ಬೆಂಗಳೂರು: ಸೆ:30: ಬೆಲೆಗಳೆಲ್ಲಾ ಗಗನಕ್ಕೇರುತ್ತಿರುವ ಸಂದರ್ಭದಲ್ಲಿ ಎಳನೀರು ಬೆಲೆ ಕೂಡ ಐದು ರೂ. ಏರಿಕೆಯಾಗಿದೆ. ಬೆಂಗಳೂರು ಮಹಾನಗರದಲ್ಲಿ ಬದುಕುವುದು ಬಡ ಹಾಗೂ ಮಧ್ಯಮ ವರ್ಗದವರ ಪಾಲಿಗೆ ದುಸ್ತರವಾಗುತ್ತಿರುವ ಸಂದರ್ಭದಲ್ಲೇ ಬೆಲೆಗಳೆಲ್ಲಾ ಗಗನಕ್ಕೇರುತ್ತಿವೆ.
ಬಹು ಸಮಸ್ಯೆಗಳಿಗೆ ಪರಿಹಾರ ನೀಡುವ, ಶರೀರವನ್ನು ತಂಪಾಗಿರಿಸಿ ಉಷ್ಣ ಶರೀರದವರ ಪಾಲಿನ ಸಂಜೀವಿನಿಯಾಗಿರುವ ಎಳನೀರು ಕೂಡ ಈಗ ದುಬಾರಿಯಾಗಿದೆ. ನಗರದೆಲ್ಲೆಡೆ ಕಳೆದ ಒಂದೆರಡು ವಾರದಿಂದ ಸಿಗುತ್ತಿರುವ ಎಳನೀರಿನ ಬೆಲೆ 25 ರೂ. ಅಲ್ಲ 30 ರೂ. ಆಗಿದೆ. ಆಸ್ಪತ್ರೆ ಸುತ್ತಮುತ್ತ, ನಗರ ಹೊರವಲ0ುಗಳಲ್ಲಿ ಎರಡು ತಿಂಗಳ ಹಿಂದೆಯೇ ಈ ದರ ಇತ್ತು. ಇದೀಗ ನಗರದೊಳಗೂ ಈ ದರ ಪ್ರವೇಶಿಸಿದೆ.
ಶೇ. 89ರಷ್ಟು ಮಂದಿ ತಮ್ಮ ಆರೋಗ್ಯ ಕಾಪಾಡಿಕೊಳ್ಳುವ, ಶರೀರದ ಉಷ್ಣತೆ ಸರಿದೂಗಿಸಿಕೊಳ್ಳುವ ಹಾಗೂ ಅನಾರೋಗ್ಯದ ಸಂದರ್ಭದಲ್ಲಿ ಶಾರೀರಿಕ ಚೈತನ್ಯಕ್ಕಾಗಿ ಸೇವಿಸುವ ಎಳನೀರು ದುಬಾರಿಯಾಗಿರುವುದು ಹಲವರನ್ನು ಕಂಗೆಡಿಸಿದೆ.
ಬರ ಕಾರಣ ಬೆಲೆ ಏರಿಕೆ: ರಾಜ್ಯ ಕಳೆದ ಮೂರು ವರ್ಷದಿಂದ ಬರ ಎದುರಿಸುತ್ತಿದೆ. ಬೆಂಗಳೂರಿಗೆ ಎಳನೀರು ಪೂರೈಕೆಯಾಗುವ ಹಳೆ ಮೈಸೂರು ಭಾಗದ ಬಹುತೇಕ ಜಿಲ್ಲೆಗಳಲ್ಲಿ ಸಂಕಷ್ಟ ಎದುರಾಗಿದ್ದು, ತೆಂಗು ಬೆಳೆ ಒಣಗುತ್ತಿದೆ. ಇಳುವರಿಯೇ ಕಡಿಮೆ ಆಗಿದ್ದರಿಂದ ಬೆಲೆ ಏರಿಕೆ ಅನಿವಾ0ರ್ು ಎನ್ನುತ್ತಿದ್ದಾರೆ ಎಳನೀರು ವ್ಯಾಪಾರಿಗಳು.
ಒಂದು ಎಳನೀರಿನ ಮೇಲೆ ನಮಗೆ 2 ರೂ. ಲಾಭ ಸಿಗುತ್ತದೆ. ಮೂಲ ಬೆಳೆಗಾರರು ಹಾಗೂ ನಮ್ಮಂತ ವ್ಯಾಪಾರಿಗಳ ನಡುವೆ ಇರುವ ಮಧ್ಯವತರ್ಿಗಳು ಹೆಚ್ಚಿನ ಲಾಭ ಪಡೆ0ುುತ್ತಾರೆ. 10 ರಿಂದ 12 ರೂ.ಗೆ ಒಂದು ಎಳನೀರು ಮಾರುತ್ತಿದ್ದ ಬೆಳೆಗಾರರು ಸಮಸ್ಯೆ ಹೆಚ್ಚಾಗಿ, ಇಳುವರಿ ಕಡಿಮೆ ಆಗಿ ತಮ್ಮ ಬೆಲೆ0ುನ್ನು 15ರಿಂದ 18ರೂ.ಗೆ ಏರಿಸಿಕೊಂಡಿದ್ದಾರೆ. ಇದರಿಂದ ಮಧ್ಯವತರ್ಿಗಳು ತಮ್ಮ ಲಾಭವನ್ನೂ ಕೊಂಚ ಹೆಚ್ಚಿಸಿಕೊಂಡಿದ್ದಾರೆ. ಈಗ 30 ರೂ. ಮಾಡಿಲ್ಲ ಅಂದರೆ ನಮಗೆ ಬರುವ ಎರಡು ರೂ. ಲಾಭಕ್ಕೆ ಕತ್ತರಿ ಬೀಳುವ ಜತೆಗೆ 3 ರೂ. ಹೆಚ್ಚುವರಿ ಹೊರೆ ಎದುರಾಗುತ್ತದೆ ಎನ್ನುತ್ತಾರೆ ಎಳನೀರು ವ್ಯಾಪಾರಿಯೊಬ್ಬರು.
ಬೆಂಗಳೂರಿಗೆ ಬರುವ ಎಳನೀರಿನ ಶೇ. 60ಕ್ಕೂ ಹೆಚ್ಚು ಪಾಲು ಮದ್ದೂರಿನದ್ದಾಗಿದೆ. ಉಳಿದಂತೆ ಕೆ.ಆರ್. ಪೇಟೆ, ಚಾಮರಾಜನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರ ಭಾಗದಿಂದ ಪೂರೈಕೆ ಆಗುತ್ತದೆ. ಇದಲ್ಲದೇ ಇನ್ನೊಂದು ವರ್ಗವಿದೆ. ಬೆಂಗಳೂರು ಹೊರವಲ0ುದ ನಾನಾ ಭಾಗದಿಂದ ನೇರವಾಗಿ ರೈತರೇ ಆಗಮಿಸಿ ಚಾಮರಾಜಪೇಟೆ0ು ಟಿ.ಆರ್. ಮಿಲ್, ಈದ್ಗಾ ಮೈದಾನ ಸೇರಿದಂತೆ ಹಲವು ತಾಣಗಳಿಗೆ ತಂದು ಲೋಡ್ ಮಾಡಿಕೊಳ್ಳುತ್ತಾರೆ.
ಇಲ್ಲಿಂದ ನೇರವಾಗಿ ವ್ಯಾಪಾರಿಗಳಿಗೆ ಮಾರುತ್ತಾರೆ. ಇಲ್ಲಿಂದ ಎಳನೀರು ಕೊಳ್ಳುವ ವ್ಯಾಪಾರಿಗಳ ಬಳಿ ಒಂದೆರಡು ರೂ. ಕಡಿಮೆಗೆ ಎಳನೀರು ಸಿಗುತ್ತದೆ ಎನ್ನುತ್ತಾರೆ ಚಾಮರಾಜಪೇಟೆ0ು ಸಿಟಿ ಇನ್ಸ್ಟಿಟ್ಯೂಟ್ ಸಮೀಪ ತಳ್ಳುಗಾಡಿ0ುಲ್ಲಿ ಎಳನೀರು ಇಟ್ಟು ವ್ಯಾಪಾರ ಮಾಡುತ್ತಿರುವ ಮತ್ತೋರ್ವ ವ್ಯಾಪಾರಿ.
Discussion about this post