ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ತಾಲೂಕಿನಾದ್ಯಂತ ಇಂದು 7 ಮಂದಿಯಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.
ಬೋವಿ ಕಾಲೋನಿಯಲ್ಲಿ 2, ಅರಣ್ಯ ಇಲಾಖೆ ಕಚೇರಿಯ ಬಳಿಯ 2 ನಿವಾಸಿಗಳು, ನೃಪತುಂಗ ನಗರ 2, ಬಸವಾಪುರ ಮೂರು ವರ್ಷದ ಮಗು ಹಾಗೂ ಓರ್ವ ವೃದ್ಧನಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ.
ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಬುಲೆಟಿನ್ ಪ್ರಕಾರ ತಾಲೂಕಿನಲ್ಲಿ ಇಂದು ಒಟ್ಟು 14 ಪ್ರಕರಣಗಳು ಪತ್ತೆಯಾಗಿವೆ. ಆದರೆ, ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆಯಿಂದ ಮಾಧ್ಯಮಗಳಿಗೆ ಲಭ್ಯವಾಗಿರುವ ವಿವರ ಕೇವಲ ಎಂಟು ಮಾತ್ರ. ಉಳಿದ ಪ್ರಕರಣಗಳು ಎಲ್ಲಿ ಎಂಬುದು ತಿಳಿದುಬಂದಿಲ್ಲ.
ಕಾರೇಹಳ್ಳಿ ವೃದ್ಧ ನಿಧನ
ಇನ್ನು, ಕೊರೋನಾ ಸೋಂಕು ತಗುಲಿದ್ದ ಕಾರೇಹಳ್ಳಿಯ ವೃದ್ಧನೊಬ್ಬ ಇಂದು ಮೃತಪಟ್ಟಿದ್ದಾರೆ. ಆವರ ಪತ್ನಿಗೂ ಸಹ ಸೋಂಕು ದೃಢಪಟ್ಟಿದ್ದು ಆಕೆಯನ್ನು ಐಸೋಲೇಶನ್’ನಲ್ಲಿ ಇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಸೋಂಕಿತರ ನಿವಾಸದ ಸ್ಥಳಗಳಿಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ, ನಗರಸಭೆ ಆಯುಕ್ತ ಮನೋಹರ್ ಮುಂತಾದವರು ಭೇಟಿ ನೀಡಿದ್ದಾರೆ.
Get In Touch With Us info@kalpa.news Whatsapp: 9481252093















