Read - < 1 minute
ನವದೆಹಲಿ: ಸೆ:13:ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಸೆ.18 ರಿಂದ ರಷ್ಯಾ, ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಪಾಕಿಸ್ತಾನದ ಭಯೋತ್ಪಾದನೆ ಕುರಿತು ಮಾತುಕತೆ ಈ ಭೇಟಿಯ ಮುಖ್ಯ ಉದ್ದೇಶವಾಗಿದೆ.
ಸೆ.18 ರಿಂದ 5 ದಿನಗಳ ಕಾಲ ರಷ್ಯಾದಲ್ಲಿರಲಿರುವ ರಾಜನಾಥ್ ಸಿಂಗ್, ರಷ್ಯಾದ ಆಂತರಿಕ ಭದ್ರತಾ ಸಚಿವ ವ್ಲಾಡಿಮಿರ್ ಕೊಲೊಕೊಲ್ಟ್ ಸೇವ್ ಅವರೊಂದಿಗೆ ಮಾತುಕತೆ ನಡೆಸಲಿದ್ದು, ದಕ್ಷಿಣ ಏಷ್ಯಾದಲ್ಲಿ ಹಾಗೂ ಭಾರತದ ಗಡಿ ಪ್ರದೇಶದಲ್ಲಿ ಐಎಸ್ಐಎಸ್, ಪಾಕಿಸ್ತಾನ ನಡೆಸುತ್ತಿರುವ ಭಯೋತ್ಪಾದನೆಯ ವಿಷಯಗಳನ್ನು ಚರ್ಚೆ ಮಡಲಿದ್ದರೆ. ಭಯೋತ್ಪಾದನೆ ನಿಮರ್ೂಲನೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾತನಾಡಲಿದ್ದಾರೆ.
ರಷ್ಯಾ ಭೇಟಿಯ ನಂತರ ರಾಜನಾಥ್ ಸಿಂಗ್ ಅಮೆರಿಕಗೆ ಭೇಟಿ ನೀಡಲಿದ್ದು, ಸೆ.26 ರಿಂದ 7 ದಿನಗಳ ವರೆಗೆ ದ್ವಿಪಕ್ಷೀಯ ಮಾತುಕತೆ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಈ ವೇಳೆ ಅಮೆರಿಕದ ಗೃಹ ಸಚಿವ ಜೇಹ್ ಚಾಲ್ಸರ್್ ಜಾನ್ಸನ್ ರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿರುವ ರಾಜನಾಥ್ ಸಿಂಗ್ ಅಲ್ಲಿಯೂ ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆ, ಐಸೀಸ್ ಉಗ್ರ ಸಂಘಟನೆಯ ಭಯೋತ್ಪಾದನೆ ವಿಚಾರವನ್ನು ಮುಖ್ಯವಾಗಿ ಪ್ರಸ್ತಾಪಿಸಲಿದ್ದಾರೆ ಎಂದು ತಿಳಿದುಬಂದಿದೆ.
ಎರಡು ರಾಷ್ಟ್ರಗಳ ಭೇಟಿಯಲ್ಲಿ ರಾಜನಾಥ್ ಸಿಂಗ್ ಪಾಕಿಸ್ತಾನ ಭಾರತದ ಮೇಲೆ ಭಯೋತ್ಪಾದಕ ದಾಳಿ ನಡೆಸುವುದನ್ನು ಮುಖ್ಯವಾಗಿ ಪ್ರಸ್ತಾಪಿಸಲಿದ್ದು, ಭಯೋತ್ಪಾದನೆ ನಿಮರ್ೂಲನೆ ಬಗ್ಗೆ ವಿಸ್ತೃತ ಚಚರ್ೆ ನಡೆಸಲಿದ್ದಾರೆ.
ಈ ಭೇಟಿ ವೇಳೆ ಐಸೀಸ್ ಉಗ್ರ ಸಂಘಟನೆ ವಿರುದ್ಧ ಹೋರಾಡಲು ಪರಸ್ಪರ ಗುಪ್ತಚರ ಮಾಹಿತಿ ಹಂಚಿಕೆ ಹಾಗೂ ವಾಂಟೆಡ್ ಕ್ರಿಮಿನಲ್ ಗಾಲ ಪಟ್ಟಿಯನ್ನು ಹಂಚಿಕೊಳ್ಳುವುದು, ವೀಸಾ ಉದಾರೀಕರಣ ನೀತಿಗಳ ಬಗ್ಗೆ ಚಚರ್ೆ ನಡೆಯುವ ಸಾಧ್ಯತೆ ಇದೆ.
Discussion about this post