Read - < 1 minute
ಉಡುಪಿ, ಆ.29: ರಾಷ್ಠ್ರೀಯ ಸ್ವಯಂ ಸೇವಕ ಸಂಘ ಕಾಪು ತಾಲೂಕು ಮಟ್ಟದ ಶಾಖೆಗಳ ಸ್ವಯಂ ಸೇವಕರ ತಂಡಗಳ ಮುಕ್ತ “ಕಬಡ್ಡಿ ಪಂದ್ಯಾಟ”ಸ್ಫರ್ಧೆ ಬಂಟಕಲ್ಲು- 92ಹೇರೂರು ಕ್ರೀಡಾಂಗಣದಲ್ಲಿ ರವಿವಾರ ಪೂರ್ವಾಹ್ನ ಜರುಗಿದವು. ಪ್ರತೀ ವರ್ಷ ಒಂದೊಂದು ಊರಿನ ಶಾಖೆಯ ನೇತೃತ್ವದಲ್ಲಿ ಈ ಪಂದ್ಯಾಟಗಳು ಜರುಗುತ್ತಿವೆ.
ಶಾಖೆಗಳಲ್ಲಿ ಸಂಘಟನೆಗೆ ಒತ್ತು ನೀಡಿ,ವ್ಯಕ್ತಿಗಳನ್ನು ರಾಷ್ಠ್ರ ಹಿತಕ್ಕಾಗಿ ಜೋಡಿಸುವ ಕಾರ್ಯವನ್ನು ಸಂಘ ಶಾಖೆಗಳು ನಡೆಸುತ್ತಿವೆ. ನಿತ್ಯ ಶಾಖೆಗೆ ಬರುವ ಕಬಡ್ಡಿ ವ್ಯಕ್ತಿಗಳನ್ನು ಜೋಡಿಸಿ ತಂಡಗಳನ್ನಾಗಿ ರಚಿಸಿ ಸಂಘಟಿತ ಗುಣವನ್ನು ವೃದ್ಧಿಸಿ ದೇಶ ಕಾರ್ಯಕ್ಕೆ ಸಹಕಾರಿಯಾಗುವಂತೆ ಉತ್ತೇಜನ ನೀಡಲು ಈ ಪಂದ್ಯಾಟಗಳನ್ನು ನಡೆಸಲಾಗುತ್ತಿದೆ.
ಕಾಪು ತಾಲೂಕು ಸಂಘ ಚಾಲಕ್ ಮಾನ್ಯ ತಾರನಾಥ್ ಕೊಟ್ಯಾನ್ ಪಂದ್ಯಾಟಕ್ಕೆ ಚಾಲನೆ ನೀಡಿದರು. ಮಂಗಳೂರು/ಶಿವಮೊಗ್ಗ ವಿಭಾಗದ ಘೋಷ್ ಪ್ರಮುಖ್ ಸತೀಶ್ ಕುತ್ಯಾರು, ಉಡುಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪಾಂಡುರಂಗ ಶಾನುಭಾಗ್ ಪಾಂಗಾಳ, ಜಿಲ್ಲಾಬೌದ್ಧಿಕ್ ಪ್ರಮುಖ್ ಸುರೇಶ್ ಹೆಜ್ಮಾಡಿ, ಸುದರ್ಶನ್ ಪಡುಬಿದ್ರೆ ಉಪಸ್ಥಿತರಿದ್ದರು.
ಸಚ್ಚಿನ್ ಬೆಳ್ಳೆ, ಸ್ಥಳೀಯ ಸ್ವಯಂ ಸೇವಕರಾದ ಸುಬ್ರಹ್ಮಣ್ಯ ವಾಗ್ಲೆ, ಶಿವಪ್ರಸಾದ್ ಬಂಟಕಲ್ಲು, ವರುಣ್ ಹೇರೂರು, ಚೇತನ್,ಆದರ್ಶ ಪಾಟ್ಕರ್,ವೀರೇಂದ್ರ ಪಾಟ್ಕರ್ ಸಹಕರಿಸಿದರು. ಸ್ಫರ್ಧೆಯಲ್ಲಿ 7 ಬಾಲಕರ ತಂಡಗಳು, 5 ತರುಣರ ತಂಡಗಳು ಭಾಗವಹಿಸಿದ್ದವು. 92 ಹೇರೂರು ಪರಿಸರದ ಮಾತೆಯರು ಪೂರ್ವಾಹ್ನದ ಉಪಾಹಾರ, ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಿದ್ದರು. ಇನ್ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಪಾಲ್ಗೊಂಡಿದ್ದರು.
Discussion about this post