Read - < 1 minute
ಪಾಟ್ನಾ, ಸೆ.14: ಬಿಹಾರದಲ್ಲಿ ಪತ್ರಕರ್ತರ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಶಾರ್ಪ್ ಶೂಟರ್ ಮೊಹಮ್ಮದ್ ಕೈಫ್ ಬಿಹಾರದ ಸಚಿವ ಹಾಗೂ ಲಾಲೂ ಪುತ್ರ ತೇಜ್ ಪ್ರತಾಪ್ ಯಾದವ್ ಜೊತೆ ಕಾಣಿಸಿಕೊಂಡಿದ್ದಾನೆ.
ಕೊಲೆ ಆರೋಪಿ ಮೊಹಮ್ಮದ್ ಈ ಹಿಂದೆ ಆರ್ ಜೆಡಿ ಮಾಜಿ ಸಂಸದ ಮೊಹಮ್ಮದ್ ಶಹಾಬುದ್ದಿನ್ ಜೊತೆಯೂ ಕಾಣಿಸಿಕೊಂಡಿದ್ದ.
11 ವರ್ಷಗಳ ಜೈಲು ಶಿಕ್ಷೆ ಬಳಿಕ ಶಹಾಬುದ್ದಿನ್ ಮೊನ್ನೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದಾನೆ.
ನಿತೀಶ್ ಕುಮಾರ್ ಸರ್ಕಾರದ ಆರೋಗ್ಯ ಸಚಿವರಾಗಿರುವ ತೇಜ್ ಪ್ರತಾಪ್ ಯಾದವ್ ಗೆ ಆರೋಪಿ ಮೊಹಮ್ಮದ್ ಹೂ ಗುಚ್ಚ ನೀಡುತ್ತಿರುವ ಚಿತ್ರ ಇದೀಗ ಭಾರೀ ಸದ್ದು ಮಾಡಿದೆ.
ಪತ್ರಕರ್ತರ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಈತ ಸರ್ಕಾರದ ರಕ್ಷಣೆಯಲ್ಲೇ ಇದ್ದಾನೆಯೇ ಎಂಬ ಪ್ರಶ್ನೆ ಮೂಡಿದೆ.
ಹಿರಿಯ ಪತ್ರಕರ್ತ ರಾಜದೇವ್ ರಂಜನ್ ಹತ್ಯೆ ಬಳಿಕ ಮೊಹಮ್ಮದ್ ಪರಾರಿಯಾಗಿದ್ದು, ಇದೀಗ ಸಚಿವರುಗಳ ಜೊತೆಯಲ್ಲೇ ಕಾಣಿಸಿಕೊಂಡಿದ್ದಾನೆ.
Discussion about this post