ಮುಂಬೈ:ಸೆ-13;ಬೆಂಗಳೂರಿನ ರೋಶ್ಮಿತಾ ಹರಿಮೂತರ್ಿ ಮಿಸ್ ದಿವಾ-2016 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.ಈ ಮೂಲಕ 2017ನೇ ಸಾಲಿನ ಭುವನ ಸುಂದರಿ ಸ್ಪರ್ದೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.
ಪ್ರಸ್ತುತ ಇಂಟರ್ನ್ಯಾಷನಲ್ ಬ್ಯುಸಿನೆಸ್ನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ 22 ವರ್ಷದ ರೋಶ್ಮಿತಾ 15 ಪ್ರತಿಸ್ಪರ್ದೆ ಗಳನ್ನು ಹಿಂದಿಕ್ಕಿ ಮಿಸ್ ದಿವಾ-2016 ಕಿರೀಟ ಮುಡಿಗೇರಿಸಿಕೊಂಡರು.
ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ ಮಂಗಳೂರಿನ ಶ್ರೀನಿಧಿ ಆರ್. ಶೆಟ್ಟಿ, “ಮಿಸ್ ದಿವಾ ಸುಪ್ರಾನ್ಯಾಶನಲ್ 2016′ ಪ್ರಶಸ್ತಿ ಗಳಿಸಿದ್ದಾರೆ. ಅಸ್ಸಾಂನ ಆರಾಧನಾ 2ನೇ ರನ್ನರ್ ಅಪ್ ಆದರು. ಅಂತಿಮ ಸುತ್ತಿನಲ್ಲಿ ಒಟ್ಟು 16 ಮಂದಿ ಇದ್ದರು.
ಮಿಸ್ ದಿವಾ-2016 ರೋಶ್ಮಿತಾ ತಮ್ಮ ಸಂತಸ ಹಮ್ಚಿಕೊಂಡಿದ್ದು, ಸದ್ಯದಲ್ಲೇ ಮಿಸ್ ಯುನಿವರ್ಸಲ್ ಸ್ಪರ್ದೆ ಗೆ ತಯಾರಿ ನಡೆಸಲಿದ್ದೇನೆ. ಮಿಸ್ ದಿವಾ ಇದು ನನಗೆ ಉತ್ತಮ ಎಕ್ಸ್ಪಿರಿಯನ್ಸ್, ಬಹಳ ವರ್ಷಗಳಿಂದ ಭಾರತ ಮಿಸ್ ಯುನಿವಸರ್್ ಕಿರೀಟವನ್ನು ಪಡೆದಿಲ್ಲ. ಮುಂದಿನ ವರ್ಷ ಮಿಸ್ ಯುನಿವಸರ್್ ಕಿರೀಟವನ್ನು ಭಾರತಕ್ಕೆ ತರಬೇಕೆಂಬ ಪ್ರಯತ್ನದಲ್ಲಿದ್ದೇನೆ. ಆ ವಿಶ್ವಾಸ ನನಗಿದೆ ಎಂದಿದ್ದಾರೆ.
ಸ್ಪರ್ದೆಯ ತೀಪರ್ುಗಾರರ ಸಮಿತಿಯಲ್ಲಿ ಮಾಜಿ ಭುವನಸುಂದರಿ, ನಟಿ ಲಾರಾ ದತ್ತ, ನಟರಾದ ಅಜರ್ುನ್ ರಾಂಪಾಲ್, ಅಭಯ್ ಡಿಯೋಲ್, ನಟಿ ಅದಿತಿ ರಾವ್ ಹೈದರಿ, ಫ್ಯಾಷನ್ ಡಿಸೈನರ್ ಗೌರವ್ ಗುಪ್ತಾ ಇದ್ದರು.













