ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಅಬಕಾರಿ ನೀತಿ ಹಗರಣದಲ್ಲಿ ಇಡಿ ಬಂಧನದಲ್ಲಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ #AravindKejriwal ಅವರಿಗೆ ಖಲಿಸ್ತಾನ್ ಭಯೋತ್ಪಾದಕರ ಗುಂಪುಗಳು ಸುಮಾರು 133 ಕೋಟಿ ರೂ.ಗಳಷ್ಟು ಹಣ ನೀಡಿವೆ ಎಂದು ಹೇಳಲಾಗಿದೆ.
ಈ ಕುರಿತಂತೆ ಖಲಿಸ್ತಾನ್ #Khalistan ಭಯೋತ್ಪಾದಕ ಗುರುಪತ್ವಂತ್ ಪನ್ನುನ್ ಹೇಳಿಕೊಂಡಿದ್ದು, 2014 ಮತ್ತು 2022 ರ ನಡುವೆ ಖಲಿಸ್ತಾನಿ ಗುಂಪುಗಳು ಕೇಜ್ರಿವಾಲ್ ಅವರ ಎಎಪಿಗೆ ರೂ. 133 ಕೋಟಿಗಳಷ್ಟು ಹಣವನ್ನು ನೀಡಿವೆ ಎಂದಿದ್ದಾನೆ.
ಹಣಕ್ಕಾಗಿ ಕೇಜ್ರಿವಾಲ್ ದೇವಿಂದರ್ ಪಾಲ್ ಸಿಂಗ್ ಭುಲ್ಲರ್ ಅವರನ್ನು ಬಿಡುಗಡೆ ಮಾಡಲು ಮುಂದಾದರು ಎಂದು ಅವರು ಹೇಳಿದ್ದಾರೆ.
ಭುಲ್ದರ್ 1993 ರ ದೆಹಲಿ ಬೈಸ್ಟ್ ಪ್ರಕರಣದಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದರು ಮತ್ತು 31 ಮಂದಿ ಗಾಯಗೊಂಡಿದ್ದರು. ಚುನಾವಣೆಗೆ ಹಣ ನೀಡಲು ಈ ಹಣವನ್ನು ನೀಡಲಾಗಿದೆ ಎಂದು ಪನ್ನೂನ್ ಹೇಳಿದ್ದಾನೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post