ಉಡುಪಿ; ವೈದ್ಯರು ರೋಗಿಗಳ ಹಿತಬಯಸುವವರು, ಕೆಲವೊಮ್ಮೆ ಅವರಿಂದಲೂ ಚಿಕಿತ್ಸೆ ಸಂದರ್ಭದಲ್ಲಿ
ಪ್ರಮಾದಗಳಾಗಬಹುದು. ಅದೇ ಕಾರಣಕ್ಕೆ ಸಮಾಜ ಅವರನ್ನು ಅಪರಾಧಿಗಳಂತೆ ನೋಡಬಾರದು ಎಂದು
ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ| ಜಿ.ಶಂಕರ್ ಹೇಳಿದರು.
ಅವರು ಶನಿವಾರ ಟ್ರಸ್ಟ್, ಜಿಲ್ಲಾ ಮೊಗವೀರ ಯುವ ಸಂಘಟನೆ ಮತ್ತು ಮಣಿಪಾಲ ವಿ.ವಿ.ಗಳ
ಸಂಯುಕ್ತಾಶ್ರಯದಲ್ಲಿ ನಡೆದ ಆರೋಗ್ಯ ಸುರಕ್ಷಾ ಕಾರ್ಡ್ ವಿತರಣೆ ಕಾರ್ಯಕ್ರಮ
ಉದ್ಘಾಟಿಸಿ ಮಾತನಾಡಿದರು.
ಅತಿಥಿಯಾಗಿದ್ದ ಮಣಿಪಾಲ ವಿ. ವಿ. ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಅವರು
ಡಾ| ಜಿ. ಶಂಕರ್ ಅವರ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದರು. ಮಣಿಪಾಲ ತಾಂತ್ರಿಕ ವಿ.
ವಿ. ನಿರ್ದೇಶಕ ಡಾ| ಜಿ. ಕೆ. ಪ್ರಭು ಅಧ್ಯಕ್ಷತೆ ವಹಿಸಿದ್ದರು. ಮೊಗವೀರ ಯುವ ಸಂಘಟನೆ
ಜಿಲ್ಲಾಧ್ಯಕ್ಷ ಗಣೇಶ ಕಾಂಚನ್ ಇದ್ದರು.
ಈ ಸಂದರ್ಭದಲ್ಲಿ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ವಿತರಣೆ ಮತ್ತು ದಾಖಲಾತಿ
ವಿಭಾಗ ಮುಖ್ಯಸ್ಥ ಶ್ರೀಪತಿ, ಸುರಕ್ಷಾ ಕಾರ್ಡುಗಳ ಮುದ್ರಣ ವಿಭಾಗದ ಯಶವಂತ ಮತ್ತು
ಮೊಗವೀರ ಯುವ ಸಂಘಟನೆ ಮಾಜಿ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು.
2015ರಲ್ಲಿ ಟ್ರಸ್ಟಿನ ಆಶ್ರಯದಲ್ಲಿ ಸಾಮೂಹಿಕ ವಿವಾಹವಾದ 12 ಜೋಡಿಗಳಿಗೆ ಸರ್ಕಾರ
ನೀಡುವ ಪ್ರೋತ್ಸಾಹಧನ ಠೇವಣಿ ಪತ್ರ ಹಸ್ತಾಂತರಿಸಲಾಯಿತು.
ಮೊಗವೀರ ಯುವ ಸಂಘಟನೆ ಮಾಜಿ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಸ್ವಾಗತಿಸಿ, ಟ್ರಸ್ಟ್
ಸದಸ್ಯ ಶಂಕರ್ ಸಾಲ್ಯಾನ್ ವಂದಿಸಿದರು. ಮೊಗವೀರ ಯುವ ಸಂಘಟನೆ ಸಲಹಾ ಸಮಿತಿ ಸದಸ್ಯ
ಶಿವರಾಮ ಕೆ. ಎಂ. ನಿರೂಪಿಸಿದರು.
Discussion about this post