Read - < 1 minute
ಬೆಂಗಳೂರು, ಸೆ.16: ರಾಜ್ಯದ ಪೋಲೀಸ್ ಇಲಾಖೆಗೆ ಸಬ್ ಇನ್ಸ್ ಪೆಕ್ಟರ್ ಗಳು ಸೇರಿದಂತೆ 10441 ಮಂದಿ ಸಿಬ್ಬಂದಿಯನ್ನು ನೇಮಕ ಮಾಡುವ ಸಂಬಂಧ ಸರ್ಕಾರ ಇಂದು ಅಧಿಸೂಚನೆ ಹೊರಡಿಸಿದೆ.
ಈ ಪೈಕಿ 9897 ಮಂದಿ ಪೋಲೀಸ್ ಕಾನ್ಸ್ ಟೇಬಲ್ ಗಳು ಹಾಗೂ 544 ಪೋಲೀಸ್ ಸಬ್ ಇನ್ಸ್ ಪೆಕ್ಟರ್ ಗಳು ಇರಲಿದ್ದಾರೆ.
ಸಬ್ ಇನ್ಸ್ ಪೆಕ್ಟರ್ ಗಳ ಪೈಕಿ 398 ಮಂದಿ ಸಿವಿಲ್ ಇನ್ಸ್ ಪೆಕ್ಟರ್ ಗಳು ನೇಮಕಗೊಳ್ಳಲಿದ್ದು ಉಳಿದಂತೆ ಕರ್ನಾಟಕ ರಾಜ್ಯ ಮೀಸಲು ಪೋಲೀಸ್ ಪಡೆಯ ಸಬ್ ಇನ್ಸ್ ಪೆಕ್ಟರ್ ಗಳು ಸೇರಿದಂತೆ 146 ಮಂದಿ ನೇಮಕಗೊಳ್ಳಲಿದ್ದಾರೆ.
10441 ಮಂದಿ ಪೋಲೀಸ್ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆ ಸೆಪ್ಟೆಂಬರ್ 19 ರಂದು ಆರಂಭವಾಗಲಿದ್ದು ಈ ಹುದ್ದೆಗಳಿಗೆ ಅಂದಿನಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಲಿದೆ.
ಅದೇ ರೀತಿ ಅರ್ಜಿ ಸಲ್ಲಿಸಲು ಅಕ್ಟೋಬರ್ 13 ಕೊನೆಯ ದಿನವಾಗಿದ್ದು ಆನಂತರ ಲಿಖಿತ ಹಾಗೂ ಮೌಖಿಕ ಪರೀಕ್ಷೆಗಳು ನಡೆಯಲಿವೆ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ.
Discussion about this post