ಶಿವಮೊಗ್ಗ: ಸೆ:12; ಮಾಜಿ ಸಚಿವ ಹರತಾಳು ಹಾಲಪ್ಪ ಅವರ ಮೇಲೆ ಅತ್ಯಾಚಾರ ಆರೋಪ ಹೊರಿಸಿದ್ದ ವೆಂಕಟೇಶ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅತ್ಯಾಚಾರ ಆರೋಪದ ಮೇಲೆ ಅವರನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ. ಕೆಲಸ ಕೊಡಿಸುವುದಾಗಿ ನಂಬಿಸಿ ಅತ್ಯಾಚಾರ ನಡೆಸಿದ್ದಾರೆ ಎಂದು ಮಹಿಳೆಯೊಬ್ಬರು ಚಂದ್ರಾವತಿ ಅವರ ಪತಿ ವೆಂಕಟೇಶಮೂತರ್ಿ ಅವರ ವಿರುದ್ಧ ಶಿವಮೊಗ್ಗ ನಗರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಆದ್ದರಿಂದ, ವೆಂಕಟೇಶಮೂತರ್ಿ ಅವರನ್ನು ವಶಕ್ಕೆ ಪಡೆಯಲಾಗಿದೆ. ವೆಂಕಟೇಶಮೂತರ್ಿ ದಂಪತಿ ಮನೆ ಮೇಲೆ ದಾಳಿ ಕೆಲಸ ಕೊಡಿಸುವುದಾಗಿ ವೆಂಕಟೇಶಮೂತರ್ಿ ಅವರು ಬೆಂಗಳೂರಿನಿಂದ ಮಹಿಳೆಯನ್ನು ಕರೆತಂದಿದ್ದರು. ಭಾನುವಾರ ಸಂಜೆ ಆಕೆಯನ್ನು ಎಪಿಎಂಸಿ ಬಳಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾರೆ ಎಂಬುದು ಆರೋಪವಾಗಿದೆ. ಮಹಿಳೆ ನೀಡಿದ ದೂರಿನ ಅನ್ವಯ ವೆಂಕಟೇಶಮೂತರ್ಿ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಮಾಜಿ ಸಚಿವ, ಬಿಜೆಪಿಯ ಹಾಲಪ್ಪ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ (2010ರ ಮೇನಲ್ಲಿ) ಚಂದ್ರಾವತಿಯ ಪತಿ ವೆಂಕಟೇಶ್ ಅವರ ಮೇಲೆ ಈ ಸಂದರ್ಭದಲ್ಲಿ ಹತ್ಯಾಯತ್ನವೂ ನಡೆದಿದೆ ಎನ್ನಲಾಗಿದೆ. ಈ ಹಲ್ಲೆ ಪ್ರಕರಣವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಹಾಲಪ್ಪ ಅತ್ಯಾಚಾರ ನಡೆಸಿದ್ದಾರೆ ಎಂದು ಹೈದರಾಬಾದಿನ ಲ್ಯಾಬ್ ವರದಿ ನೀಡಿದೆ. ಎರಡೆರಡು ಬಾರಿ ಪರೀಕ್ಷೆ ನಡೆಸಿ ಇದನ್ನು ದೃಢಪಡಿಸಲಾಗಿದೆ ಎಂದು ಸಿಐಡಿ ಮೂಲಗಳು ಹೇಳಿವೆ. ಆರೋಪಿ ಹಾಲಪ್ಪನ ಪಂಚೆಯಲ್ಲಿ ಆತನ ವೀರ್ಯ ಪತ್ತೆಯಾಗಿದೆ. ಅದೇ ವೀರ್ಯ ಮಹಿಳೆಯ (ಚಂದ್ರಾವತಿಯ) ಒಳ ಉಡುಪು, ನೈಟಿ ಮತ್ತು ಬೆಡ್ಶೀಟಿನಲ್ಲಿ ಪತ್ತೆಯಾಗಿದೆ. ಡಿಎನ್ಎ ಪರೀಕ್ಷೆಯಲ್ಲೂ ಈ ಅಂಶ ದೃಢಪಟ್ಟಿದೆ ಎನ್ನಲಾಗಿದೆ.















