ಉಡುಪಿ. ಸೆ:30- ಉರಿಗೆ ಉತ್ತರ ಭಾರತ ಸೈನಿಕರು ಪಾಕಿಸ್ತಾನದ ಉಗ್ರರ ನೆಲೆಯ ಮೇಲೆ ದಾಳಿ ಮಾಡಿರುವುದು ಉರಿ ದಾಳಿಗೆ ದಿಟ್ಟ ಪ್ರತೀಕಾರವಾಗಿದೆ. ಭಾರತೀಯ ಸೇನೆಯ ಕಾರ್ಯಾಚರಣೆ ಶ್ಲಾಘನೀಯ ಮತ್ತು ಭಾರತದ ದೃಢವಾದ ಪ್ರತಿಕ್ರಿಯೆ ಇದಾಗಿದೆ ಎಂದು ಪೇಜಾವರ ಶ್ರೀಗಳು ಹೇಳಿದರು.
ಹಿಂದೊಮ್ಮೆ ಅಮೆರಿಕಾ ಲಾಡೆನ್ ಮೇಲೆ ದಾಳಿ ಮಾಡಿತ್ತು. ಈಗ ಭಾರತ ಸೀಮಿತ ದಾಳಿಯ ಮೂಲಕ ಉಗ್ರರ ಅಡಗು ತಾಣವನ್ನು ಇಲ್ಲವಾಗಿಸಿದೆ. ದೇಶಗಳ ನಡುವೆ ಯುದ್ಧವಾಗಬಾರದು, ಪಾಕಿಸ್ತಾನದ ಬುದ್ಧಿ ಪರಿವರ್ತನೆಯಾಗಬೇಕು ಎಂದರು.
ಪ್ರಧಾನಿ ಮೋದಿಗೆ ಅಭಿನಂದನೆ….
ಹೇಳಿದ್ದನ್ನು ಮಾಡಿ ತೋರಿಸಿದ್ದರೆ. ಸೈನಿಕರ ಕಾರ್ಯಾಚರಣೆ ಮಹತ್ವದ್ದು. ಅವರಿಗೂ ನನ್ನ ಅಭಿನಂದನೆಯಿದೆ. ಮೋದಿಯದ್ದು ಮುತ್ಸದ್ಧಿತನದ ಕಾರ್ಯವಾಗಿದೆ. ಉಗ್ರರು ಬರ್ಬರವಾಗಿ ವರ್ತಿಸುತ್ತಾ ಬಂದಿದ್ದರು. ಈಗ ಭಾರತೀಯ ಸೈನಿಕರ ಸಹನೆಯ ಕಟ್ಟೆ ಒಡೆದಿದೆ. ಇಂತಹ ಕಾರ್ಯಾಚರಣೆ ಆಗಬೇಕೆಂಬ ಅಪೇಕ್ಷೆ ನನಗೂ ಇತ್ತು ಎಂದರು.
ಪಾಕಿಸ್ತಾನಿಗಳು ಸರಿಯಾದ ಪಾಠ ಕಲಿಯಬೇಕಿತ್ತು. ಎಷ್ಟೇ ಸಹನೆಯಿಂದ ವರ್ತಿಸಿದರೂ, ಅವರು ಪಾಠ ಕಲಿತಿರಲಿಲ್ಲ. ಪಾಕಿಗಳ ಧೋರಣೆ ಊಹೆಗೂ ನಿಲುಕದ್ದು, ಪಾಕಿಸ್ತಾನದ ಪ್ರಮುಖರು ಅಣಿಬಾಂಬ ದಾಳಿ ಬಗ್ಗೆ ಹೇಳ್ತಾರೆ. ಆದರೆ, ಹಾಗೆ ಆಗದಿರಲಿ. ಯುದ್ಧ ಘೋಷಣೆ ಬೇಡವೇ ಬೇಡ. ಪಾಕಿಸ್ತಾನೀಯರು ಎಂತಹ ಹೇಯ ಕೃತ್ಯಕ್ಕೂ ಸಿದ್ದರಿರುತ್ತಾರೆ. ನಾವು ಎಚ್ಚರದಿಂದ ಮುಂದಡಿಯಿಡ ಬೇಕು ಎಂದು ಪೇಜಾವರ ಶ್ರೀಗಳು ಹೇಳಿದರು.
Discussion about this post