ನವದೆಹಲಿ, ಸೆ.೧೨: ಕಾವೇರಿ ನದಿ ನೀರು ವಿಚಾರಕ್ಕೆ ಸಂಬಂಧಿಸಿದಂತೆ ಪುನರ್‌ಪರಿಶೀಲನಾ ಅರ್ಜಿ ವಿಚಾರಣೆ ಇಂದು ಸಪ್ರೀಮ್ ಕೋರ್ಟ್‌ನಲ್ಲಿ ನಡೆದು, ಪ್ರತಿನಿತ್ಯ ೧೨ ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶ ಹೊರಬಿದ್ದಿದೆ.
ಈ ಮೊದಲು ಸೆ.೨೦ರವರೆಗೆ ೧೫ ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶಿಸಿದ್ದ ಕೋರ್ಟ್, ಈಗ ೩ ಸಾವಿರ ಕ್ಯೂಸೆಕ್ಸ್ ಕಡಿಮೆ ಮಾಡಿದೆ. ಇದರಿಂದ ಕರ್ನಾಟಕಕ್ಕೆ ತಕ್ಷಕಮಟ್ಟಿನ ನಿರಾಳವಾಗಿದೆ.
ರಾಜ್ಯದ ಪರವಕೀಲ ಫಾಲಿ ನಾರಿಮನ್ ಇಲ್ಲಿಯ ಕಷ್ಟಕರ ಪರಿಸ್ಥಿಯನ್ನು ಕೋರ್ಟ್ ಮುಂದೆ ತೆರೆದಿಟ್ಟು, ಹಿಂದಿನ ಆದೇಶಕ್ಕೆ ತಡೆ ನೀಡಬೇಕೆಂದು ಕೋರಿದರು. ಇದಕ್ಕೆ ತಮಿಳುನಾಡು ವಕೀಲ ಶೇಖರ್ ನಫಡೆ ಆಕ್ಷೇಪವ್ಯಕ್ತಪಡಿಸಿ,ಕರ್ನಾಟಕ ಏಕ ಪಕ್ಷೀಯವಾಗಿ ಮೇಲ್ಮನವಿ ಸಲ್ಲಿಸಿದೆ. ಉಭಯ ರಾಜ್ಯಗಳಿಗೂ ನೀರು ಸರಿಸಮಾನವಾಗಿ ಹಂಚಿಕೆಯಾಗಬೇಕು ಎಂದು ವಾದಿಸಿದರು.
ಆನಂತರ ನ್ಯಾಯಮೂರ್ತಿ ದೀಪಕ್ ಮಿಶ್ರಾ ೧೨ ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶಿಸಿತು.
ಆದರೆ, ಮೊದಲು ೧೦ ಸಾವಿರ ಕ್ಯೂಸೆಕ್ಸ್ ಆದೇಶ ನೀಡಿದರು. ಇದನ್ನು ತಮಿಳುನಾಡು ವಕೀಲರು ತೀವ್ರವಾಗಿ ವಿರೋಧಿಸಿದ್ದರಿಂದ ೧೨ ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ತೀರ್ಪನ್ನು ಬದಲಿಸಿದರು.













