ನವದೆಹಲಿ, ಸೆ.3: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಒಕ್ಕೂಟದ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂ ಸುಸ್ತಿದಾರರಾಗಿರುವ ಮದ್ಯದ ದೊರೆ ವಿಜಯ್ ಮಲ್ಯಗೆ ಸೇರಿದ ಸುಮಾರು 6,630 ಕೋಟಿ ರೂಪಾಯಿ ಮೊತ್ತದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ದಾಳಿ ನಡೆಸಿದ್ದು, ಬೆಂಗಳೂರು, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿರುವ ಮಲ್ಯಗೆ ಸೇರಿದ ಶಾಪಿಂಗ್ ಮಾಲ್, ಫಾರ್ಮ್ ಹೌಸ್ ಹಾಗೂ ಅಪಾರ್ಟ್‌ಮೆಂಟ್‌ಗಳನ್ನು ಜಪ್ತಿ ಮಾಡಿದ್ದಾರೆ.
ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದ್ದು, ಇದರಂತೆ ಮಹಾರಾಷ್ಟ್ರದಲ್ಲಿ 200 ಕೋಟಿ ಮೌಲ್ಯದ ಫಾರ್ಮ್‌ಹೌಸ್, ಬೆಂಗಳೂರಿನಲ್ಲಿ 800 ಕೋಟಿ ಬೆಲೆ ಬಾಳುವ ಶಾಪಿಂಗ್ ಮಾಲ್, ಅಪಾರ್ಟ್‌ಮೆಂಟ್, 3 ಸಾವಿರ ಕೋಟಿ ಮೌಲ್ಯದ ಯುಬಿಎಲ್ ಸೇರಿದಂತೆ ಹಲವು ಆಸ್ತಿಯನ್ನು ವಶ ಪಡಿಸಿಕೊಳ್ಳಲಾಗಿದೆ.
ಎಸ್‌ಬಿಐ ಸೇರಿದಂತೆ ಹಲವು ಬ್ಯಾಂಕ್‌ಗಳಲ್ಲಿ ಮಲ್ಯ ಸಾಲ ತೆಗೆದಿದ್ದು, ಸುಮಾರು 9 ಸಾವಿರ ಕೋಟಿ ರೂ. ಸುಸ್ತಿದಾರರಗಾಗಿದ್ದಾರೆ. ಕಳೆದ ಮಾರ್ಚ್‌ನಲ್ಲಿ ದೇಶದಿಂದ ಪರಾರಿಯಾದ ಮಲ್ಯ ಅವರ ಪಾಸ್‌ಪೋರ್ಟ್‌ನ್ನು ಭಾರತ ಸರ್ಕಾರ ರದ್ದುಪಡಿಸಿದೆ.
Discussion about this post