ವಿಶ್ವವಿಖ್ಯಾತ ಮೈಸೂರು ದಸರಾ ಮೆರವಣಿಗೆಗೆ ಮೆರಗು ನೀಡಲು ಅಕ್ಟೋಬರ್ 11 ರಂದು ನಡೆಯಲಿರುವ ದಸರಾ ಮೆರವಣಿಗೆಗೆ ಉಡುಪಿ ಜಿಲ್ಲೆಯ ವತಿಯಿಂದ ಪರ್ಕಳ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಯಕ್ಷಗಾನ ಮಂಡಳಿಯ ಸದಸ್ಯರು ಮೈಸೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ವಿವಿಧ ವೇಷಗಳು ಮಹಿಷಮದರ್ಿನಿ ಮಹಿಷಾಸುರ ಬೆಂಕಿ ಉಗುಳುವ ರಕ್ಕಸ ಭೂತಾನಿ ವೈವಿಧ್ಯಮಯ ಯಕ್ಷಗಾನ ವೇಷ, ಉಡುಪಿ ಶೈಲಿಯ ಹುಲಿವೇಷ ಮರಕಾಲು ವೇಷ, ನಾಗಸ್ವರ, ತಾಸೆವಾಧಕರು ಮತ್ತು ಚೆಂಡೆವಾದಕ ರೊಂದಿಗೆ ಈ ಬಾರಿ ವಿಶೇಷವಾಗಿ ಶಿವರಾಜ್ ನಾಯ್ಕ್ ಕೆಳಪರ್ಕಳ ಹುಲಿವೇಷ ಧರಿಸಿ ದಸರದ ಮೆರವಣಿಗೆಯಲ್ಲಿ ಬೆಂಕಿ ಉಗುಳುವುದರೊಂದಿಗೆ ಆಯ್ದ ಕಡೆ ಸರ್ಕಲ್ ನಲ್ಲಿ ಬಾಯಿಯಲ್ಲಿ ತೆಂಗಿನ ಕಾಯಿ ಸಿಪ್ಪೆ ಸುಲಿಯುವುದರೊಂದಿಗೆ ಸ್ಥಳದಲ್ಲಿಯೇ ಕೈ ಮೂಲಕವೇ ತೆಂಗಿನ ಕಾಯಿಯನ್ನು ಒಡೆಯುವುದರ ಮೂಲಕ ಸಾಹಸ ಪ್ರದರ್ಶನ ನೀಡುವುದರ ಮೂಲಕ ಜನಾಕರ್ಷಣೆ ಪ್ರದರ್ಶನ ನೀಡಲಿದ್ದಾರೆ. ಎಂದು ಮಂಡಲಿಯ ಸಂಚಾಲಕರು ಮುರಳೀಧರ ನಕ್ಷತ್ರಿ, ಕಲಾವಿಧ ರಂಜಿತ್ ಶೆಟ್ಟಿ ಸಣ್ಣಕ್ಕಿಬೆಟ್ಟು, ಸಂತೋಷ್ ಕುಮಾರ್, ರವಿ ಶೆಟ್ಟಿ ಕೆಳಪರ್ಕಳ, ಸತೀಶ್, ಮಹೇಶ್, ಮತ್ತಿತರರು ಉಪಸ್ಥಿತರಿದ್ದರು ಎಂದು ಗಣೇಶ್ ರಾಜ್ ಸರಳೇಬೆಟ್ಟು ತಿಳಿಸಿದ್ದಾರೆ.
Discussion about this post