ಕಲ್ಪ ಮೀಡಿಯಾ ಹೌಸ್ | ಮಿಜೋರಾಂ |
ಕಳೆದ ತಿಂಗಳು ಭಾರತೀಯ ರೈಲ್ವೆ #IndianRailway ನಕ್ಷೆಗೆ ಸೇರಿಕೊಂಡ ಮಿಜೋರಾಂ ರಾಜ್ಯದ ನೂತನ ರೈಲು ಮಾರ್ಗ ಯಶಸ್ವಿಯಾಗಿದ್ದು, ಇಲ್ಲಿಗೆ ಸಂಚರಿಸುವ ಎಲ್ಲ ರೈಲುಗಳೂ ಸಹ ಪ್ರಯಾಣಿಕರ ದಟ್ಟಣೆಯಿಂದ ಕೂಡಿವೆ.
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಿಜೋರಾಂ ರಾಜ್ಯಕ್ಕೆ ಕೇಂದ್ರ ಸರ್ಕಾರ ಸುಮಾರು 8029 ಕೋಟಿ ರೂ. ಅನುದಾನ ನೀಡಿ ಅದ್ಬುತವಾದ ರೈಲು ಮಾರ್ಗವನ್ನು ನಿರ್ಮಿಸಿದೆ. ಐಜ್ವಾಲ್ #Aizawl ಬಳಿಯ ಸೈರಾಂಗ್’ನಿಂದ ಸುಮಾರು 52 ಕಿಮೀ ದೂರದ ಬೈರಾಬಿಗೆ #Bairabi ನೂತನ ರೈಲು ಮಾರ್ಗವನ್ನು ನಿರ್ಮಿಸಿದ್ದು, ಇದನ್ನು ಪ್ರಧಾನಿ ನರೇಂದ್ರ ಮೋದಿಯವರು ಸೆ.13ರಂದು ಉದ್ಘಾಟಿಸಿದ್ದರು.
ರೈಲು ಸರಕು ಸಾಗಣೆ ಸೇವೆಗಳು ಈಶಾನ್ಯ ಜನರ ಜೀವನವನ್ನು ಸುಗಮಗೊಳಿಸುತ್ತವೆ. ಹೊಸ ರೈಲ್ವೆ ಮಾರ್ಗಗಳು ಸ್ಥಳೀಯ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಪ್ರವೇಶವನ್ನು ಮತ್ತು ವ್ಯಾಪಾರ, ಉದ್ಯೋಗಕ್ಕೆ ಹೊಸ ಅವಕಾಶಗಳನ್ನು ಭರವಸೆ ಸೃಷ್ಠಿ ಮಾಡಿವೆ.
ಮಿಜೋರಾಂನಲ್ಲಿ ಬೈರಾಬಿ – ಸೈರಾಂಗ್ ರೈಲ್ವೆ ಮಾರ್ಗವನ್ನು ಕಾರ್ಯಾರಂಭ ಮಾಡಿದ ನಂತರ ಮತ್ತು ನಾಗಾಲ್ಯಾಂಡ್’ನ #Nagaland ಮೊಲ್ವೊಮ್’ನಿಂದ ಸರಕು ಸಾಗಣೆ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದ ನಂತರ ರೈಲ್ವೆ ಪ್ರಯಾಣಿಕರು ಮತ್ತು ಸರಕು ಸಾಗಣೆ ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಮಾರ್ಗದಲ್ಲಿ ರೈಲು ಪ್ರಯಾಣಿಕರ ಹಾಗೂ ಗೂಡ್ಸ್ ರೈಲು ಸಂಚಾರ ಆರಂಭವಾದ ಕೆಲವೇ ವಾರಗಳಲ್ಲಿ ಗಮನಾರ್ಹವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸೆ.13ರಂದು ಸೈರಾಂಗ್’ನಿಂದ ರೈಲು ಸೇವೆಗಳನ್ನು ಆರಂಭಿಸಿದ ನಂತರ ಪ್ರಯಾಣಿಕರಿಂದ ಅಪಾರವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಮುಖವಾಗಿ ಬಹುತೇಕ ಎಲ್ಲಾ ರೈಲುಗಳೂ ಸಹ ಪೂರ್ಣವಾಗಿ ಸಂಚರಿಸುತ್ತಿವೆ.
ರೈಲು ಸಂಖ್ಯೆ 20507 (ಸೈರಾಂಗ್ – ಆನಂದ್ ವಿಹಾರ್ ಟರ್ಮಿನಲ್, ದೆಹಲಿ) ರಾಜಧಾನಿ ಎಕ್ಸ್’ಪ್ರೆಸ್ ಶೇ.162.5% ಜನದಟ್ಟಣೆಯನ್ನು ದಾಖಲಿಸಿದರೆ, ಅದರ ರಿಟರ್ನ್ ಸೇವೆಯಾದ ರೈಲು ಸಂಖ್ಯೆ 20508 (ಆನಂದ್ ವಿಹಾರ್ ಟರ್ಮಿನಲ್, ದೆಹಲಿ – ಸೈರಾಂಗ್) ರಾಜಧಾನಿ ಎಕ್ಸ್’ಪ್ರೆಸ್ 158.3% ಜನರಿಂದ ತುಂಬಿದ್ದು ದಾಖಲೆಯಾಗಿದೆ.

ಇನ್ನು, ಗುವಾಹಟಿಗೆ ಹೋಗುವ 15609 ಸಂಖ್ಯೆಯ ಗುವಾಹಟಿ – ಸೈರಾಂಗ್ ಎಕ್ಸ್’ಪ್ರೆಸ್ ರೈಲಿನಲ್ಲಿ ಸ್ಲೀಪರ್ ಕ್ಲಾಸ್ ಸೇರಿದಂತೆ ಶೇ.100.1ರಷ್ಟು ಬುಕ್ಕಿಂಗ್ ಮಾಡಲಾಗಿತ್ತು. ಇದರೊಂದಿಗೆ 15610 ಸಂಖ್ಯೆಯ ಸೈರಾಂಗ್ – ಗುವಾಹಟಿ ಎಕ್ಸ್’ಪ್ರೆಸ್ ಬಹುತೇಕ ಶೇ. 100% ಜನದಟ್ಟಣೆಯನ್ನು ದಾಖಲಿಸಿದೆ.
ಇದೇ ವೇಳೆ ಹೊಸದಾಗಿ ಪರಿಚಯಿಸಲಾದ ಕೋಲ್ಕತ್ತಾ ರೈಲುಗಳು ಸಹ ಅತ್ಯುತ್ತಮ ಪ್ರತಿಕ್ರಿಯೆ ಕಂಡಿವೆ. 13126 ಸಂಖ್ಯೆಯ ಸೈರಾಂಗ್ – ಕೋಲ್ಕತ್ತಾ ಎಕ್ಸ್’ಪ್ರೆಸ್ ಸುಮಾರು 100% ಜನಸಂದಣಿಯನ್ನು ವರದಿ ಮಾಡಿದೆ, ಆದರೆ ರಿಟರ್ನ್ ಸೇವೆ, 13125 ಸಂಖ್ಯೆಯ ಕೋಲ್ಕತ್ತಾ – ಸೈರಾಂಗ್ ಎಕ್ಸ್’ಪ್ರೆಸ್, ಶೇ.144.8% ಜನರನ್ನು ಒಳಗೊಂಡಿದ್ದು, ಸ್ಲೀಪರ್ ಕ್ಲಾಸ್ ಜನರ ಸಂಖ್ಯೆ ಸುಮಾರು ಶೇ.144% ಆಗಿತ್ತು.

ಈ ಪೂರಕ ಬೆಳವಣಿಗೆ ಮಿಜೋರಾಂಗೆ ಮತ್ತು ಅಲ್ಲಿಂದ ನೇರ ಮತ್ತು ವಿಶ್ವಾಸಾರ್ಹ ರೈಲು ಸಂಪರ್ಕಕ್ಕಾಗಿ ಬಲವಾದ ಬೇಡಿಕೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತವೆ.
ಇನ್ನು, ಸರಕು ಸಾಗಾಣಿಕೆ ವಿಚಾರದಲ್ಲಿ ಗಮನಿಸುವುದಾದರೆ, ಸೆ.30ರವರೆಗೂ ಸೈರಾಂಗ್ ನಿಲ್ದಾಣದಲ್ಲಿ ಒಟ್ಟು ಎಂಟು ರೇಕ್’ಗಳನ್ನು ಇಳಿಸಲಾಯಿತು. ಮೊದಲ ರೇಕ್ ಸೆ.14 ರಂದು ಗುವಾಹಟಿ ಬಳಿಯ ಟೆಟೆಲಿಯಾದ ಸಿಮೆಂಟ್ ಸೈಡಿಂಗ್’ನಿಂದ 21 ವ್ಯಾಗನ್’ಗಳ ಸಿಮೆಂಟ್ ಅನ್ನು ಹೊತ್ತೊಯ್ದಿತು. ಇದರ ನಂತರ ಮೂರು ರೇಕ್ ಕಲ್ಲಿನ ಚಿಪ್ಸ್, ಒಂದು ರೇಕ್ ಆಟೋಮೊಬೈಲ್’ಗಳು, ಒಂದು ರೇಕ್ ಆರ್’ಎಂಸಿ ಮತ್ತು ಬೈರಾಬಿಯಿಂದ ಒಂದು ರೇಕ್ ಮರಳು ಬಂದವು.
ಸೈರಾಂಗ್’ನಿಂದ ಮೊದಲ ಪಾರ್ಸೆಲ್ ಸರಕನ್ನು ಸೆ.19, 2025 ರಂದು ಬುಕ್ ಮಾಡಲಾಯಿತು. ಆಂಥೂರಿಯಂ ಹೂವುಗಳನ್ನು 20507 ಸಂಖ್ಯೆಯ ಸೈರಾಂಗ್ – ಆನಂದ್ ವಿಹಾರ್ ಟರ್ಮಿನಲ್, ದೆಹಲಿ ರಾಜಧಾನಿ ಎಕ್ಸ್’ಪ್ರೆಸ್’ನ ಪಾರ್ಸೆಲ್ ವ್ಯಾನ್ ಮೂಲಕ ಆನಂದ್ ವಿಹಾರ್ ಟರ್ಮಿನಲ್’ಗೆ ಸಾಗಿಸಲಾಗಿದ್ದು, ದಾಖಲೆ ಬರೆಯಿತು.

ಪ್ರಯಾಣಿಕ ಮತ್ತು ಸರಕು ಸೇವೆಗಳೆರಡಕ್ಕೂ ಹೆಚ್ಚುತ್ತಿರುವ ಬೇಡಿಕೆಯು ರೈಲ್ವೆ ಸಂಪರ್ಕವು ಈಶಾನ್ಯದಲ್ಲಿ ಜೀವನವನ್ನು ಹೇಗೆ ಪರಿವರ್ತಿಸುತ್ತಿದೆ ಎಂಬುದನ್ನು ತೋರಿಸುತ್ತದೆ. ಅನುಕೂಲತೆಯ ಹೊರತಾಗಿ, ಈ ಹೊಸ ಸಂಪರ್ಕಗಳು ಆರ್ಥಿಕ ಬೆಳವಣಿಗೆ, ಸ್ಥಳೀಯ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಪ್ರವೇಶ ಮತ್ತು ವ್ಯಾಪಾರ ಮತ್ತು ಉದ್ಯೋಗಕ್ಕೆ ಹೊಸ ಅವಕಾಶಗಳನ್ನು ಭರವಸೆ ನೀಡುತ್ತವೆ.
ಒಟ್ಟಿನಲ್ಲಿ ಮಿಜೋರಾಂನಲ್ಲಿ ಆರಂಭಗೊಂಡಿರುವ ಐತಿಹಾಸಿಕ ನೂತನ ರೈಲು ಮಾರ್ಗ ಹಾಗೂ ರೈಲುಗಳ ಸಂಚಾರ ಆ ರಾಜ್ಯ ಮಾತ್ರವಲ್ಲಿ ಇಡೀ ಈಶಾನ್ಯ ಭಾಗದ ಜನರ ಹಾಗೂ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ ಎಂಬ ಅಭಿಪ್ರಾಯವ್ಯಕ್ತವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post