ನವದೆಹಲಿ:ಅ-29: ನವೆಂಬರ್ 11, 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
ಜಪಾನ್ ಭೇಟಿ ವೇಳೆ ಪ್ರಧಾನಿ ಮೋದಿಯವರು, ಜಪಾನ್ ರಾಜ ಅಕಿಹಿಟೋ ಹಾಗೂ ಪ್ರಧಾನಿ ಶಿಂಜೊ ಅಬೆ ಜೊತೆ ಮಾತುಕತೆ ನಡೆಸಲಿದ್ದಾರೆ. ಈ?ವೇಳೆ ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ ಬೀಳುವ ಸಾಧ್ಯತೆಯಿದೆ. ಪರಮಾಣು ವಿದ್ಯುತ್ ಸ್ಥಾವರ ತಂತ್ರಜ್ಞಾನವನ್ನು ಭಾರತಕ್ಕೆ ರಫ್ತು ಮಾಡಲು ಮೋದಿ ಅವರ ಜಪಾನ್ ಪ್ರವಾಸ ಅನುವು ಮಾಡಿಕೊಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರು ಜಪಾನ್ ಪ್ರಧಾನಿ ಜತೆ ದ್ವಿಪಕ್ಷೀಯ, ಪ್ರಾದೇಶಿಕ ಹಾಗೂ ಜಾಗತಿಕ ವಿಷಯಗಳಲ್ಲಿ ಪರಸ್ಪರ ಸಹಕಾರ ಕುರಿತು ಸುದೀರ್ಘ ಸಮಾಲೋಚನೆ ನಡೆಸಲಿದ್ದಾರೆ. ಇದು ಉಭಯ ದೇಶಗಳ ನಡುವಣ ವಿಶಾಲ ವ್ಯಾಪ್ತಿಯ ಹಾಗೂ ಕ್ರಿಯಾಶೀಲ ಪಾಲುದಾರಿಕೆಯನ್ನು ಒಳಗೊಂಡಿರಲಿದೆ.
ನಾಗರಿಕ ಪರಮಾಣು ಸಹಕಾರ ಒಪ್ಪಂದ ಒಂದೆಡೆಯಾದರೆ, ಉನ್ನತ ತಂತ್ರಜ್ಞಾನ, ಭದ್ರತೆ ಮತ್ತು ಮೂಲಸೌಕರ್ಯ ವಿಚಾರದಲ್ಲಿ ಉಭಯ ದೇಶಗಳ ನಡುವೆ ಸಹಕಾರ ಹೆಚ್ಚಿಸುವ ಮಾಗರ್ೋಪಾಯಗಳು ಚಚರ್ೆಯಾಗಲಿವೆ. ಕಳೆದ ಡಿಸೆಂಬರ್ನಲ್ಲಿ ನಡೆದ ಸಭೆಯಲ್ಲಿ ಈ?ಬಗ್ಗೆ ಮೂಲ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಪರಮಾಣು ಪ್ರಸರಣ ನಿಷೇಧ ಒಡಂಬಡಿಕೆಗೆ ಸಹಿ ಹಾಕದ ದೇಶದ (ಭಾರತ) ಜತೆ ಜಪಾನ್ ಮಾಡಿಕೊಳ್ಳಲಿರುವ ಮೊದಲ ನಾಗರಿಕ ಪರಮಾಣು ಸಹಕಾರ ಒಪ್ಪಂದ ಇದಾಗಲಿದೆ.ಸೇನಾ ಉದ್ದೇಶ ಅಥವಾ ಅಣ್ವಸ್ತ್ರ ಪರೀಕ್ಷೆಗೆ ಬಳಕೆ ಮಾಡುವುದಿಲ್ಲ ಎಂಬ ಭರವಸೆಯೊಂದಿಗೆ ಜಪಾನ್ ದೇಶವು ಭಾರತಕ್ಕೆ ಪರಮಾಣು ತಂತ್ರಜ್ಞಾನವನ್ನು ಪೂರೈಸಲಿದೆ















