ನವದೆಹಲಿ, ಸೆ.19: ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್ ನಲ್ಲಿ ಭಯೋತ್ಪಾದಕರ ದಾಳಿಗೆ 20 ಯೋಧರು ಹುತಾತ್ಮರಾದ ಬೆನ್ನಲ್ಲೇ, ಹಂದ್ವಾರ ಪೊಲೀಸ್ ಚೆಕ್ ಪೋಸ್ಟ್ ಮೇಲೆ ಉಗ್ರರ ದಾಳಿ ನಡೆದ ಕುರಿತು ವರದಿಯಾಗಿದೆ.
ಜಮ್ಮು ಕಾಶ್ಮೀರದಲ್ಲಿರುವ ಹಂದ್ವಾರದ ಚೆಕ್ ಪೋಸ್ಟ್ ಮೇಲೆ ಈಗ್ಗೆ ಕೆಲವು ಗಂಟೆಗಳ ಮುನ್ನ ಭಯೋತ್ಪಾದಕರು ದಾಳಿ ನಡೆಸಿರುವ ಕುರಿತು ರಾಷ್ಟ್ರೀಯ ಮಾದ್ಯಮವೊಂದು ವರದಿ ಮಾಡಿದೆ. ಆದರೆ, ದಾಳಿ ಕುರಿತು ಸ್ಪಷ್ಟ ಮಾಹಿತಿಗಳೂ ಇನ್ನೂ ದೊರೆಯಬೇಕಿದೆ. ಎಷ್ಟು ಮಂದಿ ಉಗ್ರರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಎಷ್ಟು ಮಂದಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಇನ್ನೂ ದೊರೆತಿಲ್ಲ.
ಹಂದ್ವಾರ ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿದೆ. ಶ್ರೀನಗರದಿಂದ ಸುಮಾರು 70 ಕಿಮೀ ದೂರದಲ್ಲಿದ್ದು, ಎಲ್ ಒಸಿಗೆ ಸನಿಹವಿದೆ.
ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ…













