Read - < 1 minute
ನವದೆಹಲಿ, ಸೆ.16: ಸೆ.17 ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ. 66ನೇ ವರ್ಷಕ್ಕೆ ಪಾದಾರ್ಪಣೆ ಮಾಡಲಿರುವ ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ಸಿದ್ದತೆಗಳು ನಡೆದಿವೆ. ಈ ಸಂಭ್ರಮದ ದಿನದಂದು ಮೂರು ಗಿನ್ನಿಸ್ ಬುಕ್ ಆಫ್ ರೆಕಾರ್ಡ್, ಒಂದು ನ್ಯಾಷನಲ್ ರೆಕಾರ್ಡ್ ನಿರ್ಮಿಸುವ ಗುರಿ ಹೊಂದಲಾಗಿದೆ.
ಈ ಬಾರಿಯೂ ಪ್ರಧಾನಿ ಮೋದಿ ತಮ್ಮ ಹುಟ್ಟುಹಬ್ಬವನ್ನು ತಮ್ಮ ತಾಯಿಯ ಆಶೀರ್ವಾದ ತೆಗೆದುಕೊಂಡು ಸಿಹಿ ತಿನ್ನುವ ಮೂಲಕ ಆಚರಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಗುಜರಾತ್ ಸರ್ಕಾರ ವಿಶೇಷ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮೋದಿ ಜನ್ಮದಿನೋತ್ಸವಕ್ಕೆ ಗುಜರಾತ್ನಲ್ಲಿ ವಿಶೇಷ ಕಾರ್ಯಕ್ರಮಗಳು ಏರ್ಪಟ್ಟಿವೆ. ಗುಜರಾತ್ ನವಸಾರಿ ಜಿಲ್ಲೆಯಲ್ಲಿ ಸಂಘಟಕರು ಹೊಸ ದಾಖಲೆಗಳನ್ನು ನಿರ್ಮಿಸಿ ಅದನ್ನು ಮೋದಿ ಅವರಿಗೆ ಸಮರ್ಪಿಸಲಿದ್ದಾರೆ.
ರಾಜ್ಯ ಸರ್ಕಾರ ಈ ಸಂದರ್ಭದಲ್ಲಿ 11,223 ವಿಕಲಚೇತನರಿಗೆ 17,000 ಕಿಟ್ ಗಳನ್ನು ವಿತರಿಸಲಿದೆ. ಗಾಲಿಕುರ್ಚಿಯಲ್ಲಿ ಗರಿಷ್ಠ ಸಂಖ್ಯೆಯ (ಸುಮಾರು 1,000) ಜನರು ಒಂದೆಡೆ ಸೇರಿ ಒಂದು ಚಿತ್ರ ಅಥವಾ ಲಾಂಛನವನ್ನು ರೂಪಿಸಲಿದ್ದಾರೆ. 2ನ010ರಲ್ಲಿ ಅಮೆರಿಕದಲ್ಲಿ 346 ಮಂದಿಯ ಮೂಲಕ ಸೃಷ್ಟಿಯಾಗಿದ್ದ ದಾಖಲೆಯನ್ನು ಮುರಿಯುವುದು ಇದರ ಉದ್ದೇಶ.
ಅದೇ ರೀತಿ 1,000 ಶ್ರವಣ ಸಾಧನಗಳನ್ನು ನೀಡಿ ಆಸ್ಟ್ರೇಲಿಯಾದ ದಾಖಲೆಯನ್ನು ಅಳಿಸಿ ಹಾಕಲು ಸಿದ್ದತೆಗಳು ನಡೆದಿವೆ. ಹಾಗೆಯೇ ಫಲಾನುಭವಿಗಳಿಗೆ ಗಾಲಿಕುರ್ಚಿಗಳು, ಟ್ರೈಸೈಕಲ್ಗಳು, ಸೆರೆಬ್ರಲ್ ಪಾಸ್ಲಿ ರೋಗಿಗಳಿಗೆ ವಿಶೇಷ ಕುರ್ಚಿಗಳು, ಕ್ಯಾಲಿಪರ್ಸ್ ಗಳು, ಶೈಕ್ಷಣಿಕ ಕಿಟ್ಗಳನ್ನು ನೀಡಲಾಗುವುದು.
ಒಂದೇ ಸ್ಥಳದಲ್ಲಿ 1,500 ತೈಲ ದೀಪಗಳನ್ನು ಬೆಳಗಿಸಿ ಇನ್ನೊಂದು ನೂತನ ದಾಖಲೆಯನ್ನು ನಿರ್ಮಿಸಲು ಸಂಘಟಕರು ಯೋಜನೆ ರೂಪಿಸಿದ್ದಾರೆ.
Discussion about this post