ಈ (ದುರ್)ಬುದ್ಧಿಜೀವಿಗಳ ಬಳಗ ಎಂಬ ಕಾಗೆ ಸಂತತಿ ಇದೀಗ ಹೊಸದೊಂದು ಜಯಂತಿ ಮಾಡಿದೆ.
ಅದುವೇ, ಮಾಹಿಷಾಸುರ ಜಯಂತಿ.
ಲೇಖಕರು: ಕೆ.ವಿ. ಅಜೇಯ ಸಿಂಹ
ಪುರಾಣವನ್ನೇ ಸುಳ್ಳು ಎಂದು ಸಾದ ಕಾಲ ಭೋಂಗಿಡುವ ಈ ಪ್ರಭೃತಿಗಳ ಕೈಗೆ ಅದು ಹೇಗೋ ಈ
ಮಹಿಷಾಸುರ ಸಿಲುಕಿಕೊಂಡಿದ್ದಾನೆ. ಇಡೀ ದೇಶವೇ ಇತ್ತೀಚೆಗೆ ತಾನೇ ಮಹಿಷಾಸುರ ಮರ್ದಿನಿ
ಅಂದರೆ ನಾಡದೇವಿ ತಾಯಿ ಚಾಮುಂಡೇಶ್ವರಿಯ ಆರಾಧನೆಯನ್ನು ವೈಭವಯುತವಾಗಿ ಮಾಡಿದೆ. ಈಗ
ಇವರಿಗೆ ಮಹಿಷಾಸುರನ ನೆನಪಾಗಿದೆ.
ಕೈ ಖಾಲಿಯಾದಾಗ ಹಳೇ ಲೆಕ್ಕ ತೆಗಿ ಎಂಬಂತೆ, ಬೇಡದಿದ್ದ ಟಿಪ್ಪುಜಯಂತಿಯನ್ನು
ಅನಗತ್ಯವಾಗಿ ಮಾಡಿಸಿದ ಈ ಬುಜೀ ಪಡೆ, ಈಗ ಮಹಿಷಾಸುರನ ಬೆನ್ನುಬಿದ್ದಿದೆ. ಈಗ
ದೇಶದಲ್ಲೆಲ್ಲೂ ವಿವಾದಾಸ್ಪದ ಸಂಗತಿಗಳಿಲ್ಲ. ಹೀಗಾಗಿ ಈ ಕಮ್ಯುನಿಷ್ಟರ ಕಣ್ಣು
ಮಹಿಷಾಸುರ ಮೇಲೆ ಬಿದ್ದಿದೆ. ಅದರಲ್ಲೂ ವಿವಾದಿತ ನೆಹರು ವಿಶ್ವವಿದ್ಯಾಲಯದಲ್ಲಿ
ಇದನ್ನು ಮಹಿಷಾಸುರ ದಲಿತ ಹೀಗಾಗಿ, ತನನ್ನು ವಧಿಸಿದ ದುರ್ಗಾಮಾತೆಯ ಆರಾಧನೆ
ಮಾಡಬಾರದು. ದಲಿತರು ಮಹಿಷ ಪ್ರಭುವನ್ನು ಆರಾಧಿಸಬೇಕು ಎಂಬ ಫತ್ವಾ ಹೊರಡಿಸಿದ್ದಾರೆ.
ಇಂತಹವರನ್ನು ಕಂಡೇ ಖ್ಯಾತ ನಾಟಕಕಾರ ಜಾರ್ಜ್ ಬರ್ನಾಡ್ ಷಾ ಹೇಳಿದ್ದು, ಗಡ್ಡ
ಬಿಟ್ಟವರೆಲ್ಲಾ ಬುದ್ಧಿಜೀವಿಗಳಲ್ಲ ಎಂದು.
ಪ್ರಶಸ್ತಿ, ಅಧಿಕಾರಗಳಿಗೋಸ್ಕರ ಕಂಡ ಕಂಡೆಲ್ಲಾ ಗಲೀಜು ನೆಕ್ಕುವ ಈ ವಲಯದವರಿಗೆ ಇನ್ನೂ
ದಲಿತ, ಸವರ್ಣೀಯ ಎಂಬುದೇ ಇನ್ನೂ ವಿಚಾರವಾಗಿದೆಲ್ಲಾ? ಇವರೆಂತಹ ಜಾತ್ಯತೀತ ಜೀವಿಗಳು?
ಝೆನ್ ಕಥೆಯೊಂದು ಹೀಗಿದೆ. ಹಿರಿಯ ಝೆನ್‌ಗುರು, ಕಿರಿಯ ಶಿಷ್ಯ ನದಿ ದಾಟಲು
ಬರುತ್ತಾರೆ. ಆಗ, ಮಹಿಳೆಯೋರ್ವಳು ನನ್ನನ್ನೂ ದಾಟಿಸಿ ಎನ್ನುತ್ತಾಳೆ. ಆಗ ಗುರು
ಹಿಂದೇಟು ಹಾಕುತ್ತಾನೆ. ಶಿಷ್ಯ ಇದನ್ನು ಗಮನಿಸಿದೇ ಅವಳನ್ನು ಅನಾಮತ್ತು ಹೆಗಲು ಮೇಲೆ
ಹೊತ್ತುಕೊಂಡು, ನದಿಯ ಆಚೆಯ ದಂಡೆಯಲ್ಲಿ ಇಳಿಸಿ, ಮುನ್ನಡೆಯುತ್ತಾನೆ. ನಂತರ ಸುಮಾರು,
೩ ಕಿಮೀ ಗುರು, ಶಿಷ್ಯರು ಸಾಗಿದರೂ ಗುರು ಇವನ ಬಳಿ ಮಾತನಾಡುವುದಿಲ್ಲ. ಏಕೆ ಎಂದು
ಶಿಷ್ಯ ಕೇಳಿದಾಗ, ನೀನು ಆ ಮಹಿಳೆಯನ್ನು ಸ್ಪರ್ಶಿಸಿ, ನದಿ ದಾಟಿಸಿದ್ದು ತಪ್ಪು
ಎನ್ನುತ್ತಾನೆ. ಇದನ್ನು ಕೇಳಿದ ಶಿಷ್ಯ ನಾನು ಅವಳನ್ನೇ ಇಳಿಸಿ ಬಂದೇ, ನೀವು
ಇಲ್ಲಿಯವರೆಗೂ ಹೊತ್ತುಕೊಂಡು ಬಂದಿರಾ ಎನ್ನುತ್ತಾನೆ.
ಈ ಸೋ ಕಾಲ್ಡ್ ಜಾತ್ಯತೀತರೆಂಬ ಜಾತಿವಾದಿಗಳ ಹಣೆಬರಹವೂ ಇಂತಹುದ್ದೇ. ಇಡೀ ಜಗತ್ತು
ಇಂದು ಭಾರತದತ್ತ ಮುಖ ಮಾಡಿದೆ. ಜಾಗತಿಕ ಸಂಘರ್ಷ, ಬಿಕ್ಕಟ್ಟು, ವಿದ್ಯಮಾನಗಳಲ್ಲಿ
ಭಾರತದ ನಿಲುವು ಏನು ಎಂಬುದನ್ನು ತಿಳಿಯಲು ಕಾತುರವಾಗಿರುತ್ತದೆ. ಇಲ್ಲಿ ಮಾತ್ರ ಇನ್ನೂ
ಜಾತಿ, ಜಯಂತಿಗಳಲ್ಲೇ ಒದ್ದಾಡುತ್ತಾ ಇದ್ದಾರೆ. ಸಲಹೆಗಾರರ ಸೋಗಿನಲ್ಲಿ, ಇಲ್ಲದ
ತಲೆಪ್ರತಿಷ್ಠೆ ಮಾಡುತ್ತಿದ್ದಾರೆ. ದೇಶ ಉಗ್ರದಮನಕ್ಕೆ ಮುಂದಾದರೆ, ಅದಕ್ಕೆ ಸಾಕ್ಷಿ
ಕೇಳುತ್ತಾರೆ. ವಿದೇಶಿ ಬಾಂಧವ್ಯ ವೃದ್ಧಿಗಾಗಿ ಪ್ರಧಾನಿ ಹೊರ ಸಂಚಾರ ಮಾಡಿದರೆ ಹಣವ್ಯಯ
ಎನ್ನುತ್ತಾರೆ. ಕಾವೇರಿ ತೀರ್ಪಿನ ಬಗ್ಗೆ, ರಾಜ್ಯ ಸರ್ಕಾರದ ಹಾಗೂ ೧೫೦ ವರ್ಷವಾದವರಂತೆ
ಕಾಣುವ ವಕೀಲರ ಅಸಮರ್ಥ ವಾದ ಖಂಡಿಸದೇ, ಕೇಂದ್ರದತ್ತ ಕೈತೋರುತ್ತಾರೆ. ದೂರದ ನಡೆದ
ಹತ್ಯೆಯನ್ನು ಕಂಡಿಸಿ, ಟೌನ್‌ಹಾಲ್ ಮೆಟ್ಟಿಲ ಧೂಳು ಹಾರಿಸುತ್ತಾರೆ. ಸಂಘಪರಿವಾರದ
ಮೇಲಿನ ದೌರ್ಜನ್ಯ, ರುದ್ರೇಶ್ ಹತ್ಯೆಯಾದಾಗ, ಕಣ್ಣು, ಕಿವಿ. ಮೂಗು ಮುಚ್ಚಿಕೊಂಡು
ಇರುತ್ತಾರೆ.
ಇದನ್ನೆಲ್ಲಾ ಕಂಡಾಗ ಒಂದು ಶಂಕೆ ವ್ಯಕ್ತವಾಗುತ್ತದೆ. ಈ ಕೆಂಪು ಉಗ್ರ ಮನಸ್ಥಿತಿಯ
ಕಮ್ಮಿನಿಷ್ಟರಿಗೆ ಪಶ್ಚಿಮ ಬಂಗಾಳ, ಕೇರಳದ ನಂತರ ಕರ್ನಾಟಕ ತಮ್ಮ ತೆವಲು
ತೀರಿಸಿಕೊಳ್ಳುವ ಪ್ರಯೋಗಶಾಲೆಯಾಗುತ್ತಿದೆಯೇ ಎನಿಸುತ್ತಿದೆ. ಇವರ ಮಖೇಡಿತನಕ್ಕೆ,
ಅಪಸವ್ಯಗಳಿಗೆ, ಹೇತ್ಲಾಂಡಿತನಕ್ಕೆ ಇತ್ತೀಚಿನ ಸಾಕ್ಷಿ ಉಡುಪಿ. ವಯೋವೃದ್ಧರೂ,
ಜ್ಞಾನವೃದ್ಧರೂ ಆದ ಪೇಜಾವರ ಶ್ರೀಗಳನ್ನು, ಜಿಗ್ನೇಶಿಯಂತಹವರು ತಮ್ಮ ಭಾಷಣದಲ್ಲಿ
ಜರಿಯುತ್ತಾರೆ. ತಲೆಯ ಮೇಲೆ, ಒಳಗೆ ಏನೂ ಇಲ್ಲದವರೂ ಅಸಂಬದ್ಧ ವೃಥಾಪ್ರಲಾಪ
ಮಾಡುತ್ತಾರೆ. ಇದನ್ನು ಕೆಲವು ಅರೆಬೆಂದ ಮನಸುಗಳು ಕೈತಟ್ಟಿ ಸ್ವಾಗತಿಸುತ್ತಾರೆ.
ದುರಂತವೆಂದೆರೆ, ವೇದಿಕೆಯಲ್ಲಿದ್ದ ಹಲವರಿಗೆ ಅದರ ಹಿಡನ್ ಅಜೆಂಡಾ ಗೊತ್ತೇ ಇರಲಿಲ್ಲ
ಎಂಬ ಅಂಬೋಣದ ಜೊತೆಯಲ್ಲೇ ಸಮಾಜವನ್ನು ಒಡೆಯಲು ಜಾತಿ ಹಾಗೂ ವೈಯಕ್ತಿಕ ಪದ್ದತಿಗಳು,
ಆಚಾರ ವಿಚಾರಗಳನ್ನೇ ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಾರೆ ಎನ್ನುವುದು ದುರಂತ.
ಅಂತಿಮವಾಗಿ ವೈಜ್ಞಾನಿಕ ಯುಗದಲ್ಲಿ ಇಂತಹ ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಳ್ಳುವುದು
ಭಾವನತ್ಮಕ ವಿಚಾರವೇ ಎನ್ನುವುದು ಗಮನಾರ್ಹ ಸಂಗತಿ.
ಬುದ್ಧಿಜೀವಿಗಳೇ ಈ ಕುರಿತು ಧ್ವನಿ ಎತ್ತುವಿರಾ?
*ರಾಜ್ಯದಾದ್ಯಂತ ಪಾನ ನಿಷೇಧ
(ಅಪ್ಪನಾಣೆ ಸಾಧ್ಯವಿಲ್ಲ. ಇದಾದರೆ ನಾವೇನು ಕುಡಿಯಬೇಕು)
*ಶಂಕರ ಜಯಂತಿ, ಹೆಡಗೆವಾರ್, ಗುರೂಜಿ ಸ್ಮರಣೆ….
( ಊಹೂಂ, ನಮಗೆ ಒಳ್ಳೆಯವರ ಬಗ್ಗೆ ಗೊತ್ತಿಲ್ಲ. ತಿಳಿದುಕೊಳ್ಳುವುದಿಲ್ಲ)
*ಕೋಸೌವೇ ಪ್ರಾಯೋಜಕತ್ವದಲ್ಲಿ ಆರ್‌ಎಸ್‌ಎಸ್ ಪಥಸಂಚಲನ, ಸಾರ್ವಜನಿಕ ಗಣೇಶೋತ್ಸವ
(ಅಯ್ಯೋ,ಅಮ್ಮಾ…, ಅನ್ನ ತಿನ್ನೋ ಬಾಯಲ್ಲಿ, ನೆಟ್ಟಗೆ ಮಾತನಾಡ್ರೀ)
*ರಾಣಾ ಪ್ರತಾಪ್, ಶಿವಾಜಿ, ವಿವೇಕಾನಂದರ ಸಾಧನೆ…
(ಸುಮ್ಮನಿರ‌್ರಿ, ನಮ್ಮ ಆದಾಯದ ಮೂಲಕ್ಕೆ ಕತ್ತರಿ)
*ಸಂಸ್ಕೃತೋತ್ಸವ, ವೈದಿಕ ಸಾಹಿತ್ಯ, ವೇದವಿಜ್ಞಾನದ ಬಗ್ಗೆ ಬರವಣಿಗೆ
(ನಮ್ಮ ಸಂತತಿ ಇದ್ದರೆ, ನಾವು ೨೨೦೦ರಲ್ಲಿ ಕೂಡಾ ಇದರ ಬಗ್ಗೆ ಬರಿಯಲ್ಲ)
*ಕಾವೇರಿ ತೀರ್ಪು, ರೈತರ ಸಂಕಷ್ಟ, ಬರಗಾಲ, ಅಸಮರ್ಥ ಸಚಿವರು
(ಹೋಗ್ರಿ ರೀ, ನಮಗೆ ಜಾತಿ ಬಗ್ಗೆ ಯೋಚಿಸಕ್ಕೆ ಟೈಮಿಲ್ಲ. ನಿಮ್ಮದೊಂದು..)
*ಮೀಸಲಾತಿ, ಜಾತಿ ಕಲಂ ಬೇಡ. ಏಕರೂಪ ನಾಗರಿಕ ಸಂಹಿತೆ ಬೇಕು..
(ಸ್ಟಾಪ್ ಇಟ್, ಏನ್ರೀ ನಮ್ಮ ಗಂಜಿಗೆ ಕಲ್ಲು ಹಾಕ್ತೀರಿ.. ಎದ್ದುಹೋಗ್ರೀ)
*ಭೈರಪ್ಪ, ಚಿದಾನಂದಮೂರ್ತಿ ಇನ್ನಿತರರ ಸಂಶೋಧನೆ…
(ಕ್ಷಮಿಸಿ, ನಾವು ಅದನ್ನು ಓದಿಲ್ಲ, ಓದಲ್ಲ. ಏಕೆಂದರೆ, ಅದರಲ್ಲಿ ಕೋಮುಪ್ರಜ್ಞೆ ಇದೆ)
ಬುದ್ಧಿಜೀವಿ ಸಂಹಿತೆ ಹೀಗಿರಬಹುದೇ?
*ಕುಂಕುಮ ಹಚ್ಚಿದವರೆಲ್ಲಾ ಕೋಮುವಾದಿಗಳು ಎಂದು ಪರಿಗಣಿಸು.
*ಕೆರೆಯಲು ಹುಣ್ಣು ಇಲ್ಲದಿದ್ದರೆ, ಸೃಷ್ಟಿ ಮಾಡು. ಉದಾ: ಟಿಪ್ಪು, ಉಡುಪಿ
*ಸಂಘಪರಿವಾರದವರನ್ನು ದ್ವೇಷಿಸು, ನಮ್ಮ ನಿಷ್ಠೆ ಕಮ್ಮಿನಿಷ್ಠತೆಗೆ
*ಪರಿವಾರದವರ ಹತ್ಯೆ ಸಹಜ, ಗೋಸಾಗಾಟಗಾರನ ಸಾವು ಅಮಾಯಕನ ಬಲಿ
*ಸದಾ ಕಾಲ ಮೋದಿಯನ್ನು ತೆಗಳಿ, ಉಗ್ರ ಮನಸ್ಥಿತಿಯನ್ನು ಹೊಗಳಿ.
*ತಮಗೆ ಬೇಕಾದ ಜಾತಿಯವನ ಪರ ನಿಲ್ಲಿ, ಅದುವೇ ಜಾತ್ಯತೀತತೆ
*ಉಗ್ರ ದಮನ ಸಲ್ಲ, ಉಗ್ರ ಪೋಷಣೆ ಮಾನ್ಯ.
*ನಾವು ಬದುಕೋಣ, ಬೇರೆಯವರ ಗೋಜು ನಮಗೆ ಬೇಡ
*ರೈತರು,ದಲಿತರು, ವಿದ್ಯಾರ್ಥಿಗಳು ನಮ್ಮ ಸಿದ್ಧಾಂತದ ಗಿನಿಪಿಗ್ಸ್
Discussion about this post