ಬೆಂಗಳೂರು: ಸೆ:22; ಬಿಜೆಪಿ ಶಾಸಕರಿಗೆ, ಸಂಸದರಿಗೆ ಸರ್ವಪಕ್ಷ ಸಭೆಗೆ ಹೋಗುವ ಅಪೇಕ್ಷೆ ಇತ್ತು. ಆದರೆ, ಪಕ್ಷದ ನಾಯಕರ ಅಪೇಕ್ಷೆಗೆ ವಿರುದ್ಧವಾಗಿ ಯಡಿಯೂರಪ್ಪ ಕಟ್ಟಾಜ್ಞೆ ಮಾಡಿದ್ದರು. ಕೇಂದ್ರ ಸಚಿವರು, ಸಂಸದರು ಸರ್ವಪಕ್ಷ ಸಭೆಗೆ ಬರಲು ಸನ್ನದ್ಧರಾಗಿದ್ದರು.
ಬಿಜೆಪಿ ಪಕ್ಷಾಧ್ಯಕ್ಷರಾಗಿ, ಸರ್ವಾಧಿಕಾರ ಮೆರೆದು ಬಿಎಸ್ ವೈ ಎಡವಟ್ಟು ಮಾಡಿಕೊಂಡರು ಎನ್ನಿಸದೇ ಇರದು.
ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗಟ್ಟಿ ನಿರ್ಧಾರಕ್ಕೆ ಬಂದಿವೆ. ಆದರೆ ಬಿಜೆಪಿ ಮಾತ್ರ ವಿಲನ್ ರೀತಿ ಬಿಂಬಿತವಾಯಿತು. ಸರ್ವ ಪಕ್ಷ ಸಭೆಗೆ ಬಹಿಷ್ಕಾರ ಹಾಕುವ ಮೂಲಕ ಬಿಜೆಪಿ ಯಡವಟ್ಟು ಮಾಡಿಕೊಂಡಿದೆ ಎಂದೆನ್ನಿಸದೆ ಇರಲ್ಲ. ಗಂಭೀರ ವಿಷಯದ ಸಭೆಗೆ ಗೈರು ಆಗುವ ಮೂಲಕ ಬೇರೆಯದ್ದೇ ಸಂದೇಶ ರವಾನೆ ಮಾಡಿದಂತಾಗಿದೆ.
ಆರಂಭದಿಂದಲೂ ಕಾವೇರಿ ವಿಷಯದಲ್ಲಿ ಪ್ರಧಾನಿ ಮೋದಿ ಮಧ್ಯಪ್ರವೇಶ ಸಾಧ್ಯವಿಲ್ಲ ಎನ್ನುತ್ತಲೇ ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗಿರುವ ಬಿಜೆಪಿ ಈಗ ವಿಲನ್ ಆಗಿಬಿಡ್ತಾ ಅನ್ನಿಸದೇ ಇರದು. ಇದಕ್ಕೆ ಕಾರಣವಾಗಿದ್ದು ಕಾವೇರಿ ವಿಷಯವಾಗಿ ನಿರ್ಧಾರ ತೆಗೆದುಕೊಳ್ಳಲು ಕರೆದಿದ್ದ ಸರ್ವಪಕ್ಷ ಸಭೆಗೆ ಗೈರುಹಾಜರಾಗಿದ್ದು.
ಸಿಎಂ ಸಿದ್ದರಾಮಯ್ಯ ಕರೆದಿದ್ದ ಸರ್ವಪಕ್ಷ ಸಭೆಗೆ ಹಾಜರಾಗಿದ್ದರೆ ಬಿಜೆಪಿ ಕಳೆದುಕೊಳ್ಳುತ್ತಿದ್ದದ್ದು ಏನೂ ಇಲ್ಲ. ಬಿಜೆಪಿ ಅದ್ಯಾಕೆ ಈ ನಿರ್ಧಾರಕ್ಕೆ ಬಂತೋ ಗೊತ್ತಿಲ್ಲ. ನಿನ್ನೆ ಎಲ್ಲೂ ಬಿಜೆಪಿ ಮುಖಂಡರು ಕಾಣಿಸಿಕೊಳ್ಳಲೇ ಇಲ್ಲ. ಸಿಎಂ ಸಿದ್ದರಾಮಯ್ಯನವರ ಮುತ್ಸದ್ಧಿತನದ ಎದುರು ಬಿಜೆಪಿಯ ಬಹಿಷ್ಕಾರದ ನಿರ್ಧಾರ ಕೆಟ್ಟದೆಸಿಕೊಂಡು ಬಿಟ್ಟಿತು.
ಯಡಿಯೂರಪ್ಪ ಏಕಪಕ್ಷೀಯ ನಿರ್ಧಾರ ?
ಬಿಜೆಪಿ ಶಾಸಕರಿಗೆ, ಸಂಸದರಿಗೆ ಸರ್ವಪಕ್ಷ ಸಭೆಗೆ ಹೋಗುವ ಅಪೇಕ್ಷೆ ಇತ್ತು. ಆದ್ರೆ ಪಕ್ಷದ ನಾಯಕರ ಅಪೇಕ್ಷೆಗೆ ವಿರುದ್ಧವಾಗಿ ಯಡಿಯೂರಪ್ಪ ಕಟ್ಟಾಜ್ಞೆ ಮಾಡಿದ್ದರು. ಕೇಂದ್ರ ಸಚಿವರು, ಸಂಸದರು ಸರ್ವಪಕ್ಷ ಸಭೆಗೆ ಬರಲು ಸನ್ನದ್ಧರಾಗಿದ್ದರು.
ಆದರೆ, ಬಿಜೆಪಿ ಪಕ್ಷಾಧ್ಯಕ್ಷರಾಗಿ, ಸರ್ವಾಧಿಕಾರ ಮೆರೆದು ಬಿಎಸ್ವೈ ಎಡವಟ್ಟು ಮಾಡಿಕೊಂಡರು ಎನ್ನಿಸದೇ ಇರದು. ಬೆಂಗಳೂರಲ್ಲಿ ನಡೆದ ಸರ್ವ ಪಕ್ಷ ಸಭೆಗೆ ಬಿಜೆಪಿಯ ಯಾವೊಬ್ಬ ಮುಖಂಡರು ಬಂದಿರಲಿಲ್ಲ. ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ ಸೇರಿದಂತೆ ಕೆಲವು ಮುಖಂಡರು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉಮಾಭಾರತಿಯವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.
ಕಾವೇರಿ ವಿಚಾರ ಗಂಭೀರವಾದದ್ದು. ಸರ್ವಪಕ್ಷ ಸಭೆಗೆ ಹಾಜರಾಗಿ ಅಭಿಪ್ರಾಯ ವ್ಯಕ್ತಪಡಿಸಬಹುದಿತ್ತು. ಆದರೆ, ಸಭೆ ಬಹಿಷ್ಕಾರದಂಥ ನಿರ್ಧಾರಕ್ಕೆ ಬಂದು, ನಡೆಯುತ್ತಿರುವ ರಥೋತ್ಸವ ನೋಡುವ ಪ್ರೇಕ್ಷಕರಾಗಿ ಉಳಿದುಕೊಳ್ಳಬೇಕಾಯ್ತು. ಗಟ್ಟಿ ನಿರ್ಧಾರದಿಂದ ಸಿಎಂ ಹಾಗೂ ಸರ್ವ ಪಕ್ಷ ಸಭೆಗೆ ಹಾಜರಾಗಿ ಸಿಎಂ ಬೆಂಬಲಕ್ಕೆ ನಿಂತ ಜೆಡಿಎಸ್ ಮುಖಂಡರು ಹೀರೋಗಳಾಗಿ ಕಾಣುತ್ತಿದ್ದಾರೆ. ಬಿಜೆಪಿ ಬಹಿಷ್ಕಾರದ ನಿರ್ಧಾರದಿಂದ ವಿಲನ್ ರೀತಿ ಬಿಂಬಿತವಾಯ್ತು. ಆದ್ರೆ ಸಿಎಂ ಸಿದ್ದರಾಮಯ್ಯ ನಿರ್ಧಾರ ಪ್ರಕಟಿಸಿದ ನಂತರ ಯಡಿಯೂರಪ್ಪ, ಸಿಎಂ ನಿರ್ಧಾರವನ್ನು ಸ್ವಾಗತಿಸುತ್ತೇವೆ ಎಂದರು. ಜೊತೆಗೆ ಸಭೆ ಗೈರುಹಾಜರಾಗಿದ್ದನ್ನು ಸಮರ್ಥಿಸಿಕೊಂಡರು.
ಒಟ್ಟಿನಲ್ಲಿ, ಬಿಜೆಪಿಯ ಸರ್ವಪಕ್ಷ ಸಭೆಗೆ ಬಹಿಷ್ಕಾರದ ನಿರ್ಧಾರ ಪಕ್ಷಕ್ಕೇ ಮುಳುವಾಗಿದೆ. ಸಭೆಯಲ್ಲಿ ಭಾಗವಹಿಸಿದ್ದರೆ ಬಿಜೆಪಿಗೆ ನಷ್ಟವೇನೂ ಆಗುತ್ತಿರಲಿಲ್ಲ. ಕಾಂಗ್ರೆಸ್ – ಜೆಡಿಎಸ್ ಗಟ್ಟಿ ನಿರ್ಧಾರಕ್ಕೆ ಬಂದು ಭಲೇ ಎನಿಸಿಕೊಂಡರೆ ಬಿಜೆಪಿ ಮಾತ್ರ ಇವರು ಯಾಕೆ ಹೀಗೆ ಅನ್ನೋ ಅಸಮಾಧಾನಕ್ಕೆ ಕಾರಣವಾಗಿದೆ.
Discussion about this post