Read - < 1 minute
ವಾಷಿಂಗ್ಟನ್: ಅಮೆರಿಕದ ವಿಶ್ವವ್ಯಾಪಾರ ಕೇಂದ್ರದ ಮೇಲೆ ನಡೆದ ಭಯೋತ್ಪಾದಕ ದಾಳಿ(9\11)ಗೆ ಸಂಬಂಸಿದ ಸಂತ್ರಸ್ತರು , ಭಯೋತ್ಪಾದಕರಿಗೆ ನೆರವಾದ ಆರೋಪದಲ್ಲಿ ಸೌದಿ ಅರೇಬಿಯಾ ವಿರುದ್ಧ ದಾವೆ ಹೂಡಲು ಅವಕಾಶ ಮಾಡಿಕೊಡುವ ಮಸೂದೆಯೊಂದಕ್ಕೆ ಅಲ್ಲಿನ ಅಧ್ಯಕ್ಷ ಬರಾಕ್ಒಬಾಮಾ ವಿಟೋ ನೀಡಿದ್ದಾರೆ. ಸೌದಿ ಅರೇಬಿಯಾ ಅಮೆರಿಕದ ಮಿತ್ರರಾಷ್ಟ್ರವಾಗಿದ್ದು, ಇಂತಹ ಮಸೂದೆಯಿಂದ ಅಮೆರಿಕದ ಹಿತಾಸಕ್ತಿಗಳಿಗೆ ಧಕ್ಕೆಯಾಗಬಹುದೆಂಬ ಆತಂಕದ ಹಿನ್ನೆಲೆಯಲ್ಲಿ ಒಬಾಮಾ ಈ ಕ್ರಮ ಕೈಗೊಂಡಿದ್ದಾರೆ.
ಭಯೋತ್ಪಾದನೆ ಪ್ರಾಯೋಜಕರ ವಿರುದ್ಧ ನ್ಯಾಯ ಕಾಯ್ದೆ(ಜೆಎಎಸ್ಟಿಎ)ಮಸೂದೆಯು ರಿಪಬ್ಲಿಕನ್ ನಿಯಂತ್ರಣದ ಕಾಂಗ್ರೆಸ್(ಸಂಸತ್ತು)ನ ಎರಡೂ ಚೇಂಬರ್ಗಳಲ್ಲಿ ಪಾಸಾಗಿತ್ತು. ಇದು ಸಾರ್ವಭೌಮತೆಗೆ ಸಂಬಂಸಿ ದೀರ್ಘಕಾಲದಿಂದ ತಳೆಯಲಾಗಿದ್ದ ಅಂತಾರಾಷ್ಟ್ರೀಯ ನೀತಿಗಳಿಗೆ ಧಕ್ಕೆ ಉಂಟು ಮಾಡುವ ಸಾಧ್ಯತೆಯಿದೆಯಲ್ಲದೆ, ಸಾಗರೋತ್ತರದಲ್ಲಿನ ದೇಶಗಳಲ್ಲಿರುವ ಅಮೆರಿಕ ಹಿತಾಸಕ್ತಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಅಪಾಯವಿದೆ ಎಂದು ಒಬಾಮಾ ಶುಕ್ರವಾರ ಹೇಳಿದರು.
9\11ರ ದಾಳಿಯ ಭಯೋತ್ಪಾದಕರಿಗೆ ಸೌದಿ ಅರೇಬಿಯಾದಿಂದ ಆರ್ಥಿಕ ಪ್ರಾಯೋಜಕತ್ವ ಲಭಿಸಿದೆ ಎಂದು ಆರೋಪಿಸಿ ಸಂತ್ರಸ್ತರ ಗುಂಪೊಂದು ಸೌದಿ ಅರೇಬಿಯಾ ವಿರುದ್ಧ ದಾವೆಗೆ ಮುಂದಾಗಿತ್ತು.
Discussion about this post