ಇಸ್ರೋ:ಅ-29:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ವಿಶ್ವ ದಾಖಲೆಗೆ ನಿರ್ಧರಿಸಿದ್ದು, 2017 ರಲ್ಲಿ ಒಂದೇ ರಾಕೆಟ್ ಮೂಲಕ ಒಟ್ಟಿಗೆ 83 ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಸಿದ್ಧತೆ ನಡೆಸಿದೆ.
ಭಾರತದ 2 ಹಾಗೂ ವಿದೇಶದ 81 ಉಪಗ್ರಹಗಳನ್ನು ಒಂದೇ ರಾಕೆಟ್ ಮೂಲಕ ಕಕ್ಷೆಗೆ ಸೇರಿಸುವ ಐತಿಹಾಸಿಕ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ. ಈ ಯೋಜನೆ 2017ರ ಆರಂಭದಲ್ಲಿ ಪೂರ್ಣಗೊಳಿಸಲಿದ್ದು, ಜನವರಿ 15ರಂದು ಉಡಾವಣೆಗೆ ತಯಾರಿ ನಡೆಸಲಾಗಿದೆ.
ಈ ಐತಿಹಾಸಿಕ ಸಾಧನೆಗೆ ಬಳಕೆಯಾಗುವ ರಾಕೆಟ್ ನಾಲ್ಕು ಹಂತದ ಪಿಎಸ್ ಎಲ್ ವಿ-ಎಕ್ಸ್ ಎಲ್ ನ ಸುಧಾರಿತ ರೂಪವಾಗಿದ್ದು, 580 ಕೆಜಿ ತೂಕದ 83 ಉಪಗ್ರಹಗಳನ್ನು 20-25 ನಿಮಿಷಗಳ ಅಂತರದಲ್ಲಿ ಕಕ್ಷೆಗೆ ಸೇರಿಸಲು ಉದ್ದೇಶಿಸಲಾಗಿದೆ.
2017ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಸಿಂಗಲ್ ರಾಕೆಟ್ ಮೂಲಕ 83 ಉಪಗ್ರಹ ಉಡಾವಣೆಗೆ ಯೋಜನೆ ಹಾಕಿಕೊಳ್ಳಲಾಗಿದೆ. ವಿದೇಶದ ನ್ಯಾನೋ ಸೆಟಲೈಟ್ಗಳನ್ನೂ ಕೂಡ ಉಡಾವಣೆ ಮಾಡಲಾಗುವುದು ಎಂದು ಆಂತ್ರಿಕ್ಸ್ ಕಾಪರ್ೋರೇಷನ್ ಸಂಸ್ಥೆಯ ಚೇರಮನ್ ರಾಕೇಶ್ ಶಶಿಭೂಷಣ್ ತಿಳಿಸಿದ್ದಾರೆ.














