ಬೀದರ್/ಕಲಬುರಗಿ/ಯಾದಗಿರಿ: ಸೆ:24: ಕಳೆದ ಎರಡುಮೂರು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಬೀದರ್, ಗುಲ್ಬರ್ಗ ಹಾಗೂ ರಾಯಚೂರು ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಜನಜೀವನ ತತ್ತರಗೊಂಡಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ.
ಬೀದರ್ ಜಿಲ್ಲೆಯೊಂದರಲ್ಲೇ ಸರಾಸರಿ 148 ಮಿ ಮೀ ಮಳೆಯಾಗಿದ್ದು, ಭಾಲ್ಕಿ ತಾಲ್ಲೂಕು ಒಂದರಲ್ಲೇ ಅತಿ ಹೆಚ್ಚು 195 ಮಿ ಮೀ ದಾಖಲೆಯ ಮಳೆಯಾಗಿದೆ.
ಇನ್ನೂ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ಅಬ್ಬರ ಇಂದು ಕೂಡ ಮುಂದುವರೆದಿದ್ದು ಔರಾದ್ ಮತ್ತು ಭಾಲ್ಕಿ ತಾಲೂಕಿನ ಮಾಂಜ್ರಾ ನದಿ ತಟದ ಸುಮಾರು 50ಕ್ಕೂ ಹಳ್ಳಿಗಳಲ್ಲಿ ಪ್ರವಾಹದ ಭೀತಿ ಎದುರಾಗಿದ್ದು ಜನ ಆತಕಂಕದಲ್ಲಿದ್ದಾರೆ. ಈ ಂಧ್ಯೆ ಸಾವಿರಕ್ಕೂ ಹೆಚ್ಚು ಮನೆಗಳು ಕುಸಿದಿವೆ.
ಬೀದರ್ ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಮೂರು ಪಟ್ಟು ಮಳೆಯಾಗಿದೆ.
ಮಳೆಯ ಹಿನ್ನೆಲೆಯಲ್ಲಿ ಅತಿವೃಷ್ಟಿ ಉಂಟಾದ ಗ್ರಾಮಗಳಿಗೆ ಬೆಳಗ್ಗೆ 12ರಿಂದ ಬೀದರ್ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಪ್ರವಾಸ ಕೈಗೊಂಡಿದ್ದು ಹಾನಿಯಾದ ಪ್ರದೇಶಗಳನ್ನ ಖುದ್ದು ಪರಿಶೀಲನೆ ಮಾಡಲಿದ್ದಾರೆ… ಇಂದು ಮತ್ತು ನಾಳೆಯೂ ಪ್ರವಾಸ ಮಾಡಲಿದ್ದಾರೆ
ಇನ್ನೂ ನಿನ್ನೆಯಿಂದ ಸುರಿದ ಮಳೆಗೆ ಜಿಲ್ಲೆಯ ರೈತರ ಕೈಗೆ ಬಂದ ಬೆಳೆ ಬಾಯಿಗೆ ಬರದಂತಾಯಿತು. ಬೆಳೆದಿದ್ದ ತೊಗರಿ, ಉದ್ದು, ಹೆಸರು, ಸೊಯಾಬಿನ್, ಎಳ್ಳು ಸಂಪೂರ್ಣ ನೀರು ಪಾಲಾಗಿದೆ.
ಜೆಸ್ಕಾಂ ಕಚೇರಿ ಮತ್ತು ಕ್ವಾಟರ್ಸ್ ಗೆ ನುಗ್ಗಿದ ನೀರು ಸಂಪೂರ್ಣವಾಗಿ ಮನೆಯಲ್ಲಿ ತುಂಬಿಕೊಂಡ ಮಳೆ ಈ ಹಿನ್ನೆಲೆಯಲ್ಲಿ ಮಕ್ಕಳು ಮಹಿಳೆಯರು ಮನೆಯಿಂದ ಹೊರಬಂದಿದ್ದಾರೆ.
ಇತ್ತ ನಾರಾಯಣಪುರ ಡ್ಯಾಂನಿಂದ ನೀರು ಬಿಟ್ಟಿರೋದ್ರಿಂದ ರಾಯಚೂರಿನಲ್ಲಿ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದು, ಲಿಂಗಸಗೂರಿನ ನಡುಗುಡ್ಡೆಯಲ್ಲಿ ನೂರಕ್ಕೂ ಹೆಚ್ಚು ಮೇಕೆಗಳು ನೀರಲ್ಲಿ ಕೊಚ್ಚಿಹೋಗಿವೆ. ಹಲವು ಸೇತುಗಳ ಜಖಂಗೊಂಡಿದ್ದು, ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಕಲಬುರಗಿಯಲ್ಲಿ ಕಳೆದ 50 ವರ್ಷದ ನಂತರ ದಾಖಲೆಯ 164 ಮಿಲಿ ಮೀಟರ್ ಮಳೆಯಾಗಿದ್ದು, ಡ್ಯಾಂಗಳೆಲ್ಲ ಭತರ್ಿಯಾಗಿ ಹಲವು ಗ್ರಾಮಗಳಲ್ಲಿ ಪ್ರವಾಹ ಉಂಟಾಗಿದೆ. ಇನ್ನು ಕಲಬುರಗಿಯಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಸೇಡಂನ ಗರ್ಭಿಣಿ ರಾಧಿಕಾ ಎಂಬಾಕೆ ತ್ರಿವಳಿ ಮಕ್ಕಳಿಗೆ ಅಂಬುಲೆನ್ಸ್ನಲ್ಲಿಯೇ ಜನ್ಮ ನೀಡಿದ್ದಾರೆ. 108 ಸಿಬ್ಬಂದಿ ಸುಲಭ ಹೆರಿಗೆ ಮಾಡಿಸಿದ್ದರು. ತಾಯಿ-ಮಕ್ಕಳು ಆರೋಗ್ಯವಾಗಿದ್ದು, ಜಿಲ್ಲಾಸ್ಪತ್ರೆಗೆ ಚಿಕಿತ್ಸೆಯಲ್ಲಿ ಪಡೆಯುತ್ತಿದ್ದಾರೆ.
ಈ ನಡುವೆ ಅತ್ತ ಆಂಧ್ರ ಹಾಗೂ ತೆಲಂಗಾಣದಲ್ಲಿ ಮಳೆಗೆ 13 ಮಂದಿ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲೂ ರಾತ್ರಿಯಿಂದ ಮಳೆ ಸುರಿಯುತ್ತಿದೆ. ಮುಂಜಾನೆಯೂ ತುಂತುರು ವರ್ಷಧಾರೆ ಆಗುತ್ತಿದೆ.
ಶಾಲಾ ಕಾಲೇಜುಗಳಿಗೆ ರಜೆ:
ಬೀದರ್ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಜನರು ಕಂಗಾಲಾಗಿದ್ದು, ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ರಜೆ ಘೋಷಿಸಿ, ಜಿಲ್ಲಾಧಿಕಾರಿ ಅನುರಾಗ ತಿವಾರಿ ಆದೇಶಿಸಿದ್ದಾರೆ.
ಎರಡು ದಿನದಲ್ಲಿ ಜಿಲ್ಲೆಯಲ್ಲಿ ಸುಮಾರು 148 ಮಿಮಿ ಮಳೆಯಾಗಿದ್ದು ವಾಡಿಕೆಗಿಂತ ಮೂರು ಪಟ್ಟು ಮಳೆಯಾದ ವರದಿಯಾಗಿದ್ದು… ಮಳೆಯಿಂದ 1154 ಮನೆಗಳ ಗೋಡೆ ಕುಸಿದಿವೆ. ಈ ಮಳೆ ಸೇ.28 ರವರೆಗೆ ಮುಂದುವರೆಯುವ ಲಕ್ಷಣ ಇದ್ದು ಮುನ್ನೇಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ..
ಮಳೆನೀರಿಗೆ ಬಾಲಕಸಾವು.
ಸಿಂಧನಕೇರಾ ಗ್ರಾಮದ ರೂಬೀನ್ ರವಿ ಲುಂಬೇನೂರ್ (7) ಮೃತಪಟ್ಟ ಬಾಲಕ.
ಸಿಂಧನಕೇರಾ ಗ್ರಾಮದ ತನ್ನ ಪತ್ತೆಯ ಮನೆಯಿಂದ ಸ್ವಂತಮನೆಗೆ ತೆರಳುತ್ತಿರುವ ಸಂಧರ್ಭದಲ್ಲಿ ರಸ್ತೆಯಲ್ಲಿ ನೀರು ತುಂಬಿಕೊಂಡಿದ್ದು, ರಸ್ತೆಯಲ್ಲಿ ಏದ್ದು ಗೊತ್ತಾಗದೆ ರಸ್ತೆ ಪಕ್ಕದಲ್ಲಿ ಮನೆ ನಿಮರ್ಾಣಕ್ಕೆ ಅಗೆದ ಐದು ಅಡ್ಡಿಆಳದ ಗುಂಡಿಗೆ ಬಿದ್ದು ಮೃತಪಟ್ಟಿದ್ದಾನೆ.
ಈ ಕುಳಿತು ಚಿಟಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲೆಲಿಲ್ಲ ಜನತೆ ಗೋಳು ಕೇಳುವವರು!
ಯಾದಗಿರಿ ಜಿಲ್ಲೆಯಾದ್ಯಂತ ವರುಣನ ಅರ್ಭಟ: ಜನಜೀವನ ಅಸ್ತವ್ಯಸ್ತ
ಯಾದಗಿರಿ: ಸೆ:24; ಕಳೆದ ಮೂರು ದಿನಗಳಿಂದ ಯಾದಗಿರಿ, ರಾಯಚೂರು, ಸುರುಪೂರು ಮತ್ತು ಶಹಪೂರು ಸೇರಿದಂತೆ ಎಲ್ಲೆಡೆ ವರುಣನ ಆರ್ಭಟವಾಗುತ್ತಿದ್ದು, ಜನ ಜೀವನವನ್ನು ಅಸ್ತವ್ಯಸ್ಥಗೊಳಸಿದೆ.
ನಗರದಲ್ಲಿ ಅತಿಕ್ರಮಣ ತೆರವುಗೊಳಿಸುವ ನೆಪದಲ್ಲಿ ಒಡೆದುಹಾಕಿದ ರಸ್ತೆ, ಚರಂಡಿ ಸೇರಿದಂತೆ ಇನ್ನಿತರ ಕಾಮಗಾರಿಗಳು ಕಳೆದ ಎರಡು ವರ್ಷಗಳಿಂದ ನನೆಗುದಿಗೆ ಬಿದ್ದ ಪರಿಣಾಮ ನಗರದ ಜನತೆಯ ಗೋಳು ಕೇಳುವವರಿಲ್ಲವಾಗಿದೆ.
ಮಳೆ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಜನತೆ ಸೇರಿದಂತೆ ದ್ವಿಚಕ್ರ ವಾಹನಗಳು, ತಳ್ಳುಬಂಡಿಗಳು ಎಲ್ಲರೂ ರಸ್ತೆ ಮೇಲಿನ ನೀರಿನ ಹೊಂಡಗಳಲ್ಲಿಯೇ ಸಂಚಿರುಸುವ ಪರಿಸ್ಥಿತಿ ನಿರ್ಮಾಣಬಾಗಿದೆ. ಆಟೋ ರಿಕ್ಷಾನಿಲ್ಲುವ ಜಾಗಗಳು ಮಿನಿ ಹೊಂಡಗಳಂತಾಗಿವೆ. ಇದರಿಂದ ರಿಕ್ಷಾಗಳನ್ನು ನೀರಿನಲ್ಲೇ ನಿಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದಲ್ಲಿ ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ಎಲ್ಲಿಯೂ ಆಟೋರಿಕ್ಷಾ ನಿಲ್ದಾಣ ಇಲ್ಲದೆ, ರಿಕ್ಷಾ ಡ್ರೈವರ್ಗಳು ಎಲ್ಲೆಂದರಲ್ಲಿ ಆಟೋ ನಿಲ್ಲಿಸುತ್ತಿದ್ದು ಆಟೋ ಡ್ರೈವರ್ ಗಳೊಂದಿಗೆ ಜನತೆಯೂ ಪರದಾಡುತ್ತಿದ್ದಾರೆ.
ರಸ್ತೆ ಬದಿಯಲ್ಲಿದ್ದ ಟೀ ಶಾಪ್ ಮತ್ತು ರಸ್ತೆ ಬದಿಯ ಅಂಗಡಿಗಳ ಲ್ಲಿದ್ದ ತರಕಾರಿಗಳು ಚಲ್ಲಾಪಿಲ್ಲಿಯಾಗಿ ರಸ್ತೆಗಳ ತುಂಬ ಹರಡಿಕೊಂಡ ಪರಿಣಾಮ, ರಸ್ತೆ ಸೇರಿದಂತೆ ರಸ್ತೆಬದಿಯು ಸಹ ಕೆಸರು ಗದ್ದೆಯಾಗಿದ್ದು, ಪಾದಚಾರಿಗಳು, ದ್ವಿಚಕ್ರವಾಹನ ಸವಾರರೂ ತೊಂದರೆ ಅನುಭವಿಸುತ್ತಿದ್ದಾರೆ.
ಶಾಲಾ ಮಕ್ಕಳಂತೂ ತಮ್ಮ ಸ್ಕೂಲ್ ಬ್ಯಾಗ್ ಜೊತೆಗೆ ಸಮವಸ್ತ್ರಕ್ಕೆ ಕೆಸರು ಸಿಂಚನವಾಗಿ ಎಲ್ಲಿ ಶಿಸ್ತು ಕ್ರಮ ಎದುರಿಸಬೇಕಾಗುತ್ತದೋ ಎಂದು ಜೀವ ಕೈಲಿ ಹಿಡಿದುಕೊಂಡೇ ಶಾಲೆಗೆ ಹೋಗುವಂತಾಗಿದೆ.
ನಗರದಲ್ಲಿ ಒಳಚರಂಡಿ ವ್ಯವಸ್ಥೆ, ಕಸದ ತೊಟ್ಟಿಯ ಸೌಲಭ್ಯ ಕೊರತೆ ಾರಣ ಜನರು ಕಸವನ್ನು ಮನೆ ಮುಂದೆ, ರಸ್ತೆಗಳ ಬದಿಯಲ್ಲಿ ಬಿಸಾಡುವುದರಿಂದ ನಗರದಲ್ಲಿಎ ಎಲ್ಲಿ ನೋಡಿದಲ್ಲಿ ಹಂದಿಗಳ ಹಾವಳಿ ಜಾಸ್ತಿಯಾಗಿದ್ದು, ಮಳೆಯಲ್ಲಿ ಕಸ, ಮೋರಿ, ಚರಂಡಿ ಎಲ್ಲವೂ ಒಂದೇ ಆಗಿ ವೀಪರೀತ ಸೊಳ್ಳೆಗಳ ಉತ್ಪಾದನಾ ಕೇಂದ್ರಗಳಾಗುತ್ತಿವೆ.
ಇದರಿಂದ ಡೆಂಗ್ಯೂ, ಮಲೇರಿಯಾನಂತಹ ಖಾಯಿಲೆಗಳು ಹರಡುತ್ತಿದ್ದು, ಇಂತಹ ಖಾಯಿಲೆಯಿಂದ ಸಾಕಷ್ಟು ಮಂದಿ ದವಾಖಾನೆಗೆ ಮುಖ ಮಾಡುತ್ತಿರುವುದು ಸಾಮಾನ್ಯವಾಗಿದೆ.
ಜನ ಪ್ರತಿನಿಧಿಗಳೇ ಸ್ಥಳಕ್ಕೆ ಭೇಟಿ ನೀಡಿ:
ಹಲವು ವರ್ಷಗಳಿಂದ ಯಾದಗಿರಿ, ಶಾಹಪೂರು, ಸುರಪೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ದಶಕಗಳಿಂದ ರಿಕ್ಷಾ ನಿಲ್ದಾಣ ಮತ್ತು ಬಸ್ ತಂಗುದಾಣವಿಲ್ಲದೆ ಮಳೆಗಾಲದಲ್ಲಿ ಜನರು ಪರದಾಡುತ್ತಿದ್ದಾರೆ. ಇಲ್ಲಿ ಜನತೆ ಸಂಕಟ ಪಡುತ್ತಿದ್ದರೆ, ಅತ್ತ ಜಿಲ್ಲಾ ಉಸ್ತುವಾರಿ ಮಂತ್ರಿ ಸೇರಿದಂತೆ ಶಾಸಕರು, ಸಂಸದರು, ಜಿತಾಪಂ ಸದಸ್ಯರು ಸಂಬಂಧಿಸಿದ ಸ್ಥಳೀಯ ಆಡಳಿತ ಮಂಡಳಿಗಳ ಪ್ರಮುಖರು ಹಾಯಾಗಿ ದೇಶವಿದೇಶ ಸುತ್ತುತ್ತಿದ್ದಾರೆ.
ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಆದಷ್ಟು ಬೇಗ ಭೇಟಿ ನೀಡಿ ಜನತೆ ಅನುಭವಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.
Discussion about this post