ಶುಕ್ರನ ಚಾರವನ್ನು ಗಮನಿಸದಿದ್ದರೆ ಜಾತಕರಿಗೆ ಅತ್ಯಂತ ಉತ್ತಮ ಫಲವೂ ಆಗಬಹುದು.ಕೆಟ್ಟದ್ದೂ ಆಗಬಹುದು.
ಅಕ್ಟೋಬರ್ 13 ಕ್ಕೆ ಶುಕ್ರನು ತನ್ನ ಪರಮ ಶತ್ರುವಾದ ಕುಜ ಕ್ಷೇತ್ರವಾದ ವೃಶ್ಚಿಕದಲ್ಲಿ ಉದಯವಾಗುತ್ತಾನೆ. ನವಗ್ರಹರ ಪೈಕಿ ಶುಕ್ರನಿಗೆ ಎರಡೇ ಭಾವಗಳು ಅನಿಷ್ಟ ಭಾವವಾಗಿರುತ್ತದೆ. ಅದು ಆರು ಮತ್ತು ಏಳು.
ಇವನ ಅನಿಷ್ಟ ಫಲಗಳೇನು?
ಆರನೇ ಭಾವವು ವಿಪತ್ತು. ಏಳನೆಯ ಭಾವವು ಸ್ತ್ರೀ ಪೀಡೆ.
ವಿಪತ್ತು ಎಂದರೆ ಕೆಲಸ ಕಾರ್ಯಗಳಲ್ಲಿ ಸತತ ವಿಘ್ನ
ಸ್ತ್ರೀ ಪೀಡೆ ಎಂದರೆ ಜ್ಞಾನಕ್ಕೆ ಮಾರಕವಾಗುವುದು. ಹಾಗಾಗಿ 6,7 ಭಾವವು ಅನಿಷ್ಟ ಸ್ಥಿತಿಯಾಗುತ್ತದೆ. ರವಿ ಬುಧರಂತೆ ಶುಕ್ರನು ಒಂದು ಮನೆಯಲ್ಲಿ ಒಂದು ತಿಂಗಳು ಇರುತ್ತಾನೆ.ಹಾಗಾಗಿ ರವಿಯಿಂದ ಹೆಚ್ಚೆಂದರೆ ಅರುವತ್ತು ಡಿಗ್ರಿ ದೂರವನ್ನು ದಾಟಿಹೋಗುವುದಿಲ್ಲ.
ಈಗ ವೃಶ್ಚಿಕದಲ್ಲಿ ಶುಕ್ರೋದಯ.ಇದು ವೃಷಭ ಮತ್ತು ಮಿಥುನ ರಾಶಿಯವರಿಗೆ , ಮತ್ತು ಇದೇ ರಾಶಿ ಲಗ್ನದವರಿಗೆ ಅನಿಷ್ಟವಾಗಿ ಕಾಡುತ್ತದೆ. ಮಿಥುನ ರಾಶಿ ಅಥವಾ ಲಗ್ನಕ್ಕೆ ವೃಶ್ಚಿಕವು ಆರನೆಯ ಭಾವವಾಗುತ್ತದೆ. ವೃಷಭಕ್ಕೆ ಏಳನೆಯ ಭಾವ.
ಆರನೆಯ ಭಾವದವರಿಗೆ ಕೆಲಸ ಕಾರ್ಯಗಳು ನಿಧಾನ ಗತಿಗೆ ಹೋಗುತ್ತದೆ. ಕೈಹಾಕಿದ ಕೆಲಸಗಳು ನಿಧಾನವಾಗುತ್ತದೆ.ಆದರೆ ಇದಕ್ಕೆ ವಿಶೇಷ ಪ್ರತಿಕ್ರಿಯೆ ನೀಡಿದಿರೋ ಅದು ಉಲ್ಟಾ ಹೊಡೆಯುತ್ತದೆ.
ನಾವು ಹಗಲು ಮಾಡುವ ಕೆಲಸಗಳನ್ನು ಹಗಲೇ ಮಾಡಿದಾಗ ಪೂರ್ಣ ಫಲ. ರಾತ್ರಿ ಕೆಲಸವನ್ನು ರಾತ್ರಿ ಮಾಡಿದರೆ ಪೂರ್ಣ ಫಲ ಹೇಗೋ ಹಾಗೆಯೇ ಶುಕ್ರನು ಆರು ಏಳರ ಸಂಚಾರದಲ್ಲಿ ನೀಡುತ್ತಾನೆ. ಅದರಲ್ಲೂ ಈ ಭಾವಗಳು ಶತ್ರು ಕ್ಷೇತ್ರವಾದರೆ ಅದು ವಿಪರೀತಕ್ಕೆ ಹೋದೀತು.
ಸಾಮಾನ್ಯ ಎಲ್ಲಾ ದಂಪತಿಗಳಲ್ಲೂ ಭಿನ್ನಾಭಿಪ್ರಾಯ ಗಳು ಒಮ್ಮೊಮ್ಮೆ ಮೂಡುವುದು ಮನುಷ್ಯ ಸಹಜ. ಆದರೆ ಇಂತಹ ಸಂದರ್ಭದಲ್ಲಿ ಆ ವಾದಗಳನ್ನು ಬೆಳೆಸಿ ಸಾಧಿಸಲು ಹೋದರೆ ತಾರಕಕ್ಕೇರಬಹುದು. ಎಲ್ಲಿಯಾದರೂ ಜಾತಕರ ಕುಂಡಲಿಯಲ್ಲಿ ಸಪ್ತಮಾಧಿಪತಿ ರವಿಸಂಪರ್ಕದಲ್ಲಿದ್ದರೆ , ಅನಿಷ್ಟವಾಗಿಯೂ ಇದ್ದರೆ, ಇತರ ಗ್ರಹಗತಿಗಳೂ ಉತ್ತಮವಾಗಿಲ್ಲದಿದ್ದರೆ Divorce ಕೊಟ್ಟುಬಿಡೋಣ ಎನ್ನುವ ಮಟ್ಟಕ್ಕೂ ಹೋಗಬಹುದು!! ಆಗ ಅವರು mind refresh ಮಾಡಿಕೊಳ್ಳುತ್ತಾ ಇದ್ದು ಈ ಭಾವಗಳನ್ನು ಶುಕ್ರ ದಾಟುವಲ್ಲಿಯ ವರೆಗೆ ಕಾದದ್ದೇ ಆದರೆ ಸಮಸ್ಯೆಗಳು ತನ್ನಿಂದ ತಾನಾಗಿಯೇ ಸತ್ತು ಹೋಗುತ್ತದೆ.ಇದು ಕೇವಲ ವೈವಾಹಿಕ ವಿಚಾರಕ್ಕೇ ಸಿಮಿತವಲ್ಲ. ಋಣ ಭಾದೆ, ವ್ಯಹಾರಿಕ, ಲೈಂಗಿಕ ವಿಚಾರಗಳೂ ಇದರಲ್ಲಿದೆ.
ಸಾಮಾನ್ಯವಾಗಿ ಈ ರಾಶಿಗಳವರು ಪ್ರತೀವರ್ಷವೂ ಇಂತಹ ಸಮಸ್ಯೆ ಅನುಭವಿಸಿರುತ್ತಾರೆ. ಅಂತವರಿಗೆ ಕೆಲ ವರ್ಷ ಗುರು, ಶನಿಗಳು ಉತ್ತಮವಾಗಿದ್ದರೆ ದುಷ್ಪಲಗಳು ಅನುಭವಕ್ಕೆ ಬರುವುದು ಕಡಿಮೆ. ಗುರುವೂ ಇಷ್ಟವಾಗಿರದಿದ್ದಲ್ಲಿ,ಶನಿಯೂ ಅನಿಷ್ಟವಾಗಿದ್ದಲ್ಲಿ ಈ ಸ್ಥಿತಿಯು ಅಪಾಯಕಾರಿ ಆಗುತ್ತದೆ.
ಪರಿಹಾರ: ಇಂತಹ ಕಾಲದಲ್ಲಿ ಜಾಣ್ಮೆ ಅಗತ್ಯ.ಅವಸರ ಉದ್ವೇಗಗಳಿದ್ದರೆ ಅಪಾಯ. ಇದೊಂದು ಪ್ರತೀ ವರ್ಷವೂ ಇದೇ ಕಾಲಕ್ಕೆ( ದಿನಗಳು ಸ್ವಲ್ಪ ಹೆಚ್ಚು ಕಡಿಮೆ ಇರಬಹುದು) ಅನುಭವಕ್ಕೆ ಬರುವಂತಹ ಒಂದು ಗ್ರಹಸ್ಥಿತಿ. ಇನ್ನು ಪರಿಹಾರವಾಗಿ ದುರ್ಗಾ ಸೇವೆ, ದೂರ ಪ್ರಯಾಣ, ಪರಸ್ಪರ ದಂಪತಿಗಳಾದರೆ ವಾದಿಸದೆ ಇರುವುದು, ವ್ಯವಹಾರಿಕವಾಗಿ partner ಗಳ ಜತೆ ಸೌಮ್ಯವಾಗಿರುವುದು, ಗಿರಾಕಿಗಳೊಡನೆ ತಾಳ್ಮೆಯಿಂದ ಇದ್ದರೆ ಸಮಸ್ಯೆ ಉಲ್ಬಣವಾಗದು. ಒಟ್ಟಿನಲ್ಲಿ ಸಮಸ್ಯೆಗಳ ನಿವಾರಣೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ignore ಮಾಡುವುದು ಉತ್ತಮ.ಅಥವಾ ಈ ಸಂದರ್ಭಗಳಲ್ಲಿ ಇತ್ಯರ್ಥವಾಗಲೇ ಬೇಕೆಂಬ ಹಠವನ್ನು ಬಿಟ್ಟು ಸಮಯ ಮುಂದೆ ದೂಡುವುದೇ ಉತ್ತಮ.
ಶುಕ್ರನು ಜೀವನ ಶೈಲಿ,ಅಲಂಕಾರಗಳನ್ನು ನೀಡುವವನು. ಅವನ ಗೋಚರ ಅನಿಷ್ಟ ಸ್ಥಿತಿಗಳ ಕಾಲದಲ್ಲಿ ಕಾಲ ಮುಂದೆ ತಳ್ಳುವುದೇ ಅತ್ಯಂತ ಸುಲಭೋಪಾಯ.
Discussion about this post