ನವದೆಹಲಿ, ಆ.28-ಪರಿಸರ ಸ್ನೇಹಿಯಾಗಿಗಣೇಶಚತುಥರ್ಿಯನ್ನುಆಚರಿಸುವಂತೆ ಕಿವಿಮಾತು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಮಣ್ಣಿನಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಆರಾಧಿಸುವಂತೆ ಸಲಹೆ ಮಾಡಿದ್ದಾರೆ.
ಮನ್ ಕಿ ಬಾತ್ (ಮನದ ಮಾತು) ಕಾರ್ಯಕ್ರಮದಲ್ಲಿಇಂದುದೇಶದಜನತೆಯನ್ನು ಉದ್ದೇಶಿ ಮಾತನಾಡಿದಅವರು, ವಿನಾಯಕಚೌತಿ ಮತ್ತುದುಗರ್ಾಷ್ಟಮಿಯನ್ನು ಪರಿಸರ ಸ್ನೇಹಿಯಾಗಿಆಚರಿಸಬೇಕು.ಈ ಆಚರಣೆಗಳು ಜನರ ಹಿತವನ್ನುರಕ್ಷಿಸುವಂತಿರಬೇಕುಎಂದು ಹೇಳಿದರು.
ಹಬ್ಬಗಳ ಆಚರಣೆಯ ಸಡಗರ-ಸಂಭ್ರಮಎಲ್ಲರಜೀವನದ ಅವಿಭಾಜ್ಯ ಅಂಗ. ಇಂಥ ಆಚರಣೆಗಳು ಅರ್ಥಪೂರ್ಣವಾಗಿರಬೇಕು.ಆದ್ದರಿಂದಜನರು ಪರಿಸರ ಸ್ನೇಹಿಯಾದ ಮಣ್ಣಿನಗಣೇಶ ಮೂತರ್ಿಗಳನ್ನು ಪ್ರತಿಷ್ಠಾಪಿಸಿ ಚತುಥರ್ಿಯನ್ನುಅರ್ಥಪೂರ್ಣವಾಗಿಆಚರಿಸಬೇಕುಎಂದು ಕಿವಿಮಾತು ಹೇಳಿದರು.
ಪರಿಸರರಕ್ಷಣೆ ವಿಷಯದ ಬಗ್ಗೆ ಮಾತನಾಡುತ್ತಿದ್ದಅವರುಒಂದು ಹಂತದಲ್ಲಿ ಕೊಪ್ಪಳ ಜಿಲ್ಲೆಯ ಮಲ್ಲಮ್ಮ ಎಂಬ ಬಾಲಕಿಯು ಶೌಚಾಲಯ ನಿಮರ್ಾಣಕ್ಕಾಗಿಧರಣಿ ನಡೆಸಿ ಅದರಲ್ಲಿಯಶಸ್ಸು ಸಾಧಿಸಿದ್ದನ್ನು ಪ್ರಶಂಸಿಸಿದರು.ನಮ್ಮದೇಶವು ಬಹಿರಂಗ ಬಹಿದರ್ೆಸೆಯಿಂದ ಮುಕ್ತವಾಗಬೇಕೆಂಬ ಆಂದೋಲನದ ಹಿನ್ನೆಲೆಯಲ್ಲಿಇದೊಂದು ದಿಟ್ಟ ಹೆಜ್ಜೆಎಂದು ಶ್ಲಾಘಿಸಿದರು.
ಜ ಮ್ಮು ಮತ್ತು ಕಾಶ್ಮೀರದಲ್ಲಿ ಭುಗಿಲೆದ್ದಿರುವ ಹಿಂಸಾಚಾರದ ಬಗ್ಗೆ ನೊಂದು ನುಡಿದಅವರು ಕಾಶ್ಮೀರ ಸಮಸ್ಯೆ ನಿವಾರಣೆಗೆ ಮಮತೆ ಮತ್ತುಏಕತೆ ಮೂಲಮಂತ್ರಎಂದುಅವರು ವ್ಯಾಖ್ಯಾನಿಸಿದರು. ಅಶಾಂತಿ ಸೃಷ್ಟಿಸಲು ಮಕ್ಕಳನ್ನು ಬಳಸಿಕೊಳ್ಳುವವರನ್ನೂ ಛೇಡಿಸಿದರು.ಮುಂದೆಇಂಥ ಮುಗ್ಧ ಮಕ್ಕಳು ಕೇಳುವ ಪ್ರಶ್ನೆಗೆಅವರುಉತ್ತರ ನೀಡಬೇಕಾಗುತ್ತದೆಎಂದು ಹೇಳಿದರು.
Discussion about this post