Read - < 1 minute
ನ್ಯೂಜೆರ್ಸಿ: ಸೆ:26: ಸದಾ ವಿವಾದಾತ್ಮಕ ಹೇಳಿಕೆಯಿಂದ ಭಾರೀ ಸುದ್ದಿಯಾಗುತ್ತಿರುವ ರಿಪಬ್ಲಿಕನ್ ಪಕ್ಷದ ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಇದ್ದಕ್ಕಿದ್ದಂತೆ ಭಾರತದ ಹಿಂದು ಸಮುದಾಯವನ್ನು ಹೊಗಳಿದ್ದಾರೆ.
ಹಿಂದು ಸಮುದಾಯವು ವಿಶ್ವದ ನಾಗರಿಕತೆಗೆ ಹಾಗೂ ಅಮೆರಿಕದ ಸಾಂಸ್ಕೃತಿಕ ಕ್ಷೇತ್ರಕ್ಕೆ ವಿಶೇಷವಾದ ಕೊಡುಗೆ ನೀಡಿದೆ ಎಂದು ಟ್ರಂಪ್ ಕೊಂಡಾಡಿದ್ದಾರೆ.
ಮುಂದಿನ ತಿಂಗಳು 15ರಂದು ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆಯಲಿರುವ ಇಂಡೋ-ಅಮೆರಿಕನ್ ಸಭೆಯಲ್ಲಿ ನಾನು ಉತ್ಸಾಹದಿಂದ ಭಾಗವಹಿಸುತ್ತಿದ್ದೇನೆ ಎಂದರು.
ನ್ಯೂಜೆರ್ಸಿಯ ಪಿಎನ್ಸಿ ಆರ್ಟ್ ಸೆಂಟರ್ನಲ್ಲಿ ನಡೆಯಲಿರುವ ರಿಪಬ್ಲಿಕನ್ ಹಿಂದೂ ಒಕ್ಕೂಟ ಸಭೆಯಲ್ಲಿ ಭಾಗವಹಿಸಲು ಎದುರು ನೋಡುತ್ತಿದ್ದೇನೆ ಎಂದು ಟ್ರಂಪ್ ವಿಡಿಯೋ ಮೆಸೇಜ್ ಮೂಲಕ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ 70 ವರ್ಷದ ಟ್ರಂಪ್ ಈ ಸಭೆಯಲ್ಲಿ ಸಾವಿರಾರು ಇಂಡೋ-ಅಮೆರಿಕನ್ ಜನರ ಎದುರು ಭಾಷಣ ಮಾಡಲು ಕಾತುರನಾಗಿದ್ದು , ಪ್ರತಿಯೊಬ್ಬರನ್ನು ನೋಡಲು ತುದಿಗಾಲಲ್ಲಿ ನಿಂತಿದ್ದೇನೆ. ಇದೊಂದು ಅತಿ ವಿಶ್ವಾಸನೀಯ ಸಭೆ ಎಂದು ತಿಳಿಸಿದರು.
ಬಾಲಿವುಡ್ ಸಂಗೀತಗಾರರು, ನಟ-ನಟಿಯರು, ಹಿಂದೂ ಧಾರ್ಮಿಕ ಮುಖಂಡರು ಇದರಲ್ಲಿ ಭಾಗವಹಿಸುತ್ತಾರೆ. ಪರಂಪರೆ, ಸಂಸ್ಕೃತಿ ಸೇರಿದಂತೆ ನಾನಾ ಕಾರ್ಯಕ್ರಮಗಳು ನಡೆಯಲಿವೆ. ರಿಪಬ್ಲಿಕನ್ ಹಿಂದೂ ಒಕ್ಕೂಟವನ್ನು ಭಾರತ ಮೂಲದ ಶಾಲಿಕುಮಾರ್ ಸ್ಥಾಪಿಸಿದ್ದಾರೆ. ಹೀಗಾಗಿ ಇಂಡೋ-ಅಮೆರಿಕನ್ ನಡುವೆ ಸಂಬಂಧ ವೃದ್ಧಿಸಿಕೊಳ್ಳಲು ಈ ಸಭೆ ಅತಿ ಮಹತ್ವದ್ದಾಗಿದೆ.
Discussion about this post