ಈ ದೇಶದ ಸಿಂಹಾಸನದಲ್ಲಿ ಪುರಾಣೇತಿಹಾಸಗಳು ಹೇಳುವಂತೆ ಅನೇಕಾನೇಕ ದಾನವರಸರು, ಅನ್ಯ ಮತೀಯ ರಾಜರುಗಳು ಕುಳಿತು ಆಡಳಿತ ಮಾಡಿದ್ದುಂಟು. ಈ categoryಯ ಉಪಾಸನೆಯ ದುರುಪಯೋಗ, ವೇದ ವಿರೋಧ, ಮತ ಸಂಪ್ರದಾಯ ವಿರೋಧಿ ರಾಜರುಗಳೆಲ್ಲ ಮಾಡಿದ ದುರಾಚಾರಗಳೆಂದರೆ- ಭೋಗ, ತಸ್ಕರಣ ( ಇನ್ನೊಬ್ಬನ ಸಂಪತ್ತಿಗೆ ಕನ್ನ ಹಾಕುವುದು)ಮುಂತಾದ ಧರ್ಮವಿರೋಧಿ ಕೆಲಸಗಳಿಗಾಗಿ ಉಪಾಸನೆಯನ್ನು ಮಾಡಿದರು. ಲಾಭವನ್ನೂ ಪಡೆದರು.ಇನ್ನೊಂಡೆ ನಾಶವೂ ಆದರು.
ನಂಬಿ ಕೆಟ್ಟಾಗಲೇ ದ್ವೇಷ ಹುಟ್ಟುವುದು.ಆಗ ದೈವ ದ್ರೋಹಕ್ಕೆ ಮುಂದಾಗುತ್ತಾರೆ.ಕೆಲವರು ಆಲಯಗಳನ್ನು ನಾಶ ಮಾಡಿದರು.ಕೆಲವರು ಇಂತಹ ಉಪಾಸನೆಗಳಿಗೆ ತಪ್ಪು ಅರ್ಥಗಳನ್ನೂ ಪ್ರಚಾರ ಮಾಡಿದರು. ಹಿಂದೆ ಹಿರಣ್ಯಾಕ್ಷನು , ಪಂಚಾಕ್ಷರಿ ಮಂತ್ರ( ಓಂ ನಮಃ ಶಿವಾಯ ), ಷಡಕ್ಷರೀ ಮಂತ್ರ( ಓಂ ನಮೋ ನಾರಾಯಣ) ಗಳೂ ಇರಬಾರದು.ಸಪ್ತಾಕ್ಷರಿ ಮಂತ್ರ ‘ ಓಂ ನಮಃ ಹಿರಣ್ಯಾಯ ‘ ವೇ ಇರಬೇಕು ಎಂದು ಪ್ರಜೆಗಳಿಗೆ ಬಲ ಪೂರ್ವಕವಾಗಿ ಆದೇಶಿಸಿದ.ಯಾಕೆಂದರೆ ದೇವರ ಮೇಲಿನ ಕೋಪವದು.ಆದರೆ ಭಗವಂತನು ಪ್ರಹ್ಲಾದ ರೂಪದಲ್ಲಿ ಹರಿನಾಮ ಉಚ್ಚರಿಸಿ ಹಿರಣ್ಯಾಕ್ಷನ ನಾಶಕ್ಕೆ ಕಾರಣನಾದ.ಇಂತಹ ತಪ್ಪು ತಿಳುವಳಿಕೆ, ನಿಂದನೆಗಳು ಹಿಂದೆಯೂ ಇತ್ತು.ಇಂದಿನ ನಕಲಿ ಪ್ರಗತಿಪರ ವಿಚಾರವಾದಿ ಸಾಹಿತಿಗಳಂತೆ ಆಗಲೂ ಇದ್ದರು. ಇವರ ಮೂಲಕ ನಮ್ಮ ಸಂಪ್ರದಾಯಕ್ಕೆ, ದೇವತಾ ಆರಾಧನೆಗಳಿಗೆ ಧಕ್ಕೆ ಬರುವಂತಹ ಮತ್ತು ಅವಹೇಳನವಾಗುವಂತಹ ಕೆಲಸಗಳನ್ನು ಮಾಡಿಸಿದರು.ಇದು ಇಂದಿಗೂ ಶಾಶ್ವತವಾಗಿ ಉಳಿದಿದೆ.ಇದುವೇ ಈಗ ಮೂಢನಂಬಿಕೆಯಾ ಗಿಯೂ ಕಾಣುತ್ತದೆ. ಆದರೆ ಸಂಸ್ಕೃತದ ಶಬ್ದ ಪ್ರಯೋಗದ ವಿವಿಧ ಅರ್ಥ ಸ್ವರೂಪಗಳನ್ನು ಬದಲಾಯಿಸಲಾಗಲಿಲ್ಲ. ಯಾಕೆಂದರೆ ಇಂತಹ ಒಂದು ಶಬ್ದಕ್ಕೆ ನೂರಾರು ಅರ್ಥಗಳು ಇವೆ.ಇದರ ಪ್ರಯೋಗ ಮಾತ್ರ ಎಲ್ಲಾ ಕಡೆ ಒಂದೇ ಅರ್ಥವನ್ನು ಕೊಡುವುದೂ ಇಲ್ಲ.
ಈಗ ನಾವು ಕೇವಲ ಎರಡು ಶಬ್ದಗಳನ್ನು ಮಾತ್ರ ನೋಡೋಣ. ಲಿಂಗ ಮತ್ತು ಯೋನಿ. ಕಾಮ ಚೇಷ್ಟೆ, ರತಿಕ್ರೀಡಾ ಸಮಯದಲ್ಲಿ ಲಿಂಗ ಎಂದರೆ ಪುರುಷ ಜನನೇಂದ್ರಿಯ ಮತ್ತು ಯೋನಿಗೆ ಸ್ತ್ರೀ ಜನನನೇಂದ್ರಿಯ ಎಂಬ ಅರ್ಥವಿದೆ. ಈ ಅವಹೇಳನ ಮಾಡುವ expert ಸಾಹಿತಿಗಳು ಶಿವ ಲಿಂಗವನ್ನು ಶಿವನ ಗುಪ್ತಾಂಗವಾಗಿಯೂ, ಯೋನಿಯನ್ನು ಸ್ತ್ರೀ ಗುಪ್ತಾಂಗವಾಗಿಯೂ ಹೇಳಿದರು. ಇದು ಸತ್ಯವೂ ಹೌದು.ಆದರೆ ಆರಾಧನೆಯ ವಿಚಾರದಲ್ಲಿ ಈ ಅರ್ಥವು ಅಶ್ಲೀಲವೇ ಆಗಿದೆ. ಏನು ? ಈ ವೈದಿಕರು ದೇವರ ಗುಪ್ತಾಂಗ( ಜನನೇಂದ್ರಿಯ) ಕ್ಕೆ ಪೂಜೆ ಮಾಡಿ ಕೃತಾರ್ಥತೆ,ಅನುಗ್ರಹ ಪಡೆಯುವವರೋ? ಎಂತಹ ಮೂರ್ಖ ಚಿಂತನೆ ನೋಡಿ. ಈ ಬಗ್ಗೆ ಅನೇಕ ವಿದ್ವಾಂಸರುಗಳು ಸೇರಿಕೊಂಡು ಇದೇ ತತ್ವಗಳ ಬಗ್ಗೆ ಗ್ರಂಥಗಳನ್ನೂ ಬರೆದು ಹಾಕಿದ್ದಾರೆ.ಈ ಗ್ರಂಥಗಳನ್ನೋದಿದ ಇಂದಿನ ಅನೇಕ ವಿದ್ವಾಂಸರು, ಪುರೋಹಿತರು, ಹೆಚ್ಚೇಕೆ ಮಠಗಳ ಯತಿಗಳೂ ಸಮರ್ಥನೆ ನೀಡುವುದು ಒಂದು ಅಸಹ್ಯ ವಿಚಾರವಾಗಿದೆ. ಋತು ಎಂದರೆ ರಜಸ್ವಲಾ ಸಮಯವೂ ಆಗುತ್ತದೆ, ಹವಾಮಾನವೂ ಆಗುವುದಿಲ್ಲವೇ.ಹಾಗೆಯೇ ಪ್ರತಿ ಶಬ್ದಗಳಿಗೂ ಬೇರೆ ಬೇರೆ ಅರ್ಥಗಳು ವ್ಯಾಕರಣ ಅನುಸಾರವಾಗಿ, ಸನ್ನಿವೇಶಕ್ಕನುಗುಣವಾಗಿ ಬರುತ್ತದೆ.ಒಂದು ಅರ್ಥವು ಎಲ್ಲಾಕಡೆಗೂ applicable ಆಗಲು ಸಾಧ್ಯವೇ ಇಲ್ಲ.
ಸ್ತ್ರೀ ಪುರುಷ ಸಂಯೋಗ, ತಿನ್ನುವುದು ಉಣ್ಣುವುದು, ಕಜ್ಜಿ ಕಸಲೆಗಳಾದಾಗ ತುರಿಸಿಕೊಳ್ಳುವುದು ಇತ್ಯಾದಿ ಹಲವು ಕೆಲಸಗಳು ಗುರು ಇಲ್ಲದ ಕ್ರಿಯೆ. ಇದನ್ನು ಯಾರೂ ಹೇಳಿಕೊಡಬೇಕಾಗಿಲ್ಲ. ಇದೊಂದು ಮಾನವ ಪ್ರಕೃತಿ. ಇಂತಹ ಉದ್ದೇಶದಿಂದ ಅಂತಹ ಲಾಂಛನಕ್ಕೆ ಪೂಜೆ ಮಾಡುವುದಾಗಿದೆ ಎಂದರೆ ಇದಕ್ಕಿಂತ ಮೂರ್ಖತನ ಬೇರೆ ಇಲ್ಲ.
ಇದನ್ನು ಪ್ರಕೃತಿ ಪುರುಷರ ಆರಾಧನೆ ಎಂದೂ ಕೊಂಡಾಡಿದರು. ಇಂತಹ ಅರ್ಥಗಳನ್ನು ಹೇಳಿಕೊಂಡೇ ನಾವು ಅವಮಾನಿತರಾಗುವುದು. ಅಥವಾ ನಮ್ಮನ್ನು ನಾವೇ ಅವಮಾನಿಸಿಕೊಳ್ಳುವು ದಾಗಿದೆ. ಆದರೆ ದೇವತಾ ಆರಾಧನೆಯ ವಿಚಾರದಲ್ಲಿ ಇದರ ಅರ್ಥವು ಇನ್ನೊಂದು ರೂಪದಲ್ಲಿ ಇರುವುದು ಅನೇಕರಿಗೆ ತಿಳಿದಿಲ್ಲ.
ಲಿಂಗ ಎಂದರೆ ಗುರುತು,ಚಿಹ್ನೆ, ಪ್ರಭೆ ಮುಂತಾದ ಅರ್ಥಗಳೂ ಇವೆ.
ಯೋನಿ ಎಂದರೆ ಮೂಲ,ಜಲ,ಸ್ಥಾನ,ಕಾರಣ ಗಳೆಂಬ ಅರ್ಥಗಳೂ ಇವೆ.
ಬೃಗು ಋಷಿಗಳು ಶಾಪ ನೀಡುತ್ತಾ ಬಂದ ವಿಚಾರ ಎಲ್ಲರಿಗೂ ತಿಳಿದಿದೆ.ಆ ಶಾಪಗಳನ್ನು ಪಡೆದವರಲ್ಲಿ ಶಿವನೂ ಒಬ್ಬ.( ಇದು ಹೌದೋ ಅಲ್ಲವೋ ದೇವನೇ ಬಲ್ಲ.ಆದರೆ ಇದರೊಳಗೆ ಒಂದು ತತ್ವವಡಗಿದೆ) ಈಶ್ವರನು ಪತ್ನಿಯ ಜತೆಗಿದ್ದಾಗ ಬೃಗು ಋಷಿಗಳನ್ನು ನಿರ್ಲಕ್ಷ( ignore) ಮಾಡಿದಾಗ ಕೋಪಗೊಂಡ ಋಷಿ ‘ ನಿನ್ನ ಲಿಂಗಕ್ಕೆ ಭಕ್ತರು ಪೂಜೆ ಮಾಡುವಂತಾಗಲಿ’ ಎಂದು ಶಾಪ ಕೊಡುತ್ತಾರೆ. ಇದರ ಪರಿಣಾಮವಾಗಿ ಇಂದಿಗೂ ಶಿವನ ಲಿಂಗಕ್ಕೆ ಪೂಜೆ ನಡೆಯುತ್ತದೆ.ಅಂದರೆ ಅಪಾರ್ಥದ ಪ್ರಕಾರ ಶಿವನ ಶಿಶ್ನಕ್ಕೆ ಪೂಜೆ ಎಂದಾಯಿತು.
ಇಲ್ಲಿ ಲಿಂಗ ಎಂದರೆ ಪ್ರಭಾವಳಿಯಾಗುತ್ತದೆ. ಹಾಗಾಗಿಯೇ ಕೆಲ ವ್ಯಕ್ತಿಗಳ ಮರಣವನ್ನು ‘ ಲಿಂಗ ಐಕ್ಯಯರಾದರು’ ಎನ್ನುತ್ತೇವೆ.ಅಂದರೆ ಶಿವನ ಕಾಂತೀಯ ಪ್ರಭೆಯೊಳಗೆ ಇವರ ಆತ್ಮಜ್ಯೋತಿ ಲೀನವಾಯಿತು ಎಂದರ್ಥ. ಈ ಲಿಂಗ ರೂಪವನ್ನಿಟ್ಟು ಅಭಿಷೇಕ ಪೂಜಾದಿಗಳನ್ನು ಮಾಡಲು ಪೀಠ ಬೇಕು.ಆ ಪೀಠದ ರಚನೆ ಯೋನಿಗೆ ಸಾಮ್ಯತೆ ಇದ್ದರೂ ಅದು ಸ್ತ್ರೀ ಜನನಾಂಗದ ಪ್ರತಿರೂಪವೇನಲ್ಲ. ಅದೊಂದು ಪೀಠ ವ್ಯವಸ್ಥೆಯೇ ಆಗಿದೆ. ಅದರಲ್ಲಿ ಶಿವನ ಪ್ರಭೆಯ ಸ್ವರೂಪವನ್ನಿಟ್ಟು ಪೂಜಿಸಲಾಯಿತು.ಒಂದು ವೇಳೆ ಅದು ಪುರುಷ ಜನನಾಂದ ಪ್ರತಿಸ್ವರೂಪವೇ ಆಗಿದ್ದಿದ್ದರೆ ಎಷ್ಟೋ ದುರ್ಗಾ ದೇವಸ್ಥಾನ, ಇನ್ನಿತರ ಸ್ತ್ರೀ ಶಕ್ತಿ ದೇವಸ್ಥಾನಗಳಲ್ಲಿ ಲಿಂಗವೇ ಪ್ರಧಾನ ಸಾನ್ನಿಧ್ಯವಾಗಿರುವುದು ಅಸಂಭದ್ಧವಾಗುತ್ತದೆ.ಇದು ಅರ್ಥ ಕೊಡುತ್ತದೆಯೇ? ಹಾಗೆಯೇ ಗಣಪತಿ, ಸುಬ್ರಹ್ಮಣ್ಯಾದಿ ದೇವಸ್ಥಾನಗಳಲ್ಲೂ ಲಿಂಗ ಸ್ವರೂಪಗಳಿವೆ. ಅಂದರೆ ರೂಪ ಕಲ್ಪನೆಗಿಂತ ಕಾಂತ ಕಿರಣಗಳ ಪ್ರಭೆಯ ಕಲ್ಪನೆಗೆ ಬಹಳ ಮಹತ್ವ ನೀಡಿದ್ದರು. ಈ ಲಿಂಗಕ್ಕೆ ನೇತ್ರ,ನಾಮಗಳನ್ನೂ ಇಟ್ಟು ಪೂಜಿಸುತ್ತಾರೆ ಎಂದ ಮೇಲೆ ಇದು ದೇವರ ಪ್ರಭಾವಳಿಯೇ ಆಗುತ್ತದೆ. ಶಿವ ಎಂದರೆ ಪ್ರದ್ಯುಮ್ನ ( ರಾಜಸ) ಮತ್ತು ಸಂಕರ್ಷಣಾ( ಆಕರ್ಷಣೆ) ಶಕ್ತಿ ಸಂಕೇತ.ಶಿವ ಎಂದರೆ ಮಂಗಲ ಕಾರಕ.’ ಓಂ ನಮಃ ಶಿವಾಯ ‘ ಎಂಬ ಪಂಚಾಕ್ಷರಿ ಮಂತ್ರವು ‘ ಮಂಗಲಕರವಾದುದಕ್ಕೆ ಪ್ರಣಾಮಗಳು’ ಎಂದರ್ಥವಾಗುತ್ತದೆ .
ಕೆಲವೆಡೆ ಮೂರ್ತಿಗಳೂ ಇವೆ. ಇದು ಅವರವರ ಭಾವಕ್ಕೆ ಬಿಟ್ಟದ್ದು. ಅಂತೂ ಶಿವನ ಸ್ವರೂಪವು ಅಘಾದ.ಶಿವಪಾರ್ವತಿಯರನ್ನು ‘ ಜಗತಃ ಪಿತರೌ ಪಾರ್ವತೀ ಪರಮೇಶ್ವರೌ ‘ ಎಂದಿದ್ದಾರೆ. ಇದು ವಿಷ್ಣು ( ಮಹಾ ಚೈತನ್ಯದ) ರಾಜಸಗುಣ ಮತ್ತು ಭೂಶಕ್ತಿಯ ಸ್ವರೂಪ. ಶಿವನಿಗೆ ಲಯಕಾರಕ ಎಂದರು.ಲಯ ಎಂದರೆ ಸಾವೂ ಆಗುತ್ತದೆ ಅಲ್ಲದೆ ದೋಷ ನಿಗ್ರಹವೂ ಆಗುತ್ತದೆ.ನಮ್ಮೊಳಗಿನ ದೋಷಗಳನ್ನು ನಿಗ್ರಹಿಸಲು, ಧಮನಿಸಲು ಶಿವನ ಅನುಗ್ರಹ ಬೇಕು.ದೋಷ ನಿಗ್ರಹವಾದರೆ ವಿಷ್ಣು ಪದ( ಮೋಕ್ಷ) ಸಿಗುತ್ತದೆ.
Discussion about this post