ಅವರು ಉಡುಪಿ ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಕೋಷ್ಠ ಏರ್ಪಡಿಸಿದ ಮಾಧ್ಯಮ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಮುಕ್ಯ ಅತಿಥಿಯಾಗಿದ್ದ ಬಿಜೆಪಿ ರಾಜ್ಯ ಬಿಜೆಪಿ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ, ಎಲ್ಲಾ ರಂಗಗಳಲ್ಲಿಯೂ ಸ್ಪರ್ಧೆ ಪೈಪೋಟಿ ಇರುವಂತೆ ಮಾಧ್ಯಮ ಕ್ಷೇತ್ರವೂ ಅದಕ್ಕೆ ಹೊರತಲ್ಲ. ಪ್ರಚಾರ ಮಾಧ್ಯಮ ಜನಜೀವನದ ಮುಖ್ಯ ಅಂಗವಾಗಿದೆ. ರಾಜಕೀಯ ಕಾರ್ಯಕರ್ತರಿಗೆ ಮಾಧ್ಯಮ ನಿರ್ವಹಣೆಯ ಸಂಪೂರ್ಣ ಅರಿವು ಅಗತ್ಯವಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಜಿಲ್ಲಾ ವಕ್ತಾರ ಕಟಪಾಡಿ ಶಂಕರ ಪೂಜಾರಿ, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ವಿಜಯ ಕುಮಾರ್ ಉದ್ಯಾವರ ವೇದಿಕೆಯಲ್ಲಿದ್ದರು.
ಜಿಲ್ಲಾ ಮಾಧ್ಯಮ ಪ್ರಕೋಷ್ಠ ಸಂಚಾಲಕಿ ಪೂರ್ಣೀಮಾ ಸುರೇಶ್ ಸ್ವಾಗತಿಸಿ, ಸಹಸಂಚಾಲಕಿ ತಾರಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಧ್ಯಾ ರಮೇಶ್ ವಂದಿಸಿ, ಜಿ. ಪಂ. ಸದಸ್ಯೆ ರೇಶ್ಮಾ ಉದಯ ಶೆಟ್ಟಿ ಪರಿಚಯಿಸಿದರು.
ನಂತರ ಜಿಲ್ಲೆಯ ಹಿರಿಯ ಪತ್ರಕರ್ತರಿಂದ ಮಾಧ್ಯಮ ಕಾರ್ಯಾಗಾರ ಜರಗಿತು.
Discussion about this post