Read - < 1 minute
ವಾಷಿಂಗ್ಟನ್, ಸೆ.2: ಅಮೆರಿಕಾದ ಫ್ಲಾರಿಡಾದ ಕೇಪ್ ಕನವೆರಲ್ನ ಸ್ಪೆಸ್ಎಕ್ಷ್ ಉಡಾವಣಾ ಸ್ಥಳದಲ್ಲಿ ನಿನ್ನೆ ಫಾಲ್ಕನ್ ರಾಕೆಟ್ 9 ಉಡ್ಡಯನದ ವೇಳೆ ಸಂಭವಿಸಿದ ಭಾರೀ ಸ್ಫೋಟದಲ್ಲಿ ರಾಕೆಟ್ ಮತ್ತು ಉಪಗ್ರಹ ಸಂಪೂರ್ಣ ಧ್ವಂಸಗೊಂಡಿದೆ. ಈ ದುರ್ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಆದರೆ ಅಪಾರ ಹಾನಿ ಉಂಟಾಗಿದೆ.
ಸ್ಪೆಸ್ಎಕ್ಸ್ ಲಾಂಚ್ ಸೆಂಟರ್ನಲ್ಲಿ ಬೆಳಿಗ್ಗೆ ತನ್ನ ಮಾನವರಹಿತ ರಾಕೆಟ್ ಪರೀಕ್ಷಾರ್ಥ ಹಾರಾಟವನ್ನು ನಡೆಸುತ್ತಿದ್ದಾರೆ ಭಾರೀ ಆಸ್ಫೋಟ ಸಂಭವಿಸಿತು. ಅಮೆರಿಕ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ-ನಾಸಾದ ಪಕ್ಕದಲ್ಲಿರುವ ಕೆಪ್ ಕನವೆರಲ್ ವಾಯುಪಡೆ ನೆಲೆಯಿಂದ ನಾಳೆ ಉದ್ದೇಶಿತ ಉಡಾವಣೆಗೆ ಮುನ್ನ ಸ್ಪೆಸ್ಎಕ್ಸ್ನಲ್ಲಿ ಈ ಪ್ರಯೋಗ ನಡೆಸಿದ ಕೆಲವೇ ಕ್ಷಣಗಳಲ್ಲಿ ದುರ್ಘಟನೆ ಸಂಭವಿಸಿತು.
ಈ ಸ್ಫೋಟದಲ್ಲಿ ಸಾವು-ನೋವು ಸಂಭವಿಸಿಲ್ಲ. ಆದರೆ 95 ದಶಲಕ್ಷ ಡಾಲರ್ ಮೌಲ್ಯದ ರಾಕೆಟ್ ಮತ್ತು ಉಪಗ್ರಹ ಸಂಪೂರ್ಣ ನಾಶವಾಗಿದೆ. ವಿಜ್ಞಾನಿಗಳ ಅಪಾರ ಪರಿಶ್ರಮ ವ್ಯರ್ಥವಾಗಿದೆ ಎಂದು ಉನ್ನತಾಧಿಕಾರಿಗಳು ಬೇಸರದಿಂದ ನುಡಿದಿದ್ದಾರೆ.
Discussion about this post