೆ ನೀರು ಬಿಡುತ್ತಲೇ ಖುರ್ಚಿಯಲ್ಲಿ ಉಳಿದರು.  ೯೫-೯೬ರಲ್ಲಿ ೩೦ ಟಿಎಂಸಿ ನೀರು ಬಿಡಲು ಸುಪ್ರೀಂ ಸೂಚಿಸಿತ್ತು. ಆದರೆ ದೇವೇಗೌಡರು ಇದಕ್ಕೆ ಸಮ್ಮತಿಸಿರಲಿಲ್ಲ. ಬದಲಾಗಿ ನ್ಯಾಯಾಧೀಕರಣಕ್ಕೆ ಹೋದರು. ಅಲ್ಲಿ ಅಹವಾಲು ಸಲ್ಲಿಸಿದರು.  ಆಗ ನ್ಯಾಯಾಧಿಕರಣ ೧೧ ಟಿಎಂಸಿ ನೀರು ಬಿಡಲು ಸೂಚಿಸಿತು. ಅದಕ್ಕೂ ಕರ್ನಾಟಕ ಜಗ್ಗಲಿಲ್ಲ. ನೀರು ಬಿಡಲು ಸಾಧ್ಯವೇ ಇಲ್ಲ ಎಂದಿತ್ತು. ಆದರೆ ಸುಪ್ರೀಂ ಕೋರ್ಟಿಗೆ ಮಾತ್ರ ನ್ಯಾಯಾಧೀಕರಣ ತೀರ್ಪು ಪಾಲಿಸಬೇಕು ಎಂದಿತ್ತು. ಆಗ ಅಂದಿನ ಪ್ರಧಾನಿ ನರಸಿಂಹರಾವ್ ಮಧ್ಯಪ್ರವೇಶಿಸಿ ಕೇವಲ ೬ ಟಿಎಂಸಿ ನೀರು ಬಿಡುವಂತೆ ಸೂಚಿಸಿ ವಿವಾದಕ್ಕೆ ತಾತ್ಕಾಲಿಕ ವಿರಾಮ ಹಾಡಿದ್ದರು.
ಇದನ್ನು ಗಮನದಲ್ಲಿಟ್ಟುಕೊಂಡು ಈಗ ಕರ್ನಾಟಕ ಸಹ ಪ್ರಧಾನಿಗೆ ಪತ್ರ ಬರೆದಿದೆ. ಪತ್ರ ಬರೆದಿದ್ದು ವಿಳಂಬವಾಗಿದೆಯಾದರೂ ಪ್ರಧಾನಿ ಇದನ್ನು ಒಪ್ಪಿ ಸಭೆ ಕರೆಯುವ ವೇಳೆ ನೀರು ಹರಿದು ಮುಗಿಯಬಹುದು. ಇಂದಿನ ಪ್ರಧಾನಿ ನರೇಂದ್ರ ಮೋದಿ ಸಭೆ ಕರೆದು ವಿವಾದಕ್ಕೆ ಮತ್ತೆ ವಿರಾಮ ಹಾಕಬೇಕಿದೆ. ಇದನ್ನು ಕರ್ನಾಟಕದ ಎಂಪಿಗಳು ಸಿಎಂಗಿಂತ ಮುನ್ನ ಮಾಡಬಹುದಿತ್ತು. ಕೇಂದ್ರದ ಸಚಿವರು, ರಾಜ್ಯದ ಬಿಜೆಪಿ ಅಧ್ಯಕ್ಷರು ಪ್ರಭಾವಿಗಳಾಗಿದ್ದರಿಂದ ಈ ಸಂಬಂಧ ಮುನ್ನುಗ್ಗಬಹುದಿತ್ತು.
ಇದೇನೇ ಇರಲಿ, ಪ್ರಧಾನಿ ಮಧ್ಯಪ್ರವೇಶ ಮಾಡಬೇಕೆಂಬ ಕೂಗು ಈಗ ಮತ್ತೆ ಬಲವಾಗತೊಡಗಿದೆ. ಬಂದ್ ಕರೆಕೊಟ್ಟರೂ ಬೆರಳೆಣಿಕೆಯಷ್ಟು ರಾಜಕಾರಣಿಗಳೂ ಇದರಲ್ಲಿ ಸಕ್ರಿಯರಾಗಿ ಪಾಲ್ಗೊಂಡಿಲ್ಲ. ಎಲ್ಲ ಪಕ್ಷದ ಶಾಸಕರು, ಸಾಂಸದರು ಪಾಲ್ಗೊಂಡು ಕರ್ನಾಟಕದ ಪರ ನಿಲ್ಲಬೇಕಿತ್ತು. ರಾಜ್ಯದ ಮೂರೂ ಪಕ್ಷದ ರಾಜಕಾರಣಿಗಳು ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ನಮ್ಮಲ್ಲಿ ತಮಿಳುನಾಡಿನಂತೆ ನೆಲ, ಜಲ, ಭಾಷೆ ಮತ್ತು ಜನರ ಹಿತ ಕಾಯುವ ಪಕ್ಷಗಳಿಲ್ಲದಿರುವುದು ಇಷ್ಟೆಲ್ಲ ಹಿನ್ನಡೆಗೆ ಕಾರಣ. ಇನ್ನೊಂದೆಡೆ, ಕಲಾವಿದರು, ಬುದ್ಧಿಜೀವಿಗಳು, ಸಾಹಿತಿಗಳು ಸಹ ತಮಗೂ ಈ ಬಂದ್‌ಗೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ.
ನವೆಂಬರ್‌ನಲ್ಲಿ ಮಾತ್ರ ಕನ್ನಡದ ಬಗ್ಗೆ ಮಾತನಾಡುವ ನಾವು  ಉಳಿದ ತಿಂಗಳಲ್ಲಿ ಕನ್ನಡ ನೆಲ, ಜಲಕ್ಕೆ ಅನ್ಯಾಯವಾದರೂ ಸುಮ್ಮನಿರುತ್ತೇವೆ. ಕಾವೇರಿ ಕೇವಲ ರೈತರ ವಿಚಾರವಲ್ಲ. ಸಮಸ್ತ ಕರ್ನಾಟಕ ರಾಜ್ಯಕ್ಕೆ ಸೇರಿದ್ದು ಎನ್ನುವುದು ಎಲ್ಲರ ಅರಿವಿಗೆ ಬರಬೇಕಿದೆ.
Share196Tweet123Send
Previous Post

ಕಾವೇರಿ ವಿಚಾರದಲ್ಲಿ ಸರ್ಕಾರದಿಂದ ಮೇಲ್ಮನವಿ : ಸಚಿವ ಕಾಗೋಡು ತಿಮ್ಮಪ್ಪ ಹೇಳಿಕೆ

Next Post

ಗೋಪಾಲ್ಸ್ ತಂಡದಿಂದ ಗೋಸೇವೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಗೋಪಾಲ್ಸ್ ತಂಡದಿಂದ ಗೋಸೇವೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಪುಸ್ತಕಗಳ ಅಧ್ಯಯನದಿಂದ ವ್ಯಕ್ತಿತ್ವ ವಿಕಸನ ಸಾಧ್ಯ: ಸುರೇಶ್ ಋಗ್ವೇದಿ ಅಭಿಪ್ರಾಯ

ಪುಸ್ತಕಗಳ ಅಧ್ಯಯನದಿಂದ ವ್ಯಕ್ತಿತ್ವ ವಿಕಸನ ಸಾಧ್ಯ: ಸುರೇಶ್ ಋಗ್ವೇದಿ ಅಭಿಪ್ರಾಯ

April 25, 2026
ಸನಾತನ ಸಂಸ್ಕೃತಿ, ಪರಂಪರೆಗೆ ಕಲ್ಪ ಡಿಜಿಟಲ್ ನ್ಯೂಸ್ ಕೊಡುಗೆ ಅನನ್ಯ: ಪಂಡಿತ ಹೇಮಂತ ಆಚಾರ್ಯ ಗುಡಿ

ಸನಾತನ ಸಂಸ್ಕೃತಿ, ಪರಂಪರೆಗೆ ಕಲ್ಪ ಡಿಜಿಟಲ್ ನ್ಯೂಸ್ ಕೊಡುಗೆ ಅನನ್ಯ: ಪಂಡಿತ ಹೇಮಂತ ಆಚಾರ್ಯ ಗುಡಿ

April 25, 2026
ಸಮವಸ್ತ್ರದೊಳಗಿನ ಅಪ್ಪಟ ಚಿನ್ನ | ಶ್ರೀ ಜಯಕರ ಐರೋಡಿ ಎಂಬ ಮಾನವೀಯತೆಯ ಮಹಾದನಿ

ಸಮವಸ್ತ್ರದೊಳಗಿನ ಅಪ್ಪಟ ಚಿನ್ನ | ಶ್ರೀ ಜಯಕರ ಐರೋಡಿ ಎಂಬ ಮಾನವೀಯತೆಯ ಮಹಾದನಿ

April 25, 2026
ಸಮಾಜದತ್ತ ನಮ್ಮ ಹೊಣೆಗಾರಿಕೆಯನ್ನು ಮರೆಯಬಾರದು | ಬ್ರಜೇಶ್ ಸಿಂಗ್

ಸಮಾಜದತ್ತ ನಮ್ಮ ಹೊಣೆಗಾರಿಕೆಯನ್ನು ಮರೆಯಬಾರದು | ಬ್ರಜೇಶ್ ಸಿಂಗ್

April 25, 2026
ಅಡಿಕೆ ಸಸಿ ಸಾಗಿಸುತ್ತಿದ್ದ ಲಾರಿ ಪಲ್ಟಿ: ತಪ್ಪಿದ ಭಾರೀ ಅನಾಹುತ

ಅಡಿಕೆ ಸಸಿ ಸಾಗಿಸುತ್ತಿದ್ದ ಲಾರಿ ಪಲ್ಟಿ: ತಪ್ಪಿದ ಭಾರೀ ಅನಾಹುತ

April 25, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL