ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ತಾಲೂಕಿನಾದ್ಯಂತ ಇಂದು ಬರೋಬ್ಬರಿ 16 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ನ್ಯೂಟೌನ್ ಗಣೇಶ ಕಾಲೋನಿಯ 42 ವರ್ಷದ ಮಹಿಳೆ, ದೇವ ನರಸೀಪುರದ 32 ಮಹಿಳೆ ಹಾಗೂ 6 ವರ್ಷದ ಬಾಲಕಿ, ಹುಡ್ಕೋ ಕಾಲೋನಿಯ 22 ವರ್ಷದ ಮಹಿಳೆ ಹಾಗೂ 48 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.
ಇನ್ನು, ಬೋವಿ ಕಾಲೋನಿ 4ನೆಯ ಕ್ರಾಸ್’ನ 65 ವರ್ಷದ ವೃದ್ಧ, ಹಾಲಪ್ಪ ಸರ್ಕಲ್ ವಿಜಯಾ ಬ್ಯಾಂಕ್ ಬಳಿಯ 29 ವರ್ಷದ ಪುರುಷ, ಬಾರಂದೂರು 44 ವರ್ಷದ ಮಹಿಳೆಯಲ್ಲಿ ಕೊರೋನಾ ಪಾಸಿಟಿವ ಬಂದಿದೆ.
ಹೊಸಮನೆ ಮುಖ್ಯರಸ್ತೆಯ ಮಾರಿಯಮ್ಮ ದೇವಾಲಯದ ಬಳಿಯ 50 ವರ್ಷದ ಪುರುಷ, ಹೊಸಮನೆ 4ನೆಯ ಅಡ್ಡರಸ್ತೆಯ 75 ವರ್ಷದ ಪುರುಷ, ಖಲಂದರ್ ನಗರದ 66 ವರ್ಷದ ಮಹಿಳೆ ಹಾಗೂ 74 ವರ್ಷದ ಪುರುಷನಲ್ಲಿ ಸೋಂಕು ದೃಡಪಟ್ಟಿದೆ.
ಶಿವರಾಂನಗರದಲ್ಲಿ ನಾಲ್ಕು ಪ್ರಕರಣ
ಇನ್ನು, ಶಿವರಾಂ ನಗರದ 17 ವರ್ಷದ ಯುವತಿ, 19 ವರ್ಷದ ಯುವಕ, 50 ವರ್ಷದ ಮಹಿಳೆ ಹಾಗೂ 38 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ.
ಸೋಂಕಿತರ ನಿವಾಸದ ಸ್ಥಳಗಳಿಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ, ನಗರಸಭೆ ಆಯುಕ್ತ ಮನೋಹರ್, ಆರೋಗ್ಯ ಇಲಾಖೆ ಸಿಬ್ಭಂದಿ ನೀಲೇಶ್ ರಾಜ್, ಪೋಲಿಸ್ ಅಧಿಕಾರಿಗಳು ನಗರಸಭೆ ಇಂಜಿನಿಯರ್‌ಗಳು ಭೇಟಿ ನೀಡಿ ಸದರಿ ಸ್ಥಳಗಳನ್ನು ಸೀಲ್ ಡೌನ್ ಮಾಡಿ ಸೋಂಕಿತರನ್ನು ಶಿವಮೊಗ್ಗದ ಕೋವಿಡ್ ಚಿಕಿತ್ಸಾ ಘಟಕಕ್ಕೆ ರವಾನಿಸಿದರು.
Get In Touch With Us info@kalpa.news Whatsapp: 9481252093
Discussion about this post