ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಕೊರೋನಾ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಫೂರ್ಣ ಸ್ಥಗಿತಗೊಂಡಿದ್ದ ಭಾರತೀಯ ರೈಲು ಸಂಚಾರ, ಮೇ 12ರ ನಾಳೆಯಿಂದ ಆಯ್ದ ಕಡೆ ಮರು ಆರಂಭಗೊಳ್ಳಲಿದೆ.
ದೇಶದಾದ್ಯಂತ 15 ಪ್ರಮುಖ ಮಾರ್ಗಗಳಲ್ಲಿ ರೈಲು ಸಂಚಾರ ಆರಂಭಗೊಳ್ಳಲಿದೆ ಎಂದು ರೈಲ್ವೆ ಇಲಾಖೆ ಹೇಳಿದೆ. ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಎಲ್ಲ ಪ್ರಯಾಣಿಕ ರೈಲುಗಳ ಸಂಚಾರವನ್ನು ಮಾ.25 ರಿಂದ ರದ್ದುಗೊಳಿಸಲಾಗಿತ್ತು. ಇಂದು ಸಂಜೆ 4 ಗಂಟೆಯಿಂದ ಟಿಕೇಟ್ ಬುಕ್ಕಿಂಗ್ ಆರಂಭಗೊಳ್ಳಲಿದ್ದು, https://www.irctc.co.in/ ಲಿಂಕ್’ನಲ್ಲಿ ಬುಕ್ ಮಾಡಿಕೊಳ್ಳಬಹುದಾಗಿದೆ.
ಯಾವ ಮಾರ್ಗಗಳಲ್ಲಿ ರೈಲು ಸಂಚಾರ?
1. ನವದೆಹಲಿ-ದಿಬ್ರುಗನಗರ-ನವದೆಹಲಿ
2. ನವದೆಹಲಿ-ಅಗರ್ತಲಾ-ನವದೆಹಲಿ
3. ನವದೆಹಲಿ-ಹೌರಾ-ನವದೆಹಲಿ
4. ನವದೆಹಲಿ-ಪಾಟ್ನಾ-ನವದೆಹಲಿ
5. ನವದೆಹಲಿ-ಬಿಲಾಸುರ್-ನವದೆಹಲಿ
6. ನವದೆಹಲಿ-ರಾಂಚಿ-ನವದೆಹಲಿ
7. ನವದೆಹಲಿ-ಭುವನೇಶ್ವರ-ನವದೆಹಲಿ
8. ನವದೆಹಲಿ-ಸಿಕಂದರಾಬಾದ್-ನವದೆಹಲಿ
9. ನವದೆಹಲಿ-ಬೆಂಗಳೂರು-ನವದೆಹಲಿ
10. ನವದೆಹಲಿ-ಚೆನ್ನೈ-ನವದೆಹಲಿ
11. ನವದೆಹಲಿ-ತಿರುವನಂತಪುರಂ-ನವದೆಹಲಿ
12. ನವದೆಹಲಿ-ಮಡ್ಗಾಂವ್-ನವದೆಹಲಿ
13. ನವದೆಹಲಿ-ಮುಂಬೈ ಮಧ್ಯ-ನವದೆಹಲಿ
14. ನವದೆಹಲಿ-ಅಹಮದಾಬಾದ್-ನವದೆಹಲಿ
15. ನವದೆಹಲಿ-ಜಮ್ಮು ತಾವಿ-ನವದೆಹಲಿ
Get in Touch With Us info@kalpa.news Whatsapp: 9481252093
Discussion about this post